ಸಮುದಾಯ ಆರೋಗ್ಯ, ಕೋವಿಡ್ ಮುನ್ನೆಚ್ಚರಿಕೆ | ಜೇಸಿ ಸಂಸ್ಥೆಯಿಂದ ‘ಫಿಟ್ ಪುತ್ತೂರು ರೈಡ್’ ಸಂದೇಶ

Puttur_Advt_NewsUnder_1
Puttur_Advt_NewsUnder_1
  • ಜಡಿ ಮಳೆಯ ನಡುವೆಯೂ ಸೈಕಲ್ ಜಾಥಾದಿಂದ ಸಂದೇಶ

ಪುತ್ತೂರು: ಸಮುದಾಯದ ಆರೋಗ್ಯದ ಕುರಿತು ಅರಿವು ಮತ್ತು ಕೋವಿಡ್-19 ಮುನ್ನೆಚ್ಚರಿಕೆ ಕ್ರಮವಾಗಿ ಸೈಕಲ್ ಜಾಥಾ ಮೂಲಕ ‘ಫಿಟ್ ಪುತ್ತೂರು ರೈಡ್” ಸಂದೇಶವನ್ನು ಪುತ್ತೂರು ಜೇಸಿಐ, ಜೇಸಿರೇಟ್ ಮತ್ತು ಜೆಜೆಸಿ ಸಹಯೋಗದೊಂದಿಗೆ ಸೆ.12ರಂದು ಬೆಳಗ್ಗೆ ಪುತ್ತೂರು ಪಟ್ಟಣದಲ್ಲಿ ನಡೆಯಿತು.

ಎಡೆಬಿಡದ ಭಾರಿ ಮಳೆಯ ನಡುವೆಯೂ ಸುಮಾರು 20ಕ್ಕೂ ಅಧಿಕ ಮಂದಿ ಸೈಕಲ್ ಜಾಥಾದ ಮೂಲಕ ಸಂದೇಶ ನೀಡಿದರು. ಬೆಳಿಗ್ಗೆ ದರ್ಬೆ ಪಿ.ಪೈ ಪೆಟ್ರೋಲ್ ಪಂಪ್ ಬಳಿಯಿಂದ ಜಾಥಾ ಹೊರಟು ಬೊಳುವಾರು, ವಿವೇಕಾನಂದ ಕಾಲೇಜು ಆಗಿ ಬನ್ನೂರು, ಪಡೀಲ್, ಎಪಿಎಂಸಿ, ಎಳ್ಮುಡಿ ಯಾಗಿ ಸಂತಫಿಲೋಮಿನಾ ಕಾಲೇಜು ಬಳಿಯ ಶರ್ಮ ಕಮ್ಯುನಿಕೇಶನ್ ಸಂಸ್ಥೆಯ ಬಳಿ ಸಮಾರೋಪಗೊಂಡಿತ್ತು.

ಸಾರ್ವಜನಿಕರು ಆರೋಗ್ಯ ಕಾಪಾಡಿಕೊಳ್ಳಿ:
ಪುತ್ತೂರು ಸಂಚಾರ ಪೊಲೀಸ್ ಠಾಣೆಯ ಎಸ್.ಐ ರಾಮ ನಾಯ್ಕ ಸೈಕಲ್ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿ ಸಾರ್ವಜನಿಕರ ಆರೋಗ್ಯದ ಬಗ್ಗೆ ಜೇಸಿ ಸಂಸ್ಥೆ ಕಾಳಜಿ ವಹಿಸಿ ಆರೋಗ್ಯದ ಅರಿವು ಮತ್ತು ಕೊರೋನಾದಿಂದ ಮುನ್ನೆಚ್ಚರಿಕೆ ವಹಿಸುವ ಕುರಿತ ಸಂದೇಶಗಳನ್ನು ಸಾರ್ವಜನಿಕರು ಪಾಲಿಸಿಕೊಂಡು ತಮ್ಮ ಆರೋಗ್ಯ ಕಾಪಾಡಿಕೊಳ್ಳಿ ಎಂದು ಹೇಳಿದರು.

ಎಲ್ಲರೂ ಫಿಟ್ ಆದರೆ ಆರೋಗ್ಯ:
ಜೇಸಿಐ ಪೂರ್ವ ವಲಯ ಉಪಾಧ್ಯಕ್ಷ ಪಶುಪತಿ ಶರ್ಮ ಅವರು ಮಾತನಾಡಿ ಪುತ್ತೂರಿನಲ್ಲಿ ನಡೆಸುವ ಫಿಟ್ ಪುತ್ತೂರು ರೈಡ್ ಸಂದೇಶ ಎಲ್ಲರ ಮನದಲ್ಲೂ ಆರೋಗ್ಯದ ಅರಿವಿನ ಭಾವನೆ ಮೂಡಿಸಲಿ. ಎಲ್ಲರು ಫಿಟ್ ಆದರೆ ಆರೋಗ್ಯದ ಬೆಳವಣಿಯಾಗುತ್ತದೆ ಎಂದರು.

ಸಮುದಾಯದಲ್ಲಿ ಆರೋಗ್ಯದ ಅರಿವು ಮುಖ್ಯ:
ಜೇಸಿಐ ಅಧ್ಯಕ್ಷ ವೇಣುಗೋಪಾಲ ಅವರು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿ ಸಮುದಾಯದಲ್ಲಿ ಆರೋಗ್ಯ ಕಾಪಾಡುವ ಉದ್ದೇಶದೊಂದಿಗೆ ಪುತ್ತೂರಿಗೆ ಉತ್ತಮ ಸಂದೇಶ ನೀಡುವಲ್ಲಿ ಫಿಟ್ ಪುತ್ತೂರು ರೈಡ್ ಆಯೋಜಿಸಲಾಗಿದೆ. ನಿತ್ಯ ವ್ಯಾಯಾಮ, ಪ್ಲಾಸ್ಟಿಕ್ ತ್ಯಜಿಸುವಿಕೆ, ಕೋವಿಡ್‌ಗೆ ಸಂಬಂಧಿಸಿ ಜನಸಂಧಣಿ ಇರುವ ಪ್ರದೇಶದಿಂದ ದೂರ, ಸಾಮಾಜಿಕ ಅಂತರ, ಕಡ್ಡಾಯ ಮಾಸ್ಕ್ ಧರಿಸುವುದ ಕುರಿತು ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ ಎಂದು ಅವರು ಹೇಳಿದರು. ಜೇಸಿಐ ಪೂರ್ವ ಅಧ್ಯಕ್ಷರುಗಳಾದ ಕೃಷ್ಣಪ್ರಸಾದ್ ಆಳ್ವ, ಸ್ವಣೋದ್ಯಮಿ ಕೇಶವ ಮುಳಿಯ, ನ್ಯಾಯವಾದಿ ಕೆ.ಆರ್ ಆಚಾರ್ಯ, ಕೃಷ್ಣನಾರಾಯಣ ಮುಳಿಯ, ದಿನೇಶ್ ಪ್ರಸನ್ನ, ಡಾ.ಕೃಷ್ಣಪ್ರಸನ್ನ, ಜೇಸಿಐ ಪೂರ್ವ ವಲಯ ಅಧ್ಯಕ್ಷರಾದ ರಾಷ್ಟ್ರೀಯ ತರಬೇತುದಾರ ಕೃಷ್ಣಮೋಹನ್, ಜೇಸಿಐ ಪ್ರಾಜೆಕ್ಟ್ ಕೋ ಆರ್ಡಿನೇಟರ್ ಅಮೃತ್, ಜೇಸಿರೆಟ್ ಅಧ್ಯಕ್ಷೆ ರೇಶ್ಮಾ ರಘು ಶೆಟ್ಟಿ, ಜೇಜೆಸಿ ಅಧ್ಯಕ್ಷ ದಿವಿತ್ ಯು ರೈ, ಜೇಸಿಯ ದೀಕ್ಷಾ ಪಾರ್ವತಿ, ರಘು ಶೆಟ್ಟಿ ಸೇರಿದಂತೆ ಹಲವಾರು ಮಂದಿ ಜಾಥಾದಲ್ಲಿ ಭಾಗವಹಿಸಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.