ಸರ್ವೆ ಷಣ್ಮುಖ ಯುವಕ ಮಂಡಲ, ವಿವಿಧ ಸಂಸ್ಥೆಗಳ ಸಹಯೋಗದಲ್ಲಿ ಉಚಿತ ಅಯುಷ್ಮಾನ್ ಕಾರ್ಡ್, ಪಾನ್ ಕಾರ್ಡ್ ವಿತರಣೆ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ನೆಹರು ಯುವ ಕೇಂದ್ರ ಮಂಗಳೂರು, ತಾಲೂಕು ಯುವಜನ ಒಕ್ಕೂಟ ಪುತ್ತೂರು, ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಮುಂಡೂರು ಇವುಗಳ ಸಹಯೋಗದಲ್ಲಿ ಸರ್ವೆ ಶ್ರೀ ಷಣ್ಮುಖ ಯುವಕ ಮಂಡಲದ ವತಿಯಿಂದ ಉಚಿತ ಅಯುಷ್ಮಾನ್ ಕಾರ್ಡ್ ವಿತರಣೆ ಹಾಗೂ ಪಾನ್ ಕಾರ್ಡ್ ವಿತರಣೆ ಕಾರ್ಯಕ್ರಮ ಸೆ.೭ರಂದು ಎಸ್.ಜಿ.ಎಂ ಪ್ರೌಢಶಾಲೆಯಲ್ಲಿ ನಡೆಯಿತು.

ತಾಲೂಕು ಯುವಜನ ಒಕ್ಕೂಟದ ಅಧ್ಯಕ್ಷ ಸುಬ್ರಹ್ಮಣ್ಯ ಕರುಂಬಾರು ಕಾರ್ಯಕ್ರಮ ಉದ್ಘಾಟಿಸಿ ಜನರಿಗೆ ಸರಕಾರದ ಯೋಜನೆ ಮುಟ್ಟಿಸುವ ಯುವಕ ಮಂಡಲದ ಪ್ರಾಮಾಣಿಕ ಪ್ರಯತ್ನ ಯಶಸ್ವಿಯಾಗಲಿ ಎಂದು ಶುಭ ಹಾರೈಸಿದರು.

ಯುವಕ ಮಂಡಲದ ಗೌರವಾಧ್ಯಕ್ಷ ವಸಂತ ಎಸ್ ಡಿ ಮಾತನಾಡಿ ಯುವಕ ಮಂಡಲದ ಸದಸ್ಯರು ನಿರಂತರ ಸೇವಾ ಕಾರ್ಯಕ್ರಮಗಳ ಮೂಲಕ ಜನರಿಗೆ ಹತ್ತಿರವಾಗಿದ್ದಾರೆ, ಸೇವೆ ಎಂಬುವುದು ಯುವಕ ಮಂಡಲಕ್ಕೆ ಜೀವನ ಶೈಲಿಯಾಗಿ ಮಾರ್ಪಾಡಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಎಸ್ ಜಿ ಎಂ ಪ್ರೌಢಶಾಲೆಯ ಮುಖ್ಯಗುರು ಶ್ರೀನಿವಾಸ್ ಎಚ್ ಬಿ ಮಾತನಾಡಿ ಯುವಕ ಮಂಡಲದ ಸದಸ್ಯರು ವಿಶೇಷ ಹಾಗೂ ವಿಭಿನ್ನ ಕಾರ್ಯಕ್ರಮಗಳ ಮೂಲಕ ಗ್ರಾಮದ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ಜನರಿಗೆ ಸರಕಾರದ ಯೋಜನೆಯನ್ನು ಮುಟ್ಟಿಸುವ ಅವರ ಪ್ರಯತ್ನಕ್ಕೆ ಜನರು ಕೈಜೋಡಿಸಿ ಯಶಸ್ವಿಗೊಳಿಸಬೇಕು ಎಂದರು.

ಯುವಕ ಮಂಡಲದ ಗೌರವ ಸಲಹೆಗಾರ ಶಶಿಧರ್ ಎಸ್ ಡಿ, ವೀರಪ್ಪ ಗೌಡ ಕರಂಬಾರು, ಕಾರ್ಯಕಾರಿ ಸಮಿತಿ ಸದಸ್ಯರಾದ ರಾಜೇಶ್ ಎಸ್ ಡಿ, ಎಸ್.ಎಂ ಶರೀಫ್ ಸರ್ವೆ, ರಾಮಣ್ಣ ಪೂಜಾರಿ ಭಕ್ತಕೋಡಿ, ಪದಾಧಿಕಾರಿಗಳಾದ ನಾಗೇಶ್ ಪಟ್ಟೆಮಜಲು, ಹರೀಶ್ ಪಾಲೆತ್ತಗುರಿ, ಮನೋಜ್ ಸುವರ್ಣ ಸೊರಕೆ, ವಸಂತ ಪೂಜಾರಿ ಕೆ, ಕೀರ್ತನ್ ಸರ್ವೆದೋಳಗುತ್ತು, ಸದಸ್ಯರಾದ ಹರೀಶ್ ಆಲೇಕಿ, ತಿಲಕ್‌ರಾಜ್ ಕರುಂಬಾರು, ದಿನೇಶ್ ಭಕ್ತಕೋಡಿ, ಕಿರಣ್ ಸರ್ವೆದೋಳಗುತ್ತು, ಜಯಂತ್ ಸರ್ವೆದೋಳಗುತ್ತು, ಚಿರಾಗ್ ರೈ ಮೇಗಿನಗುತ್ತು, ಶರತ್ ಕಾಯರ್‌ಮೊಗರು, ಜಯಪ್ರಕಾಶ್ ಅಲೇಕಿ, ಶಿವಪ್ರಸಾದ್ ಆಲೇಕಿ, ಪ್ರಭಾಕರ್ ಸರ್ವೆದೋಳಗುತ್ತು, ಕಿಶೋರ್ ಸರ್ವೆದೋಳಗುತ್ತು, ಸುರೇಶ ಆಚಾರ್ಯ ಭಕ್ತಕೋಡಿ, ಬಾಲಕೃಷ್ಣ ಕಲ್ಲಗುಡ್ಡೆ, ರವಿ ಸರ್ವೆದೋಳಗುತ್ತು, ಸಾಮಾಜಿಕ ಕಾರ್ಯಕರ್ತ ಅರುಣ್ ಕಲ್ಲಮ ಉಪಸ್ಥಿತರಿದ್ದರು.

ಯುವಕ ಮಂಡಲದ ಅಧ್ಯಕ್ಷ ಕಮಲೇಶ್ ಸರ್ವೆದೋಳಗುತ್ತು ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಗೌತಮ್‌ರಾಜ್ ಕರುಂಬಾರು ವಂದಿಸಿದರು.
ಶಿಬಿರದಲ್ಲಿ ೨೩೬ ಜನರು ಭಾಗವಹಿಸಿದ್ದರು. ೧೭೬ ಮಂದಿಗೆ ಅಯುಷ್ಮಾನ್ ಕಾರ್ಡ್, ೨೫ ಮಂದಿಗೆ ಪಾನ್ ಕಾರ್ಡ್ ಯಶಸ್ವಿಯಾಗಿ ಮಾಡಿಸಲಾಯಿತು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.