ವಿಟ್ಲ ಪಟ್ಟಣ ಪಂಚಾಯತ್ ಕಟ್ಟಡ ತೆರಿಗೆ ಹೆಚ್ಚುವರಿಗೊಳಿಸಿರುವುದು ಅಮಾನವೀಯ ಕ್ರಮ: ರಮಾನಾಥ ವಿಟ್ಲ

Puttur_Advt_NewsUnder_1
Puttur_Advt_NewsUnder_1

ವಿಟ್ಲ: ಪಟ್ಟಣ ಪಂಚಾಯತ್ ಸಾಮಾನ್ಯ ಸಭೆಯಲ್ಲಿ ತೆರಿಗೆ ಹೆಚ್ಚಳಕ್ಕೆ ಸಂಬಂದಿಸಿ ಸದಸ್ಯರಿಂದ ವ್ಯಾಪಕ ವಿರೋಧ ವ್ಯಕ್ತವಾಗಿದ್ದರೂ, ಇದೀಗ ವಿಟ್ಲ ಪಟ್ಟಣ ಪಂಚಾಯತ್ ಮಾತ್ರ ತೆರಿಗೆಯನ್ನು ಹೆಚ್ಚಳ ಮಾಡಿರುವುದು ಜನರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಮನೆಗಳಿಗೆ ಶೇ.೧೫, ಅಂಗಡಿಗಳಿಗೆ ಶೇ.೧೮ರಂತೆ ಏರಿಕೆ ಮಾಡಲಾಗಿದ್ದು, ಇದು ಪಟ್ಟಣ ಪಂಚಾಯತ್ ನ ಒಂದು ಅಮಾನವೀಯ ಕ್ರಮವಾಗಿದೆ ಎಂದು ವಿಟ್ಲ ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ವಕ್ತಾರ ರಮಾನಾಥ ವಿಟ್ಲರವರು ಹೇಳಿದರು.

ಅವರು ಸೆ.10ರಂದು ವಿಟ್ಲ ಪ್ರೆಸ್ ಕ್ಲಬ್ ನಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಅಧಿಕಾರದಲ್ಲಿ ಕಾಂಗ್ರೆಸ್ ಬೆಂಬಲಿತ ಅಧ್ಯಕ್ಷರು ಇರುವುದು ಸರ್ಕಾರದ ಮೀಸಲಾತಿಯ ಕಾರಣದಿಂದ. ಜಾರಿಗೆ ಬರುವುದು ಎಲ್ಲವೂ ಬಹುಮತದ ನಿರ್ಣಯಗಳ ಮೇಲೆಯೇ ಆಗಿದೆ. ಜನರು ಹಣವಿಲ್ಲದೆ ಸಂಕಷ್ಟದಲ್ಲಿರುವ ಸಮಯದಲ್ಲಿ ತೆರಿಗೆ ಮಾಫಿ ಮಾಡಬೇಕು. ಕಟ್ಟಡ ಪರವಾನಿಗೆ ಪಡೆಯಲು ಅಗತ್ಯವಿರುವ ವಿಟ್ಲ ಅಭಿವೃದ್ಧಿ ಪ್ರಾಧಿಕಾರವನ್ನು ರಚನೆ ಮಾಡಲು ಶಾಸಕರು ಪ್ರಯತ್ನ ಮಾಡಬೇಕು ಎಂದು ಅವರು ಆಗ್ರಹಿಸಿದರು. ಕಸ ವಿಲೇವಾರಿಯಲ್ಲಿ ಮಾದರಿ ಎಂದು ಪ್ರಶಸ್ತಿ ಪಡೆದ ವಿಟ್ಲದಲ್ಲಿ ಇಂದು ತ್ಯಾಜ್ಯ ವಿಲೇವಾರಿ ಸಮರ್ಪಕವಾಗಿ ನಡೆಯುತ್ತಿಲ್ಲ. ರಸ್ತೆಯ ಇಕ್ಕೆಲಗಳಲ್ಲಿ ಹಾಗೂ ಪೇಟೆಯಲ್ಲಿ ಗುಡ್ಡೆ ಬೀಳಲು ಆರಂಭವಾಗುತ್ತಿದೆ. ಪ್ರತಿ ೭೦೦ ಮಂದಿಗೆ ಓರ್ವ ಸಿಬ್ಬಂದಿಯ ನೇಮಕ ನಡೆದರೆ ಈ ಸಮಸ್ಯೆಯನ್ನು ಬಗೆ ಹರಿಸಬಹುದಾಗಿದೆ. ಆದರೆ ಸದ್ಯ ಕಸ ವಿಲೇವಾರಿಗೆ ನೇಮಕವಾದ ಸಿಬ್ಬಂದಿಗಳಿಂದ ಪಂಚಾಯತ್ ಕಛೇರಿಯಲ್ಲಿ ಕೆಲಸ ಮಾಡಿಸಲಾಗುತ್ತಿದೆ. ಇದನ್ನು ಜಿಲ್ಲಾಡಳಿತ ಸರಿಯಾಗಿ ಪರಿಗಣಿಸಿ ಸೂಕ್ತ ಕ್ರಮಕೈಗೊಳ್ಳಬೇಕೆಂದು ಅವರು ಆಗ್ರಹಿಸಿದರು. ಪತ್ರಿಕಾಗೋಷ್ಠಿಯಲ್ಲಿ ವಿಟ್ಲ ನಗರ ಕಾಂಗ್ರೆಸ್ ಅಧ್ಯಕ್ಷ ವಿ. ಕೆ. ಎಂ. ಅಶ್ರಫ್, ಉಪಾಧ್ಯಕ್ಷ ಅಶೋಕ್ ಕುಮಾರ್ ಎನ್. ಎಸ್. ಡಿ., ಗ್ರಾಮ ಪಂಚಾಯತ್ ಮಾಜಿ ಸದಸ್ಯ ಅಬ್ದುಲ್ ರಹಿಮಾನ್ ಕುರುಂಬಳ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.