Breaking News

ನೆಕ್ಕಿಲಾಡಿ: ಆದರ್ಶನಗರ ಎಸ್‌ ಡಿ ಪಿ ಐ ವತಿಯಿಂದ ಆಯುಷ್ಮಾನ್ ಕಾರ್ಡ್ ನೋಂದಣಿ ಕಾರ್ಯಕ್ರಮ

Puttur_Advt_NewsUnder_1
Puttur_Advt_NewsUnder_1

 

ಉಪ್ಪಿನಂಗಡಿ: ಸೆ‌.6 ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಆದರ್ಶನಗರ ಬ್ರಾಂಚ್, ನೆಕ್ಕಿಲಾಡಿ ಇದರ ವತಿಯಿಂದ ಸುಮಾರು ಇನ್ನೂರಕ್ಕಿಂತಲೂ ಹೆಚ್ಚು ಅರ್ಹ ಫಲಾನುಭವಿಗಳಿಗೆ ಆಯುಷ್ಮಾನ್ ಭಾರತ್ ಕಾರ್ಡ್ ವಿತರಣೆ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.

ಕಾರ್ಯಕ್ರಮವನ್ನು ಆದರ್ಶನಗರ ಮುಈನುಲ್ ಇಸ್ಲಾಮ್ ಮದ್ರಸದ ಅಧ್ಯಕ್ಷರಾದ ಅಮೀರ್ ಜಾನ್ ಸಾಹೇಬ್ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಎಸ್‌ಡಿಪಿಐ ಉಪ್ಪಿನಂಗಡಿ ವಲಯದ ನಿಕಟಪೂರ್ವ ಅಧ್ಯಕ್ಷರಾದ ಅಬ್ದುಲ್ ರಝಾಕ್ ಸೀಮಾ ಮಾತನಾಡಿ ಆಯುಷ್ಮಾನ್ ಭಾರತ್ ಕಾರ್ಡ್ ಇದರ ಉಪಯೋಗದ ಬಗ್ಗೆ ಸವಿವರವಾಗಿ ತಿಳಿಸಿದರು, ಮತ್ತು ಎಸ್‌ಡಿಪಿಐ ಪಕ್ಷವು ಕಳೆದ ಹತ್ತು ವರ್ಷಗಳಿಂದ ಜನೋಪಯೋಗಿ ಕೆಲಸಗಳನ್ನು ನಿರಂತರವಾಗಿ ಮಾಡುತ್ತಾ ಬಂದಿದ್ದು, ಪಕ್ಷದ ಕಾರ್ಯವೈಖರಿಯನ್ನು ಕಂಡು ಹೆಚ್ಚಿನ ಸಂಖ್ಯೆಯಲ್ಲಿ ಯುವಕರು, ಹಿರಿಯರು ಎಸ್‌ಡಿಪಿಐ ಪಕ್ಷದ ಬಗ್ಗೆ ಒಲವು ತೋರುತ್ತಿದ್ದು, ಅಲ್ಲಲ್ಲಿ ಪಕ್ಷಕ್ಕೆ ಸೇರ್ಪಡೆಗೊಳ್ಳುವ ಕಾರ್ಯಕರ್ತರ ಸಂಖ್ಯೆ ಬಹಳಷ್ಟು ಹೆಚ್ಚಾಗಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಎಸ್‌ಡಿಪಿಐ ಆದರ್ಶನಗರ ಬ್ರಾಂಚ್ ಅಧ್ಯಕ್ಷರಾದ ಯೂಸುಫ್ ಬೇರಿಕೆ, ಕಾರ್ಯದರ್ಶಿ ಇಸ್ಮಾಯಿಲ್ ಆದರ್ಶನಗರ, ಸ್ಥಳೀಯರಾದ ಇಬ್ರಾಹಿಂ ಆದರ್ಶನಗರ, ಎಸ್‌ಡಿಪಿಐ ಕಾರ್ಯಕರ್ತರಾದ ಝಹೀರ್ ಶಾಂತಿನಗರ, ಅಬ್ದುಲ್ ಮುಹ್ಸೀನ್, ಅನ್ವರ್ ಬೇರಿಕೆ, ಸುಲೈಮಾನ್ ಮುಂತಾದವರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.