ಕಡಬ ಟೌನ್ ಜುಮಾ ಮಸೀದಿ ಅಧ್ಯಕ್ಷ ಹಾಜಿ ಎಸ್.ಅಬ್ದುಲ್ ಖಾದರ್ ನಿಧನ

Puttur_Advt_NewsUnder_1
Puttur_Advt_NewsUnder_1

ಕಡಬ:ಇಲ್ಲಿನ ರಹ್ಮಾನಿಯಾ ಟೌನ್ ಜುಮಾ ಮಸೀದಿಯ ಅಧ್ಯಕ್ಷ, ಸಮಸ್ತ ಮದ್ರಸಾ ಮ್ಯಾನೇಜ್‌ಮೆಂಟ್‌ನ ಜಿಲ್ಲಾ ಉಪಾಧ್ಯಕ್ಷ, ಜಿಲ್ಲೆಯ ಪ್ರಮುಖ ಉಮರಾ ನೇತಾರರಾಗಿದ್ದ ಹಾಜಿ ಎಸ್.ಅಬ್ದುಲ್ ಖಾದರ್(67ವ.)ರವರು ಅಲ್ಪಕಾಲದ ಅಸೌಖ್ಯದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಸೆ.12ರಂದು ರಾತ್ರಿ ನಿಧನರಾದರು.
ಕಡಬದ ಶೇಡಿಗುಂಡಿ ಎಂಬಲ್ಲಿ ವಾಸವಿದ್ದ ಅವರು ಕಳೆದೊಂದು ವಾರದಿಂದ ಬಾಧಿಸಿದ್ದ ಜ್ವರದ ಹಿನ್ನೆಲೆಯಲ್ಲಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು.ಕಳೆದ ಹಲವು ಸಮಯಗಳಿಂದ ಹೃದಯ ಸಂಬಂಽ ಕಾಯಿಲೆಯಿಂದ ಬಳಲುತ್ತಿದ್ದ ಇವರು ಚಿಕಿತ್ಸೆಗೆ ಸ್ಪಂದಿಸದೆ ನಿಧನರಾದರು.ಕಡಬ ಮಂಡಲ ಪಂಚಾಯತ್ ಸದಸ್ಯರಾಗಿದ್ದ ಅವರು ವಿವಿಧ ಸಂಘ ಸಂಸ್ಥೆಗಳಲ್ಲಿ, ಸಾಮಾಜಿಕ ರಾಜಕೀಯ, ಧಾರ್ಮಿಕ,ಶೈಕ್ಷಣಿಕ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ್ದರು. ಕಳೆದ ಮೂರು ದಶಕಗಳಿಂದ ಸುದೀರ್ಘ ಕಾಲ ಕಡಬ ರಹ್ಮಾನಿಯಾ ಟೌನ್ ಜುಮಾ ಮಸೀದಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ಅವರು ಕಡಬ ಅಡಿಕೆ ವರ್ತಕ ಸಂಘದ ಅದ್ಯಕ್ಷರಾಗಿ, ಕಡಬ ಕದಂಬ ಆಟೊ ಚಾಲಕ ಮಾಲಕರ ಸಂಘದ ಗೌರವಾಧ್ಯಕ್ಷ ವಿವಿಧ ಮಸೀದಿಗಳಲ್ಲಿ ಗೌರವಾಧ್ಯಕ್ಷರಾಗಿ, ವಿವಿಧ ಶಿಕ್ಷಣ ಸಂಸ್ಥೆಗಳಲ್ಲಿಯೂ ಸೇವೆ ಸಲ್ಲಿಸಿದ್ದಾರೆ.ರಾಜಕೀಯವಾಗಿಯೂ ತೊಡಗಿಸಿಕೊಂಡಿದ್ದ ಅವರು ಕಡಬ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷರಾಗಿ ಜವಾಬ್ದಾರಿ ನಿರ್ವಹಿಸಿದ್ದರು.ಮೃತರು ಪತ್ನಿ ಆಯಿಷಾ, ಪುತ್ರರಾದ ಸಲೀಂ ಅಹಮ್ಮದ್, ಇಮ್ರಾನ್, ಸ-ಝ್, ಪುತ್ರಿ ಸಹನಾ, ಸಹೋದರರಾದ ಆದಂಆಲಿ, ಅಬೂಬಕ್ಕರ್, ಅಬ್ಬಾಸ್ ಹಾಗೂ ಸಹೋದರಿ ಫಾತಿಮಾ ಹಮೀದ್ ಹಾಜಿ ಅವರನ್ನು ಅಗಲಿದ್ದಾರೆ. ಮೃತರ ಮನೆಗೆ ಹಲವಾರು ಉಲಮಾ, ಉಮರಾಗಳು, ಧಾರ್ಮಿಕ, ಸಾಮಾಜಿಕ ರಾಜಕೀಯ ಮುಖಂಡರು ಅಗಮಿಸಿ ಸಂತಾಪ ಸೂಚಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.