ಚುನಾವಣೆ ಸಂದರ್ಭದಲ್ಲಿ ಕಾಂಕ್ರಿಟೀಕರಣ ಭರವಸೆ ಬರುತ್ತದೆ, ಚುನಾವಣೆ ಮುಗಿದ ಬಳಿಕ ಗೆದ್ದವರೂ ಬರುವುದಿಲ್ಲ , ಸೋತವರದ್ದೂ ಸುದ್ದಿ ಇರುವುದಿಲ್ಲ – ಪುತ್ತೂರು ನಗರಸಭಾ ವ್ಯಾಪ್ತಿಯಲ್ಲಿ ಬಡಾವಣೆಯ ನಿವಾಸಿಗಳಿಂದ ನಗರಸಭೆಗೆ ಅರ್ಜಿ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ‘ಇದು ಮಂಜಲಪಡ್ಪು ಗಣೇಶ ಬಡಾವಣೆಯ ರಸ್ತೆ. ಈ ರಸ್ತೆ ಬಡಾವಣೆಯ 16 ಮನೆಗಳಿಗೆ ತೆರಳುವ ಮಣ್ಣಿನ ರಸ್ತೆ. ಈ ರಸ್ತೆಗೆ ಪ್ರತೀ ಬಾರಿ ಚುನಾವಣೆ ಸಂದರ್ಭದಲ್ಲಿ ಕಾಂಕ್ರಿಟೀಕರಣ ಭರವಸೆ ಬರುತ್ತದೆ, ಚುನಾವಣೆ ಮುಗಿದ ಬಳಿಕ ಗೆದ್ದವರೂ ಬರುವುದಿಲ್ಲ , ಸೋತವರದ್ದೂ ಸುದ್ದಿ ಇರುವುದಿಲ್ಲ ಆದರೂ ನಾವು ನಗರಸಭೆಗೆ ಅರ್ಜಿ ಹಾಕುತ್ತಲೇ ಇದ್ದೇವೆ ಅರ್ಜಿ ಏನು ಮಾಡುತ್ತಾರೋ, ಎಲ್ಲಿಗೆ ಹೋಗುತ್ತದೋ ಗೊತ್ತಿಲ್ಲ ಅಂದಿನಿಂದ ಇಂದಿನವರೆಗೆ ನಮ್ಮ ರಸ್ತೆಯನ್ನು ಯಾರೂ ಕಣ್ಣೆತ್ತಿ ನೋಡಿಯೇ ಇಲ್ಲ’ ಇದು ಬಡಾವಣೆ ಜನರು ಹೇಳುವ ರಸ್ತೆಯ ಕಥೆ.

ಪುತ್ತೂರು ನಗರಸಭೆ ವ್ಯಾಪ್ತಿಗೆ ಒಳಪಡುವ ಈ ರಸ್ತೆಯನ್ನು ಯಾವ ಕಾರಣಕ್ಕೆ ಕಾಂಕ್ರೀಟ್ ಮಾಡಿಲ್ಲ ಎಂಬುದು ಯಾರಿಗೂ ಗೊತ್ತಿಲ್ಲ. ಮಳೆಗಾಲದಲ್ಲಿ ಈ ರಸ್ತೆಯಲ್ಲಿ ನಡೆದಾಡಲು ಕಷ್ಟಕರವಾದ ಸನ್ನಿವೇಶ ಇದೆ. ಈ ಬಾರಿ ಮಳೆಗಾಲದಲ್ಲೂ ಸಮಸ್ಯೆಯಾಗಿದೆ ಈ ಬಾರಿಯೂ ಅರ್ಜಿ ಹಾಕಿ ಮನವಿ ಮಾಡಿದ್ದಾರೆ ಆದರೆ ಯಾವ ಅಧಿಕಾರಿಯೂ ಸಮಸ್ಯೆ ಆಲಿಸಲು ಬಂದಿಲ್ಲ ಎಂಬುದು ಬಡಾವಣೆ ನಿವಾಸಿಗಳ ಆರೋಪವಾಗಿದೆ. ಈ ರಸ್ತೆಗೆ ಕೆಲವು ವರ್ಷಗಳ ಹಿಂದೆ ಅನುದಾನ ಬಂದಿದ್ದಾಗಿ ಮಾಹಿತಿ ಇತ್ತಂತೆ ಆ ಅನುದಾನವನ್ನು ಪ್ರಭಾವಿ ರಾಜಕಾರಣಿಯೊಬ್ಬರು ಬೇರೆ ರಸ್ತೆಗೆ ಹಾಕಿಸಿದ್ದು ಅಲ್ಲಿರುವ ನಾಲ್ಕು ಮನೆಗಳು ಶ್ರೀಮಂತರದ್ದಾರೆ ಆ ಕಾರಣಕ್ಕೆ ಅಲ್ಲಿನ ರಸ್ತೆ ಅಭಿವೃದ್ದಿಯಾಗಿದೆ ಎನ್ನುತ್ತಾರೆ ಸ್ಥಳೀಯರು. ಈ ಬಾರಿ ರಸ್ತೆ ಅಭಿವೃದ್ದಿ ಮಾಡದೇ ಇದ್ದಲ್ಲಿ ಕಾನೂನು ರೀತಿಯ ಹೋರಾಟ ಮಾಡುವುದಾಗಿ ಎಚ್ಚರಿಸಿದ್ದಾರೆ. 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.