Breaking News

ನೂಜಿಬಾಳ್ತಿಲ ಅಡೆಂಜ ದೇವಸ್ಥಾನಕ್ಕೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಭೇಟಿ

Puttur_Advt_NewsUnder_1
Puttur_Advt_NewsUnder_1

ಕಡಬ: ನೂಜಿಬಾಳ್ತಿಲ ಗ್ರಾಮದ ಅಡೆಂಜ ಶ್ರೀ ಮಹಾಗಣಪತಿ ಪಂಚಲಿಂಗೇಶ್ವರ ದೇವಸ್ಥಾನಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಸೆ.9ರಂದು ಬೇಟಿ ನೀಡಿ ಶ್ರೀ ದೇವರ ದರುಶನ ಪಡೆದರು.

ಈ ಸಂದರ್ಭದಲ್ಲಿ ಅವರನ್ನು ದೇವಸ್ಥಾನ, ಊರವರ ವತಿಯಿಂದ ಬರಮಾಡಿಕೊಂಡು, ಸ್ವಾಗತಿಸಲಾಯಿತು. ಅರ್ಚಕ ಬಾಲಚಂದ್ರ ಕಾಚಿಂತಾಯ ಪೂಜಾ ವಿಧಿವಿಧಾನ ನೆರವೇರಿಸಿ ಸಚಿವರಿಗೆ ಪ್ರಸಾದ ವಿತರಿಸಿದರು. ಈ ಸಂದರ್ಭದಲ್ಲಿ ದೇವಸ್ಥಾನದ ಗೌರ ಸಲಹೆಗಾರ ಕೇಶವ ಗೌಡ ಅಡೆಂಜ, ಕಾರ್‍ಯದರ್ಶಿ ರಾಧಕೃಷ್ಣ, ಸಮಿತಿಯ ಅಧ್ಯಕ್ಷ ಕರುಣಾಕರ ಗೌಡ ಇಚಿಲಡ್ಕ, ಕೋಶಾಧಿಕಾರಿ ದುರ್ಗಾಪ್ರಸಾದ್ ಕೆ.ಪಿ. ಮೊದಲಾದ ಪ್ರಮುಖ ಜೊತೆಗಿದ್ದರು. ಈ ಸಂದರ್ಭದಲ್ಲಿ ದೇವಸ್ಥಾನದ ಅಭಿವೃಧ್ಧಿಗೆ ಆಡಳಿತ ಸಮಿತಿ ವತಿಯಿಂದ ಸಚಿವರಿಗೆ ಮನವಿ ಸಲ್ಲಿಸಲಾಯಿತು. ಕಡಬ ಠಾಣಾ ಎಸೈ ರುಕ್ಮ ನಾಯ್ಕ ನೇತೃತ್ವದಲ್ಲಿ ಬಿಗಿ ಬಂದೋಬಸ್ತ್ ನಡೆಸಲಾಗಿತ್ತು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.