Breaking News

ಜೆ.ಇ.ಇ. ಹಾಗೂ ನಾಟಾ ಪ್ರವೇಶ ಪರೀಕ್ಷೆ: ಉಪ್ಪಿನಂಗಡಿ ಇಂದ್ರಪ್ರಸ್ಥ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಂದ ಅತ್ಯುತ್ತಮ ಸಾಧನೆ

Puttur_Advt_NewsUnder_1
Puttur_Advt_NewsUnder_1

ಉಪ್ಪಿನಂಗಡಿ: ೨೦೧೯-೨೦ರ ಜೆ.ಇ.ಇ. ಪ್ರವೇಶ ಪರೀಕ್ಷೆಯಲ್ಲಿ ಉಪ್ಪಿನಂಗಡಿ ಇಂದ್ರಪ್ರಸ್ಥ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಾದ ಸುಹಾಸ್ ಎಂ.ಕೆ., ನಿಹಾಲ್ ನೂಜಿಬೈಲ್, ಮುಹಮ್ಮದ್ ಶಿಹಾಬ್, ಅನನ್ಯ ಪಿ.ಕೆ., ಜೀವನ್ ಎನ್., ಎ.ಯು. ನಚಿಕೇತ್ ಕುಮಾರ್, ಜೋಶನ್ ವಿ.ಜೆ., ಮೊಹಮ್ಮದ್ ತೈಸಿರ್ ಆಲಿ, ಆಯಿಶತ್ ಹೀನಾ, ಚೈತನ್ಯ ಜೆ.,  ಮೌಲ್ಯ ಆರ್. ಶೆಟ್ಟಿ ಇವರು ಉತ್ತಮ ಸಾಧನೆಗೈದು ಮುಂದಿನ ಜೆ.ಇ.ಇ. ಅಡ್ವಾನ್ಸ್ ಪರೀಕ್ಷೆಗೆ ಆಯ್ಕೆಯಾಗಿರುತ್ತಾರೆ ಎಂದು ಕಾಲೇಜಿನ ಪ್ರಾಂಶುಪಾಲ ಎಚ್.ಕೆ. ಪ್ರಕಾಶ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ದೇಶದಾದ್ಯಂತ ನಡೆದ ಈ ಪರೀಕ್ಷೆಯಲ್ಲಿ ಒಟ್ಟು ೬.೩೫ ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಇವರಲ್ಲಿ ಸುಹಾಸ್ ಎಂ.ಕೆ. ೪೫೧೨ ರ್‍ಯಾಂಕ್ ಹಾಗೂ ನಿಹಾಲ್ ನೂಜಿಬೈಲ್ ೧೦,೧೭೪ ರ್‍ಯಾಂಕ್ ಗಳಿಸಿ ಕಾಲೇಜಿನ ಕೀರ್ತಿಯನ್ನು ಉತ್ತುಂಗಕ್ಕೇರಿಸಿರುತ್ತಾರೆ ಎಂದು ಅವರು ತಿಳಿಸಿದ್ದಾರೆ.

ಅಲ್ಲದೆ ಕೌನ್ಸಿಲ್ ಆಫ್ ಆರ್ಕಿಟೆಕ್ಚರ್‌ರವರ ನಾಟಾ ಪ್ರವೇಶ ಪರೀಕ್ಷೆಯಲ್ಲಿ ಮನ್ವಿತಾ ಎಸ್. ಮುಂದಿನ ಹಂತದ ಪರೀಕ್ಷೆ ಬರೆಯಲು ಅರ್ಹತೆ ಪಡೆದಿದ್ದು ಇಂದ್ರಪ್ರಸ್ಥ ಪದವಿ ಪೂರ್ವ ಕಾಲೇಜಿನ ಹಿರಿಮೆಗೆ ಮತ್ತೊಂದು ಗರಿಮೆ ಸಿಕ್ಕಿದೆ ಎಂದು ಎಚ್.ಕೆ. ಪ್ರಕಾಶ್ ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.