ಸೆ.14ರಿಂದ ಕುಕ್ಕೆ ಶ್ರೀ ಸುಬ್ರಹ್ಮಣ್ಯದಲ್ಲಿ ಪೂಜಾ ಸೇವೆಗಳು ಪುನರಾರಂಭ

Puttur_Advt_NewsUnder_1
Puttur_Advt_NewsUnder_1

ಕಡಬ : ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಕೋರೋನಾ ಲಾಕ್ ಡೌನ್ ಬಳಿಕ ಸ್ಥಗಿತಗೊಂಡಿದ್ದ ಪೂಜಾ ಸೇವೆಗಳು ಸೆ.14ರಿಂದ ಮತ್ತೆ ಆರಂಭಗೊಳ್ಳಲಿದೆ .

ಕಳೆದೊಂದು ತಿಂಗಳಿನಿಂದ ದೇವರ ದರ್ಶನ ಆರಂಭವಾಗಿದ್ದರೂ ಸೇವೆಗಳು ಆರಂಭವಾಗಿರಲಿಲ್ಲ. ಸೆ.1ರಿಂದ ಕರ್ನಾಟಕದ ಹೆಚ್ಚಿನ ದೇವಸ್ಥಾನಗಳಲ್ಲಿ ಸೇವೆಗಳು ಆರಂಭವಾಗಿತ್ತು. ಆದರೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಯಾವುದೇ ಸೂಚನೆ ಬರದ ಹಿನ್ನೆಲೆಯಲ್ಲಿ ಪೂಜಾ ಸೇವೆ ಆರಂಭವಾಗಿರಲಿಲ್ಲ.

ದಿನಕ್ಕೆ 30 ಸರ್ಪಸಂಸ್ಕಾರ, 30 ನಾಗ ಪ್ರತಿಷ್ಠೆ, ಬೆಳಗ್ಗಿನ ಎರಡು ಪಾಳಿಯ ಆಶ್ಲೇಷ ಪೂಜೆ ತಲಾ 30 ರಂತೆ, ಮಹಾಪೂಜೆ ಮತ್ತು ಪಂಚಾಮೃತಾಭಿಷೇಕ ತಲಾ 10 ರಂತೆ ಮಾಡಲು ಅವಕಾಶ ಕಲ್ಪಿಸಲಾಗಿದೆ. ಯಾವುದೇ ಸೇವೆಗೆ ಇಬ್ಬರಿಗೆ ಮಾತ್ರ ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ. ಅನ್ನ ಪ್ರಸಾದ ವ್ಯವಸ್ಥೆ ಸೇವಾರ್ಥಿಗಳಿಗೆ ಮಾತ್ರ ಇರಲಿದೆ. ಸರ್ಪ ಸಂಸ್ಕಾರ ಸೇವೆಯೂ ಈಗಾಗಲೇ ಮೂರು ಸಾವಿರಕ್ಕೂ ಮೇಲ್ಪಟ್ಟು ಬುಕ್ಕಿಂಗ್ ಆಗಿದ್ದು ಈಗಾಗಲೇ ಇದ್ದು ಹೊಸದಾಗಿ ಸೇವೆಗೆ ಅವಕಾಶ ವಿರುವುದಿಲ್ಲ ಎಂದು ದೇವಸ್ಥಾನದ ಮೂಲಗಳಿಂದ ತಿಳಿದು ಬಂದಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.