ಅಳಕೆ ಮಜಲು ಶಾರದಾಂಬಾ ಭಜನಾ ಮಂದಿರದಲ್ಲಿ ಆಯಷ್ಮಾನ್ ಕಾರ್ಡ್ ನೋಂದಾವಣೆ, ವಿತರಣಾ ಕಾರ್ಯಕ್ರಮ

Puttur_Advt_NewsUnder_1
Puttur_Advt_NewsUnder_1

ವಿಟ್ಲ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್   ವಿಟ್ಲ – ಮಾಣಿ ವಲಯದ ವತಿಯಿಂದ ಅಳಕೆ ಮಜಲು ಶಾರದಾಂಬಾ ಭಜನಾ ಮಂದಿರದಲ್ಲಿ  ಆಯಷ್ಮಾನ್ ಕಾರ್ಡ್ ನೋಂದಾವಣೆ ಮತ್ತು  ವಿತರಣಾ ಕಾರ್ಯಕ್ರಮ ಸೆ.10ರಂದು ನಡೆಯಿತು.

ಕಾರ್ಯಕ್ರಮವನ್ನು ವಿಟ್ಲ ತಾಲೂಕು ಯೋಜನಾಧಿಕಾರಿಯಾದ ಮೋಹನ್ ಕೆ. ರವರು ಉದ್ಘಾಟಿಸಿ ಆಯುಷ್ಮಾನ್ ಕಾರ್ಡ್ ನ ಉಪಯೋಗ ಮತ್ತು ಮಹತ್ವದ ಬಗ್ಗೆ ಮಾಹಿತಿ ನೀಡಿದರು.

ಒಕ್ಕೂಟದ ಅಧ್ಯಕ್ಷರಾದ ತಿರುಮಲೇಶ್ವರರವರು ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದರು. ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಸದಸ್ಯರಾದ ರಾಜರಾಮ ಶೆಟ್ಟಿ  ಕೋಲ್ಪೆ ಗುತ್ತುರವರು ಮುಖ್ಯ ಅತಿಥಿಗಳಾಗಿ ಆಗಮಿಸಿ ಕಾರ್ಯಕ್ರಮದ ಉಪಯುಕ್ತತೆಯ ಬಗ್ಗೆ ಹಾಗೂ ಕೊರೋನ ರೋಗದ ಜಾಗೃತಿಯ ಬಗ್ಗೆ ಮಾಹಿತಿ ನೀಡಿದರು. ಶಾರದಾಂಬಾ ಭಜನಾ ಮಂದಿರದ ಅಧ್ಯಕ್ಷರಾದ ಕೃಷ್ಣಪ್ಪ ಸಫಲ್ಯ ಆಡಳಿತ ಸಮಿತಿ ಸದಸ್ಯರಾದ ಜಗದೀಶ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಗಹನ, ವರ್ಣಿಕ ಪ್ರಾರ್ಥಿಸಿದರು. ಜ್ಞಾನವಿಕಾಸ ತಾಲೂಕು ಸಮನ್ವಯಾಧಿಕಾರಿ ನಳಿನಾಕ್ಷಿ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ, ವಲಯ ಮೇಲ್ವಿಚಾರಕಿ  ಜಯಶ್ರೀ ಸ್ವಾಗತಿಸಿದರು. ಸೇವಾ ಪ್ರತಿನಿಧಿ ಸುಗಂಧಿನಿ ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.