ಕೊರೋನ ಸೋಂಕಿತ ವ್ಯಕ್ತಿಗೆ ಪ್ಲಾಸ್ಮಾ ದಾನ ಮಾಡಿ ಜೀವ ಉಳಿಸಿದ ಪೊಲೀಸ್ ತೆಗ್ಗು ರಂಜಿತ್ ಕುಮಾರ್ ರೈ ಕಾರ್ಯಕ್ಕೆ ಎಲ್ಲೆಡೆ ಪ್ರಶಂಸೆ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಕೋವಿಡ್ 19 ಮಹಾಮಾರಿ ಸೋಂಕಿನಿಂದ ಜೀವನ್ಮರಣ ಹೋರಾಟದಲ್ಲಿದ್ದ ವ್ಯಕ್ತಿಯೋರ್ವರಿಗೆ ಪ್ಮಾಸ್ಮಾ ದಾನ ಮಾಡುವ ಮೂಲಕ ಜೀವ ಉಳಿಸುವ ಕಾರ್ಯವನ್ನು ಪೊಲೀಸ್‌ರೋರ್ವರು ಮಾಡಿದ್ದಾರೆ. ಮಂಗಳೂರು ಎಸ್.ಪಿ ಕಛೇರಿಯಲ್ಲಿ ಡಿ.ಆರ್. ವಿಭಾಗದಲ್ಲಿ ಹೆಡ್ ಕಾನ್‌ಸ್ಟೇಬಲ್ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಕೆಯ್ಯೂರು ಗ್ರಾಮದ ತೆಗ್ಗು ನೂಜಿಬರಮೇಲು ನಿವಾಸಿಯಾಗಿರುವ ರಂಜಿತ್ ಕುಮಾರ್ ರೈಯವರೇ ಪ್ಲಾಸ್ಮಾ ದಾನ ಮಾಡಿದವರಾಗಿದ್ದಾರೆ. ಬ್ರಹ್ಮಾವರ ಮೂಲದ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್‌ನ ನಿವೃತ್ತ ಮೆನೇಜರ್ ಪೂರ್ಣಾನಂದ ವಾರಂಬಲ್ಲಿ (61ವ)ರವರು ಕೋವಿಡ್ 19 ಸೋಂಕಿನಿಂದ ಬ್ರಹ್ಮಾವರದ ಮಹೇಶ್ ಹಾಸ್ಪಿಟಲ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇವರಿಗೆ ರಕ್ತದಲ್ಲಿ ಪ್ಲಾಸ್ಮಾ ಸಂಖ್ಯೆ ಕಡಿಮೆಯಾಗಿದ್ದರಿಂದ ಜೀವನ್ಮರಣ ಹೋರಾಟದಲ್ಲಿದ್ದರು. ಇಂತಹ ಸಮಯದಲ್ಲಿ ರಂಜಿತ್ ಕುಮಾರ್ ರೈಯವರು ದೇರಳಕಟ್ಟೆ ಕೆ.ಎಸ್.ಹೆಗ್ಡೆ ಹಾಸ್ಪಿಟಲ್‌ನಲ್ಲಿ ೦+ ಪ್ಲಾಸ್ಮಾ 450 ಎಂ.ಎಲ್ ದಾನ ಮಾಡಿದ್ದಾರೆ. ಇದೀಗ ಪೂರ್ಣಾನಂದರವರು ಸಂಪೂರ್ಣ ಗುಣಮುಖರಾಗಿದ್ದಾರೆ ಎಂದು ತಿಳಿದು ಬಂದಿದೆ.

ಜಿಲ್ಲೆಯಲ್ಲೇ ಪ್ರಥಮ ಪೊಲೀಸ್
ಮನುಷ್ಯನ ದೇಹದಲ್ಲಿ ಸುಮಾರು 2 ಲಕ್ಷಕ್ಕೂ ಅಧಿಕ ಪ್ಲಾಸ್ಮಾ ಕಣಗಳಿರುತ್ತವೆ. ಇವು ಕಡಿಮೆಯಾಗುತ್ತಾ ಬಂದಂತೆ ಅಪಾಯ ಸಂಭವಿಸುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಪ್ಲಾಸ್ಮಾ ದಾನ ಮಾಡುವುದು ಒಂದೇ ಪರಿಹಾರವಾಗಿರುತ್ತದೆ. ಪೊಲೀಸ್ ಕೆಲಸದಲ್ಲಿರುವವರು ಪ್ಲಾಸ್ಮಾ ದಾನ ಮಾಡಿದವರಲ್ಲಿ ನೂಜಿಬರಮೇಲು ಗಣೇಶ್ ರೈ ಮತ್ತು ರತ್ನಾವತಿ ರೈಯವರ ಪುತ್ರರಾಗಿರುವ ರಂಜಿತ್ ಕುಮಾರ್ ರೈಯವರು ಜಿಲ್ಲೆಗೆ ಪ್ರಥಮ ವ್ಯಕ್ತಿಯಾಗಿದ್ದಾರೆ. ಈಗಾಗಲೇ ಸಾರ್ವಜನಿಕ ವಲಯದಲ್ಲಿ ಒಟ್ಟು 16 ಮಂದಿ ಪ್ಲಾಸ್ಮಾ ದಾನ ಮಾಡಿದ್ದಾರೆ. ರಂಜಿತ್‌ರವರು 17 ನೇ ವ್ಯಕ್ತಿಯಾಗಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಪ್ರಶಂಸೆ
ರಂಜೀತ್ ಕುಮಾರ್ ರೈಯವರು ಈ ಕಾರ್ಯಕ್ಕೆ ಸಾಮಾಜಿಕ ಜಾಲತಾಣದಲ್ಲಿ ಪ್ರಶಂಸೆಯ ಬರಹಗಳು ಹರಿದಾಡುತ್ತಿವೆ. ಪ್ಲಾಸ್ಮಾವನ್ನು ದಾನ ಮಾಡುವ ಮೂಲಕ ಮತ್ತೊಬ್ಬರ ಉಸಿರಿಗೆ ಉಸಿರಾದ ರಂಜಿತ್‌ರವರ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ಶ್ಲಾಘನೆ ವ್ಯಕ್ತವಾಗಿದೆ.

ಬ್ರಹ್ಮಾವರ ಮೂಲದ ಪೂರ್ಣಾನಂದರವರಿಗೆ ೦+ ಪ್ಲಾಸ್ಮಾದ ಅಗತ್ಯತೆ ಇದೆ ಎಂಬುದನ್ನು ತಿಳಿದು ಸ್ವ ಇಚ್ಛೆಯಿಂದ ದಾನ ಮಾಡಿದ್ದೇನೆ. ಒಬ್ಬ ವ್ಯಕ್ತಿಯ ಜೀವ ಉಳಿಸುವುದಕ್ಕಿಂತ ದೊಡ್ಡ ಕೆಲಸ ಬೇರೊಂದಿಲ್ಲ – ರಂಜಿತ್ ಕುಮಾರ್ ರೈ, ಹೆಡ್ ಕಾನ್ ಸ್ಟೇಬಲ್

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.