ಅಭ್ಯರ್ಥಿಗಳ ಕ್ರಿಮಿನಲ್ ಹಿನ್ನೆಲೆಯನ್ನು ಮಾಧ್ಯಮಗಳಲ್ಲಿ ಪ್ರಚಾರಪಡಿಸಬೇಕು

Puttur_Advt_NewsUnder_1
Puttur_Advt_NewsUnder_1

ಬೆಂಗಳೂರು: ಅಭ್ಯರ್ಥಿಗಳ ಅಥವಾ ಚುನಾವಣಾಕಾಂಕ್ಷಿಗಳ ಅಪರಾಧಿಕ ಪೂರ್ವಾಪರಗಳ ಪ್ರಕಟಣೆಗೆ ಸಂಬಂಧಿಸಿದಂತೆ ಕೇಂದ್ರ ಚುನಾವಣಾ ಆಯೋಗವು, ಅಭ್ಯರ್ಥಿಗಳು ಹಾಗೂ ರಾಜಕೀಯ ಪಕ್ಷಗಳಿಗೆ ಇನ್ನಷ್ಟು ಕಠಿಣ ನಿಯಮಾವಳಿಗಳನ್ನು ರೂಪಿಸಿದೆ. ಬಿಹಾರ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಈ ಮಾರ್ಗಸೂಚಿಗಳನ್ನು ಜಾರಿ ಮಾಡಲಾಗಿದೆ. ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳು ಹಾಗೂ ಸಂಬಂಧಿಸಿದ ರಾಜಕೀಯ ಪಕ್ಷಗಳಿಗೆ ನೀಡಲಾಗಿದ್ದ ನಿರ್ದೇಶನಗಳನ್ನು ಇನ್ನಷ್ಟು ಕಠಿಣಗೊಳಿಸಲು ನಿರ್ಧರಿಸಲಾಗಿದೆ ಎಂದು ಆಯೋಗ ತಿಳಿಸಿದೆ.

ಅಭ್ಯರ್ಥಿಯ ಕ್ರಿಮಿನಲ್ ಹಿನ್ನೆಲೆಯನ್ನು ಪ್ರಕಟಗೊಳಿಸುವುದು ಆಯಾ ರಾಜಕೀಯ ಪಕ್ಷಗಳ ನೈತಿಕ ಮಾನದಂಡವಾಗಿದೆ. ಇದರಿಂದ ಮತದಾರರಿಗೆ ಅರ್ಹರನ್ನು ಆಯ್ಕೆ ಮಾಡಲು, ಹೆಚ್ಚು ಅರಿತುಕೊಂಡು ಹಕ್ಕು ಚಲಾಯಿಸಲು ಆ ಮೂಲಕ ಪ್ರಜಾಸತ್ತಾತ್ಮಕ ಚುನಾವಣೆ ಪ್ರಕ್ರಿಯೆಗೆ ನೆರವಾಗಲಿದೆ ಎಂದು ಆಯೋಗ ಹೇಳಿದೆ.ಪರಿಷ್ಕೃತ ಮಾರ್ಗಸೂಚಿ ಪ್ರಕಾರ ಅಭ್ಯರ್ಥಿಗಳು ಹಾಗೂ ಅವರನ್ನು ಶಿಫಾರಸು ಮಾಡುವ ರಾಜಕೀಯ ಪಕ್ಷಗಳು ಆಕಾಂಕ್ಷಿಗಳಿಗೆ ಕ್ರಿಮಿನಲ್ ಹಿನ್ನೆಲೆ ಇದ್ದರೆ, ಅದನ್ನು ಪತ್ರಿಕೆ ಹಾಗೂ ಟಿ.ವಿ. ಮಾಧ್ಯಮಗಳ ಮೂಲಕ ಪ್ರಚಾರಪಡಿಸುವುದು ಕಡ್ಡಾಯವಾಗಿದೆ.ನಾಮಪತ್ರ ಹಿಂಪಡೆಯಲು ನಿಗದಿಯಾಗಿರುವ ಕೊನೆಯ ದಿನಕ್ಕೆ ನಾಲ್ಕು ದಿನ ಮೊದಲು ಪ್ರಕಟಣೆ ನೀಡಬೇಕು. ನಂತರ ಐದನೇ ದಿನ ಹಾಗೂ ೮ನೇ ದಿನದೊಳಗೆ ಎರಡನೇ ಬಾರಿ ಪ್ರಕಟನೆ ಹೊರಡಿಸಬೇಕು. ಪ್ರಚಾರಕ್ಕೆ ೯ ದಿನಗಳಿರುವಾಗ ಮೂರನೇ ಹಾಗೂ ಕೊನೆಯ ಬಾರಿ ಪ್ರಕಟಣೆ ನೀಡಬೇಕು. ಅಂದರೆ ಮತದಾನಕ್ಕೆ ಎರಡು ಮುಂಚೆ ಪ್ರಕಟಣೆ ಹೊರಡಿಸಬೇಕು ಎಂದು ಆಯೋಗ ನಿರ್ದೇಶನ ನೀಡಿದೆ.

ಅವಿರೋಧವಾಗಿ ಆಯ್ಕೆಯಾದವರಿಗೆ ಅಥವಾ ಚುನಾವಣೆಯಲ್ಲಿ ಸ್ಪರ್ಧಿಸದೇ ಜಯಗಳಿಸಿದವರಿಗೂ ಇದು ಅನ್ವಯಿಸಲಿದೆ ಎಂದು ಆಯೋಗ ಸ್ಪಷ್ಟಪಡಿಸಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.