ನೂಜಿಬಾಳ್ತಿಲ: ಉಸ್ತುವಾರಿ ಸಚಿವರಿಗೆ ಸಾರ್ವಜನಿಕರಿಂದ ವಿವಿಧ ಮನವಿ ಸಲ್ಲಿಕೆ

Puttur_Advt_NewsUnder_1
Puttur_Advt_NewsUnder_1

ಕಡಬ: ನೂಜಿಬಾಳ್ತಿಲ ಸರಕಾರಿ ಉ.ಹಿ.ಪ್ರಾ. ಶಾಲಾ ಕಟ್ಟಡದ ಭೂಮಿ ಪೂಜೆಗೆ ಬುಧವಾರ ಆಗಮಿಸಿದ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ನೂಜಿಬಾಳ್ತಿಲ ಸಿಎ ಬ್ಯಾಂಕ್‌ನಲ್ಲಿ ಸಾರ್ವಜನಿಕರಿಂದ ಅಹಲವಾಲು ಸ್ವೀಕರಿಸಿದರು.

ನೂಜಿಬಾಳ್ತಿಲ ಗ್ರಾಮದ ಕಲ್ಲುಗುಡ್ಡೆಗೆ ಮಂಗಳೂರಿನ ಸ್ಟೇಟ್ ಬ್ಯಾಂಕ್‌ನಿಂದ ಬರುತ್ತಿದ್ದ ಸರಕಾರಿ ಬಸ್ಸು ಕಳೆದ 6 ತಿಂಗಳಿನಿಂದ ರದ್ದುಗೊಂಡಿದ್ದು, ಪುನರಾರಂಭಿಸುವಂತೆ ಹಾಗೂ ಊರವರ, ಶಾಲಾ ಮಕ್ಕಳ ಸೌಕರ್ಯಕ್ಕಾಗಿ ಮಂಗಳೂರು, ಪುತ್ತೂರು, ಸುಳ್ಯ, ಧರ್ಮಸ್ಥಳ ಡಿಪೋದಿಂದ ಕಲ್ಲುಗುಡ್ಡೆಗೆ ಸರಕಾರಿ ಬಸ್ ವ್ಯವಸ್ಥೆ ಕಲ್ಪಿಸುವಂತೆ ಮನವಿ ಸಲ್ಲಿಸಲಾಯಿತು.

ಕಡಬ ತಾಲೂಕು ಕೇಂದ್ರದಲ್ಲಿ ಪ್ರಾರಂಭವಾಗದೇ ಇರುವ ಎಲ್ಲಾ ಇಲಾಖೆಗಳನ್ನು ಶೀಘ್ರ ತೆರೆದು ಅಧಿಕಾರಿ, ಸಿಬಂದಿಗಳನ್ನು ನೇಮಕ ಮಾಡುವಂತೆ, ಮರ್ದಾಳದಲ್ಲಿ ಅಗ್ನಿ ಶಾಮಕ ಠಾಣೆಯನ್ನು ಸ್ಥಾಪಿಸುವಂತೆ, ಆಲಂಕಾರು ಮೂರ್ತೆದಾರರ ಸೇವಾ ಸಹಕಾರಿ ಸಂಘಕ್ಕೆ ಆಲಂಕಾರಿನಲ್ಲಿ ಸಮುದಾಯ ಭವನ ನಿರ್ಮಿಸಲು ಸರಕಾರದಿಂದ ಅನುದಾನ ಒದಗಿಸುವಂತೆ, ನೂಜಿಬಾಳ್ತಿಲ ಗ್ರಾಮದ ಒರುಂಬಾಲು ಶ್ರೀ ಉಮಾಮಹೇಶ್ವರ ದೇವಸ್ಥಾನದ ಜಾಗದ ರೆಕಾರ್ಡ್ ತಯಾರಿಸಿಕೊಡುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸುವಂತೆ ದೇವಲದ ವತಯಿಂದ ಮನವಿ, ಅಡೆಂಜ ದೇವಸ್ಥಾನದ ಬಳಿ ಹರಿಯುತ್ತಿರುವ ಗುಂಡ್ಯ ಹೊಳೆಗೆ ತಡೆಗೋಡೆ ನಿರ್ಮಿಸಲು ಅನುದಾನ ಒದಗಿಸುವಂತೆ, ಕಲ್ಲುಗುಡ್ಡೆ-ಎಂಜಿರ ರಸ್ತೆ ಮರುಡಾಮರೀಕರಣಕ್ಕೆ ಅನುದಾನ ಒದಗಿಸುವಂತೆ ಸೇರಿದಂತೆ ಸಾರ್ವಜನಿಕರು ತಮ್ಮ ಬೇಡಿಕೆಗಳ ಬಗ್ಗೆ ಸಚಿವರಲ್ಲಿ ಲಿಖಿತ ಮನವಿ ಸಲ್ಲಿಸಿದರು.

ನೂಜಿಬಾಳ್ತಿಲ ಶಾಲೆಗೆ ಆಗಮಿಸಿದ ಜಿಲ್ಲಾ ಉಸ್ತುವಾರಿ ಸಚಿವರನ್ನು ಶಾಲಾ ವತಿಯಿಂದ ಸನ್ಮಾನಿಸಲಾಯಿತು.

 ಶಾಲಾ ಎಸ್‌ಡಿಎಮ್‌ಸಿ ಅಧ್ಯಕ್ಷ ಲಕ್ಷಣಗೌಡ, ಮುಖ್ಯ ಶಿಕ್ಷಕಿ ಸುಂದರಿ, ಎಸ್‌ಡಿಎಮ್‌ಸಿ ಉಪಾಧ್ಯಕ್ಷೆ ಕಮಲಾಕ್ಷಿ ಬರೆಮೇಲು, ಸಮೂಹ ಸಂಪನ್ಮೂಲ ಸಮನ್ವಯಾಧಿಕಾರಿ ಮೋನಪ್ಪ ಪೂಜಾರಿ, ನೂಜಿಬಾಳ್ತಿಲ ಗ್ರಾ. ಪಂ ಆಡಳಿತಾಧಿಕಾರಿ ಭರತ್ ಬಿ.ಎಂ, ಪಿಡಿಒ ಆನಂದ ಎ., ನೂಜಿಬಾಳ್ತಿಲ ಸಿಆರ್‌ಪಿ ಗೋವಿಂದ ನಾಯಕ್, ಶಿಕ್ಷಕರಾದ ಬಾಲಕೃಷ್ಣ ಎಂ, ಸಚಿದೇವಿ, ಶೈಲಾ ಟಿ.ಐ, ಲೂಸಿ ವಿ.ಕೆ, ಗೀತಾ ಪ್ರಮುಖರಾದ ಚಂದ್ರಶೇಖರ ಗೌಡ ಹಳೆನೂಜಿ, ಕೆ.ವಿ. ದುರ್ಗಾಪ್ರಸಾದ್, ಇಂಜಿನಿಯರ್ ಅನಿಲ್ ಕುಮಾರ್ ಹಾಗೂ ಜಯಂತ ಬರೆಮೇಲು ಉಪಸ್ಥಿತರಿದ್ದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.