Breaking News

ಪುತ್ತೂರು ಸಂಚಾರ ಪೊಲೀಸ್ ಠಾಣೆಯಿಂದ ವರ್ಗಾವಣೆಗೊಂಡ ಮೂವರಿಗೆ ಬೀಳ್ಕೊಡುಗೆ

Puttur_Advt_NewsUnder_1
Puttur_Advt_NewsUnder_1

ಪೊಲೀಸ್ ಕೆಲಸದ ನಡುವೆ ಆರೋಗ್ಯ ಕಾಪಾಡಿಕೊಳ್ಳಿ – ಲಖನ್ ಸಿಂಗ್ ಯಾದವ್

ಪುತ್ತೂರು: ಪೊಲೀಸ್ ಕರ್ತವ್ಯ ಎಂದ ಮೇಲೆ ಕೆಲಸ ಹೆಚ್ಚಿರುತ್ತದೆ. ಸಿಬ್ಬಂದಿಗಳು ಆರೋಗ್ಯ ಕಾಪಾಡಿಕೊಂಡು ಕರ್ತವ್ಯ ನಿರ್ವಹಿಸಿ ಎಂದು ಪುತ್ತೂರು ಉಪವಿಭಾಗದ ಎ.ಎಸ್ಪಿ ಲಕನ್ ಸಿಂಗ್ ಯಾದವ್ ಹೇಳಿದರು.

ಸಂಚಾರ ಪೊಲೀಸ್ ಠಾಣೆಯಲ್ಲಿ ಎಸ್.ಐ ಆಗಿದ್ದು ಮೈಸೂರು ಜಿಲ್ಲೆಗೆ ವರ್ಗಾವಣೆಗೊಂಡ ಚೆಲುವಯ್ಯ, ಕಡಬ ಠಾಣೆಗೆ ವರ್ಗಾವಣೆಗೊಂಡ ವಿಠಲ ಜೋಗಣ್ಣ, ಪದೋನ್ನತಿ ಹೊಂದಿ ಪುತ್ತೂರು ಗ್ರಾಮಾಂತರ ಠಾಣೆಗೆ ವರ್ಗಾವಣೆಗೊಂಡ ಜಗನ್ನಾಥ ಅವರಿಗೆ ಇಲ್ಲಿನ ಬ್ರಹ್ಮಶ್ರೀ ನಾರಾಯಣ ಗುರು ಸ್ವಾಮಿ ಭವನದಲ್ಲಿ ನಡೆದ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಅವರು ವರ್ಗಾವಣೆಗೊಂಡ ಮೂವರನ್ನು ಸನ್ಮಾನಿಸಿ ಮಾತನಾಡಿದರು. ಪೊಲೀಸ್ ಇಲಾಖೆಯಲ್ಲಿ ಕರ್ತವ್ಯದ ಜೊತೆಗೆ ಜವಾಬ್ದಾರಿ ಇದೆ. ಅದನ್ನು ನಿಭಾಯಿಸುವ ವೇಳೆ ಆರೋಗ್ಯವನ್ನೂ ಕಾಪಾಡಿಕೊಳ್ಳಿ ಎಂದು ಹೇಳಿದರು.

ಪೊಲೀಸ್ ಆದವ ದ.ಕ.ಜಿಲ್ಲೆಯಲ್ಲಿ ಸೇವೆ ಮಾಡಲೇ ಬೇಕು: ಮೈಸೂರು ಜಿಲ್ಲೆಯ ನಂಜನಗೂಡು ಸ್ಟೇಷನ್‌ಗೆ ವರ್ಗಾವಣೆಗೊಂಡ ಎಸ್.ಐ ಚೆಲುವಯ್ಯ ಅವರು ಮಾತನಾಡಿ ಎಲ್ಲೆ ಇರು ಹೇಗೆ ಇರು ನೀ ಕನ್ನಡವಾಗಿರು

ಎಂಬಂತೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಂದು ವರ್ಷ ಆದರೂ ಸೇವೆ ಮಾಡಲೇ ಬೇಕು. ಯಾಕೆಂದರೆ ಇಲ್ಲಿನ ಭೌಗೋಳಿಕ ಪರಿಸರ, ಇಲ್ಲಿನ ಜನತೆ, ಇಲಾಖೆಯ ಒಡನಾಟ, ಮೇಲಾಧಿಕಾರಿಗಳ ಸಲಹೆ ಉತ್ತಮವಾಗಿರುತ್ತದೆ. ಮೇಲಾಧಿಕಾರಿಗಳ ಸಲಹೆ ಪಡೆದರೆ ಎಲ್ಲಾ ಕೆಲಸ ಯಶಸ್ವಿಯಾಗಿ ನಡೆಯುತ್ತದೆ ಎಂದು ಹೇಳಿದ ಅವರು ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು. ಸಂಪ್ಯ ಠಾಣೆಗೆ ಎ.ಎಸ್.ಐ ಆಗಿ ಪದ್ದೋನ್ನತಿ ಹೊಂದಿದ ಜಗನ್ನಾಥ ಅವರು ಅನುಭವ ಹಂಚಿಕೊಂಡರು. ಪುತ್ತೂರು ನಗರ ಪೊಲೀಸ್ ಠಾಣೆಯ ನಿರೀಕ್ಷಕ ತಿಮ್ಮಪ್ಪ ನಾಯ್ಕ ಅವರು ಬೀಳ್ಕೊಡುಗೆ ಸಮಾರಂಭದ ಅಧ್ಯಕ್ಷತೆ ವಹಿಸಿದರು. ಮಹಿಳಾ ಪೊಲೀಸ್ ಠಾಣೆಯ ನಿರೀಕ್ಷಕ ಕುಸುಮಾಧರ್, ಎಸ್.ಐ ಜಂಬುರಾಜ್ ಮಹಾಜನ್ ಅವರು ಮಾತನಾಡಿದರು.

ಅಭಿನಂದನೆ: ಪುತ್ತೂರಿಗೆ ನೂತನವಾಗಿ ಆಗಮಿಸಿ ಕರ್ತವ್ಯಕ್ಕೆ ಹಾಜರಾಗಿರುವ ಎ.ಎಸ್ಪಿ ಲಖನ್ ಸಿಂಗ್ ಯಾದವ್ ಮತ್ತು ಸಂಚಾರ ಪೊಲೀಸ್ ಠಾಣೆಯ ಎಸ್.ಐ ರಾಮ ನಾಯ್ಕ, ಹೆಡ್‌ಕಾನ್‌ಸ್ಟೇಬಲ್ ವಿನಯ, ಸತೀಶ್ ಅವರನ್ನು ಇದೇ ಸಂದರ್ಭದಲ್ಲಿ ಅಭಿನಂದಿಸಲಾಯಿತು. ಎ.ಎಸ್.ಐ ಸುರೇಶ್ ಶರ್ಮ, ಹೆಡ್‌ಕಾನಸ್ಟೇಬಲ್ ಸ್ಕರೀಯ, ಕಿರಣ್ ಅನಿಸಿಕೆ ವ್ಯಕ್ಯಪಡಿಸಿದರು. ಹೆಡ್‌ಕಾನ್‌ಸ್ಟೇಬಲ್ ಶಿವಪ್ರಸಾದ್, ಎ.ಎಸ್.ಐ ಚಿದಾನಂದ, ಕುಶಾಲಪ್ಪ ಗೌಡ, ಪ್ರಶಾಂತ್ ರೈ ಅತಿಥಿಗಳನ್ನು ಗೌರವಿಸಿದರು. ಕು. ವನ್ಯ ಪ್ರಾರ್ಥಿಸಿದರು. ಸಂಚಾರ ಪೊಲೀಸ್ ಠಾಣೆಯ ಎಸ್.ಐ ರಾಮ ನಾಯ್ಕ ಸ್ವಾಗತಿಸಿ, . ಸಂಚಾರ ಪೊಲೀಸ್ ಠಾಣೆಯ ಹೆಡ್ ಕಾನ್ ಸ್ಟೇಬಲ್ ಚಂದ್ರ ವಂದಿಸಿರು. ನಗರ ಪೊಲೀಸ್ ಠಾಣೆಯ ಹೆಡ್ ಕಾನ್ ಸ್ಟೇಬಲ್ ಧನ್ಯ ಕಾರ್ಯಕ್ರಮ ನಿರೂಪಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.