ಕೊಳ್ನಾಡು: ಮರಳು ಮೇಲಕ್ಕೆತ್ತುವ ಯಂತ್ರ ವಶ | ವಿಟ್ಲ ಠಾಣಾ ಪೊಲೀಸರ ಕಾರ್ಯಾಚರಣೆ

Puttur_Advt_NewsUnder_1
Puttur_Advt_NewsUnder_1

ವಿಟ್ಲ: ಕೊಳ್ನಾಡು‌ ಗ್ರಾಮದ ನೀರಪಡ್ಪು ಎಂಬಲ್ಲಿ ಹೊಳೆಯಿಂದ ಮರಳು ಮೇಲಕ್ಕೆತ್ತಲು ಸಿದ್ದತೆ ನಡೆಸಲಾಗುತ್ತಿದ್ದ ವೇಳೆ ದಾಳಿ ನಡೆಸಿದ  ಬಂಟ್ವಾಳ ಸಂಚಾರಿ ಠಾಣಾ ಎಸ್.ಐ. ರಾಜೇಶ್ ಕೆ.ವಿ. ರವರ ನೇತೃತ್ವದ ವಿಟ್ಲ ಠಾಣಾ ಪೊಲೀಸರ ತಂಡ ಮರಳು ಸಂಗ್ರಹಣೆಗಾಗಿ ಉಪಯೋಗಿಸಲಾಗುತ್ತಿದ್ದ ಯಂತ್ರೋಪಕರಣಗಳನ್ನು ವಶಕ್ಕೆ ಪಡೆದುಕೊಂಡಿದೆ.

ಕೊಳ್ನಾಡು‌ ಗ್ರಾಮದ ನೀರಪಡ್ಪು ಎಂಬಲ್ಲಿನ‌ ಹೊಳೆಯಲ್ಲಿ ಅಕ್ರಮವಾಗಿ ಮರಳು ಎತ್ತಲಾಗುತ್ತಿದೆ ಎನ್ನುವ ಮಾಹಿತಿ ಮೇರೆಗೆ ಪೊಲೀಸರ ತಂಡ ದಾಳಿ ನಡೆಸಿದೆ. ಈ ವೇಳೆ ಹೊಳೆಯ ಬದಿಯಲ್ಲಿ ನಿಲ್ಲಿಸಲಾಗಿದ್ದ  ಹೊಳೆಯಿಂದ ಮರಳನ್ನು ಮೇಲಕ್ಕೆತ್ತುವ ಯಂತ್ರವನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಪತ್ತೆಯಾದ ಸೊತ್ತಿನ ಮೌಲ್ಯ ಒಂದು ಲಕ್ಷರೂಪಾಯಿ ಎಂದು ಅಂದಾಜಿಸಲಾಗಿದ್ದು, ಯಂತ್ರೋಪಕರಣಗಳನ್ನು ವಶಕ್ಕೆ ಪಡೆದುಕೊಂಡಿರುವ ವಿಟ್ಲ ಠಾಣಾ ಪೊಲೀಸರು ಪ್ರಕರಣವನ್ನು  ಗಣಿ ಇಲಾಖೆಗೆ ಹಸ್ತಾಂತರ ಮಾಡಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.