ತಿಂಗಳಾಡಿ ರೋಟರ್‍ಯಾಕ್ಟ್ ಕ್ಲಬ್‌ನಿಂದ ಶಿಕ್ಷಕರ ದಿನಾಚರಣೆ, ಸನ್ಮಾನ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ರೋಟರ್‍ಯಾಕ್ಟ್ ಕ್ಲಬ್ ತಿಂಗಳಾಡಿ ಇದರ ವತಿಯಿಂದ ಶಿಕ್ಷಕರ ದಿನಾಚರಣೆ ಮತ್ತು ವನಮಹೋತ್ಸವವನ್ನು ದರ್ಬೆ ಅಂಗನವಾಡಿ ಕೇಂದ್ರದಲ್ಲಿ ಆಚರಿಸಲಾಯಿತು. ಸಭಾಪತಿ ಶರತ್.ಜಿಯವರು ಪ್ರಾಸ್ತಾವಿಕ ಮಾತುಗಳನ್ನಾಡಿದರು. ನಿಕಟಪೂರ್ವ ಅಧ್ಯಕ್ಷ ಸನತ್ ರೈ ವನಮಹೋತ್ಸವದ ಮಹತ್ವದ ಬಗ್ಗೆ ತಿಳಿಸಿದರು. ಸರಕಾರಿ ಪ್ರೌಢಶಾಲೆ ಸರ್ವೆ ಕಲ್ಪನೆ ಶಾಲೆಯ ಶಿಕ್ಷಕಿ ಅನ್ನಪೂರ್ಣ ಮತ್ತು ದರ್ಬೆ ಅಂಗನವಾಡಿ ಕೇಂದ್ರದ ಶಿಕ್ಷಕಿ ಸುಲೋಚನಾರವರುಗಳನ್ನು ಶಾಲು,ಹಾರ,ಸ್ಮರಣಿಕೆ ನೀಡಿ ಕ್ಲಬ್‌ನ ವತಿಯಿಂದ ಸನ್ಮಾನಿಸಲಾಯಿತು.

ಇದೇ ಸಂದರ್ಭದಲ್ಲಿ ಅಂಗನಾಡಿ ಕೇಂದ್ರದ ಸುತ್ತ ಮುತ್ತ ವಿವಿಧ ರೀತಿಯ ಗಿಡಗಳನ್ನು ನೆಟ್ಟು ವನಮಹೋತ್ಸವವನ್ನು ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಕ್ಲಬ್‌ನ ಸದಸ್ಯರುಗಳು, ಅಧ್ಯಕ್ಷರುಗಳು ಮತ್ತು ಸ್ತ್ರೀಶಕ್ತಿ ಸಂಘದ ಸದಸ್ಯರುಗಳು, ಗ್ರಾಮಸ್ಥರು ಉಪಸ್ಥಿತರಿದ್ದರು. ತಿಂಗಳಾಡಿ ರೋಟರ್‍ಯಾಕ್ಟ್ ಕ್ಲಬ್‌ನ ಅಧ್ಯಕ್ಷ ಹರೀಶ್ ರೈ ಸ್ವಾಗತಿಸಿದರು. ಕಾರ್ಯದರ್ಶಿ ವರುಣ್ ಕುಮಾರ್ ವಂದಿಸಿದರು.ಮಾಜಿ ಅಧ್ಯಕ್ಷ ಸಂಪತ್ ರೈ ಕಾರ್ಯಕ್ರಮ ನಿರೂಪಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.