ಪುಣ್ಚಪ್ಪಾಡಿ ನೇರೋಳ್ತಡ್ಕದಲ್ಲಿ ಆಯುಷ್ಮಾನ್ ಕಾರ್ಡ್ ನೋಂದಾವಣೆ ಶಿಬಿರ

Puttur_Advt_NewsUnder_1
Puttur_Advt_NewsUnder_1

ಸವಣೂರು : ಬಿಜೆಪಿ ಸುಳ್ಯ ಮಂಡಲ ,ಬೆಳಂದೂರು ಮಹಾಶಕ್ತಿ ಕೇಂದ್ರ,ಪುಣ್ಚಪ್ಪಾಡಿ ಶಕ್ತಿ ಕೇಂದ್ರ, ಸಮರ್ಥ ಜನಸೇವಾ ಟ್ರಸ್ಟ್ ಪುಣ್ಚಪ್ಪಾಡಿ ಇದರ ಆಶ್ರಯದಲ್ಲಿ ಸವಣೂರು ಯುವಕ ಮಂಡಲ,ಹಿಂದೂ ಜಾಗರಣ ವೇದಿಕೆ ಸವಣೂರು,ಜನಜಾಗೃತಿ ವೇದಿಕೆ ಸವಣೂರು ವಲಯ,ಶ್ರೀ ಗೌರಿ ಗಣೇಶ ಸೇವಾ ಸಂಘ ವಿನಾಯಕನಗರ ನೇರೋಳ್ತಡ್ಕ,ತನುಷ್ ಎಂಟರ್‌ಪ್ರೈಸಸ್ ಸವಣೂರು ಇದರ ಸಹಕಾರದಲ್ಲಿ ಪ್ರಧಾನ ಮಂತ್ರಿ ಆರೋಗ್ಯ ಯೋಜನೆಯ ಆಯುಷ್ಮಾನ್ ಕಾರ್ಡ್ ಅಭಿಯಾನದ ನೊಂದಣಿ ಹಾಗೂ ಕಾರ್ಡ್ ವಿತರಣೆ ಪುಣ್ಚಪ್ಪಾಡಿ ಗ್ರಾಮದ ನೇರೋಳ್ತಡ್ಕ ವಿನಾಯಕನಗರದ ಗೌರಿಸದನ ಸಭಾಭವನದಲ್ಲಿ ನಡೆಯಿತು.

ಕಾರ್ಯಕ್ರಮಕ್ಕೆ ಸುಳ್ಯ ವಿ.ಸ.ಕ್ಷೇತ್ರದ ಅಕ್ರಮ ಸಕ್ರಮ ಸಮಿತಿ ಸದಸ್ಯ ರಾಕೇಶ್ ರೈ ಕೆಡೆಂಜಿ ಚಾಲನೆ ನೀಡಿದರು.  ಬೆಳಂದೂರು ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಗಣೇಶ್ ಉದನಡ್ಕ ಅಧ್ಯಕ್ಷತೆ ವಹಿಸಿದ್ದರು.

ವೇದಿಕೆಯಲ್ಲಿ ಬಿಜೆಪಿ ಸುಳ್ಯ ಮಂಡಲ ಸಮಿತಿ ಕಾರ್ಯದರ್ಶಿ ಇಂದಿರಾ ಬಿ‌.ಕೆ,ಸವಣೂರು ಸಿಎ ಬ್ಯಾಂಕ್ ಅಧ್ಯಕ್ಷ ಗಣೇಶ್ ನಿಡ್ವಣ್ಣಾಯ,ಉಪಾಧ್ಯಕ್ಷ ತಾರಾನಾಥ ಸವಣೂರು,ನಿರ್ದೇಶಕರಾದ ಮಹಾಬಲ ಶೆಟ್ಟಿ ಕೊಮ್ಮಂಡ,ನಾರಾಯಣ ಗೌಡ ಪೂವ,ಸವಣೂರು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಸುಪ್ರಿತ್ ರೈ ಖಂಡಿಗ,ಸವಣೂರು ಗ್ರಾ.ಪಂ.ಮಾಜಿ ಉಪಾಧ್ಯಕ್ಷ ಪಿ.ಡಿ.ಗಂಗಾಧರ ರೈ ದೇವಸ್ಯ,ಗೌರಿ ಗಣೇಶ ಸೇವಾ ಸಂಘದ ಅಧ್ಯಕ್ಷ ಸಚಿನ್ ಕುಮಾರ್ ಜೈನ್,ಹಿಂದೂ ಜಾಗರಣ ವೇದಿಕೆಯ ಪುತ್ತೂರು ನಗರ ಸಮಿತಿಯ ಗೌರವಾಧ್ಯಕ್ಷ ಕುಂಜಾಡಿ ಪ್ರಕಾಶ್ಚಂದ್ರ ರೈ ಮುಗೇರುಗುತ್ತು,ಸವಣೂರು ವರ್ತಕರ ಸಂಘದ ಕಾರ್ಯದರ್ಶಿ ಸುರೇಶ್ ರೈ ಸೂಡಿಮುಳ್ಳು,ಸವಣೂರು ಹಿಂ.ಜಾ.ವೇ.ಅಧ್ಯಕ್ಷ ಶ್ರೀಧರ ಇಡ್ಯಾಡಿ,ಪುಣ್ಚಪ್ಪಾಡಿ ಬೂತ್ 68 ರ ಅಧ್ಯಕ್ಷ ಕರುಣಾಕರ ಸಾರಕರೆ ಉಪಸ್ಥಿತರಿದ್ದರು.

ಈ ಸಂಧರ್ಭ ಬಿಜೆಪಿ ವತಿಯಿಂದ ನೀಡಲಾದ ಮಾಸ್ಕ್ ನ್ನು ತಾರಾನಾಥ ಕಾಯರ್ಗ ವಿತರಿಸಿದರು. ಆಯುಷ್ಮಾನ್ ಯೋಜನೆಯ ಕಾರ್ಡ್ ನ್ನು ಇಂದಿರಾ ಬಿ.ಕೆ ಅವರು ಸಾಂಕೇತಿಕವಾಗಿ ವಿತರಿಸಿದರು.

ಈ ಸಂದರ್ಭ ಆಯುಷ್ಮಾನ್ ಕಾರ್ಡ್ ಉಚಿತವಾಗಿ ಮಾಡಿದ ತನುಷ್ ಎಂಟರ್‌ಪ್ರೈಸಸ್ ಸವಣೂರು ಇದರ ರವಿರಾಜ್ ಮತ್ತು ರಶ್ಮಿ ರವಿರಾಜ್ ಅವರಿಗೆ ಗೌರವಾರ್ಪಣೆ ಮಾಡಲಾಯಿತು.ಮಧ್ಯಾಹ್ನ ಊಟದ ವ್ಯವಸ್ಥೆ ಮಾಡಲಾಗಿತ್ತು.

ಗ್ರಾ.ಪಂ.ಮಾಜಿ ಸದಸ್ಯ ಗಿರಿಶಂಕರ ಸುಲಾಯ ಅವರು ಪ್ರಸ್ತಾವನೆಗೈದರು.ಅಖಿಲಾ ನೆಕ್ರಾಜೆ ಪ್ರಾರ್ಥಿಸಿದರು.ಸವಣೂರು ಜನಜಾಗೃತಿ ವೇದಿಕೆಯ ಅಧ್ಯಕ್ಷ ಮಹೇಶ್ ಕೆ.ಸವಣೂರು ಸ್ವಾಗತಿಸಿದರು.ಯತೀಶ್ ಕುಮಾರ್ ಕೆ. ವಂದಿಸಿದರು.ಶೀನಪ್ಪ ಶೆಟ್ಟಿ ನೆಕ್ರಾಜೆ ವಂದಿಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.