Breaking News

ನೆಲ್ಯಾಡಿ: ಜೇಸಿ ಸಪ್ತಾಹ, ಆಯಷ್ಮಾನ್ ಕಾರ್ಡ್ ವಿತರಣೆ, ನಿಧಾನ ಬೈಕ್ ರೇಸ್ ಸ್ಪರ್ಧೆ

Puttur_Advt_NewsUnder_1
Puttur_Advt_NewsUnder_1

ನೆಲ್ಯಾಡಿ: ಜೇಸಿಐ, ಜೇಸಿರೆಟ್ ಹಾಗೂ ಜೂನಿಯರ್ ಜೇಸಿವಿಂಗ್ ನೆಲ್ಯಾಡಿ ಇದರ ಆಶ್ರಯದಲ್ಲಿ ೩೭ನೇ ವರ್ಷದ ಜೇಸಿ ಸಪ್ತಾಹ-೨೦೨೦ ‘ಸಪ್ತ ಸಂಭ್ರಮ’ದ ಅಂಗವಾಗಿ ಸೈಕಲ್ ರೇಸ್‌ನಿಂದ ವಿದ್ಯಾರ್ಥಿಗಳಿಗೆ ಆಗುವ ಪ್ರಯೋಜನದ ಬಗ್ಗೆ ಮಾಹಿತಿ, ಉಚಿತ ಆಯುಷ್ಮಾನ್ ಕಾರ್ಡ್ ವಿತರಣೆ ಹಾಗೂ ಜೆಸಿ ಸದಸ್ಯರುಗಳಿಗೆ ನಿಧಾನ ಬೈಕ್ ರೇಸ್ ಸ್ಪರ್ಧೆಗಳು ಸೆ.೧೧ರಂದು ನೆಲ್ಯಾಡಿ ಸರಕಾರಿ ಉ.ಹಿ.ಪ್ರಾ.ಶಾಲೆಯಲ್ಲಿ ನಡೆಯಿತು.

ದೈಹಿಕ ಶಿಕ್ಷಣ ಶಿಕ್ಷಕ ಜನಾರ್ದನ ಟಿ., ಉದ್ಘಾಟಿಸಿ, ಸೈಕಲ್ ರೇಸ್‌ನಿಂದ ವಿದ್ಯಾರ್ಥಿಗಳಿಗೆ ಆಗುವ ಪ್ರಯೋಜನದ ಬಗ್ಗೆ ಮಾಹಿತಿ ನೀಡಿದರು. ನೆಲ್ಯಾಡಿ ಜೆಸಿಐ ಅಧ್ಯಕ್ಷ ಶಿವಪ್ರಸಾದ್‌ರವರು ಅಧ್ಯಕ್ಷತೆ ವಹಿಸಿದ್ದರು. ಜೇಸಿ ಸಪ್ತಾಹದ ಯೋಜನಾ ನಿರ್ದೇಶಕ ಜಯಾನಂದ ಬಂಟ್ರಿಯಾಲ್, ನೆಲ್ಯಾಡಿ ಜೆಸಿಐ ನಿಕಟಪೂರ್ವಾಧ್ಯಕ್ಷ ಇಸ್ಮಾಯಿಲ್, ಪೂರ್ವಾಧ್ಯಕ್ಷರಾದ ಡಾ.ಸದಾನಂದ ಕುಂದರ್, ರವಿಚಂದ್ರ ಹೊಸವೊಕ್ಲು, ಮೋಹನ್ ವಿ., ದಯಾನಂದ ಕೆ.ಆದರ್ಶರವರು ವೇದಿಕೆಯಲ್ಲಿದ್ದರು. ಜೆಸಿ ಸದಸ್ಯರುಗಳಾದ ಮೇರಿಜಾನ್, ದಯಾಕರ ರೈ, ಸುಚಿತ್ರಾ ಬಂಟ್ರಿಯಾಲ್, ವಿನ್ಯಾಸ್ ಬಂಟ್ರಿಯಾಲ್, ಮಾ| ಹೇಮಂತ್, ಸೋಮಶೇಖರ್, ಅಬ್ದುಲ್ ರಹಿಮಾನ್, ಲೀಲಾವತಿ ಆರ್.ಗೌಡ ಮತ್ತಿತರರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.