ಕೆಮ್ಮಿಂಜೆ ಶ್ರೀ ಷಣ್ಮುಖ ಮಹಾವಿಷ್ಣು ಸೇವಾ ಟ್ರಸ್ಟ್‌ನಿಂದ ದೇವಸ್ಥಾನದ ಹಿತಾಸಕ್ತಿಗೆ ಧಕ್ಕೆ,ಆದಾಯಕ್ಕೆ ನಷ್ಟ- ವ್ಯವಸ್ಥಾಪನಾ ಸಮಿತಿ ನಿಕಟಪೂರ್ವ ಅಧ್ಯಕ್ಷ ಕೇಶವ ಪೂಜಾರಿ ಬೆದ್ರಾಳ ಆರೋಪ

Puttur_Advt_NewsUnder_1
Puttur_Advt_NewsUnder_1

ಪುತ್ತೂರು:ಕೆಮ್ಮಿಂಜೆ ಶ್ರೀ ಷಣ್ಮುಖ ಸುಬ್ರಹ್ಮಣ್ಯ ಮಹಾವಿಷ್ಣು ದೇವಸ್ಥಾನದ ಹೆಸರಿನಲ್ಲಿ, ದೇವಸ್ಥಾನದ ಅಭಿವೃದ್ಧಿಗೆ ಎಂದು ಹೇಳಿ ಸ್ಥಾಪಿತಗೊಂಡ ಶ್ರೀ ಷಣ್ಮುಖ ಮಹಾವಿಷ್ಣು ಸೇವಾ ಟ್ರಸ್ಟ್‌ನಿಂದ ದೇವಸ್ಥಾನದ ಹಿತಾಸಕ್ತಿಗೆ ಧಕ್ಕೆ ಹಾಗೂ ದೇವಸ್ಥಾನದ ಆದಾಯಕ್ಕೆ ನಷ್ಟ ಉಂಟಾಗಿದೆ ಎಂದು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ನಿಕಟಪೂರ್ವ ಅಧ್ಯಕ್ಷ ಕೇಶವ ಪೂಜಾರಿ ಬೆದ್ರಾಳ ಆರೋಪಿಸಿದ್ದಾರೆ.

ಸೆ.14ರಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಕೆಮ್ಮಿಂಜೆ ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನ ಹಿಂದೂ ಧಾರ್ಮಿಕ ದತ್ತಿ ಇಲಾಖೆಗೆ ಒಳಪಟ್ಟ ದೇವಸ್ಥಾನವಾಗಿದೆ. ಈ ದೇವಸ್ಥಾನದ ಅತೀ ಸಮೀಪದಲ್ಲಿ. ದೇವಸ್ಥಾನದ ಹೆಸರು ಬಳಸಿಕೊಂಡು, ಬಹುತೇಕ ಒಂದೇ ಜಾತಿಯ ವ್ಯಕ್ತಿಗಳನ್ನು ಒಳಗೊಂಡ ಖಾಸಗಿ ಟ್ರಸ್ಟ್‌ನ್ನು ಇಲಾಖೆಯ ಯಾವುದೇ ಅನುಮತಿಯಿಲ್ಲದೆ ಸ್ಥಾಪಿಸಲಾಗಿದೆ. ಈ ಟ್ರಸ್ಟ್ 2010ರಲ್ಲಿ ನೋಂದಾವಣಿ ಆಗಿದ್ದು, ಪ್ರಾಚೀನ ಕಾಲದಿಂದ ಕೆಮ್ಮಿಂಜೆಯಲ್ಲಿ ಶ್ರೀ ಷಣ್ಮುಖ ದೇವರ ಸಾನಿಧ್ಯವಿದ್ದು ಶ್ರೀ ಕ್ಷೇತ್ರದ ಪಾವಿತ್ರ್ಯತೆಯನ್ನು ಇನ್ನಷ್ಟು ಹೆಚ್ಚಿಸಲು ಸುಬ್ರಹ್ಮಣ್ಯ ದೇವರ ಜೊತೆಗೆ ಶ್ರೀ ಮಹಾವಿಷ್ಣು ದೇವರ ಗುಡಿಯನ್ನು ಪ್ರತಿಷ್ಟಾಪಿಸುಬೇಕೆಂದು ಕಂಡುಬಂದಂತೆ ಶ್ರೀ ಮಹಾವಿಷ್ಣು ದೇವರ ಗುಡಿ ಮತ್ತು ಶ್ರೀ ಷಣ್ಮುಖ ದೇವರ ಗುಡಿಯ ಜೀರ್ಣೋದ್ಧಾರ ಕೆಲಸಗಳು, ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗಾಗಿ ಏಕಸೂತ್ರ ಕೇಂದ್ರೀಕೃತವಾಗಿ ಜೀರ್ಣೋದ್ಧಾರ ನಡೆಸುವ ಸಲುವಾಗಿ ದೇವಸ್ಥಾನದಲ್ಲಿ ೨೦೧೯ನೇ ಜುಲೈ ೬ರಂದು ನಡೆದ ಸಭೆಯಲ್ಲಿ ಸಮಿತಿ ರಚಿಸಲು ನಿರ್ಣಯಿಸಲಾಗಿತ್ತು ಈ ಸಭೆಯ ನಿರ್ಣಯದಂತೆ ನ್ಯಾಸ ಪತ್ರ ಮಾಡಿಕೊಂಡಿದ್ದು ದೇವಸ್ಥಾನದ ಅಭಿವೃದ್ಧಿ ಕಾರ್ಯಗಳಿಗಾಗಿ ಹಣ ಸಂಗ್ರಹಿಸುವುದು, ಸ್ಥಿರ ಚರ ಸೊತ್ತುಗಳನ್ನು ಹೊಂದುವುದು, ಕಲ್ಯಾಣ ಮಂಟಪ, ಕಲಾ ಮಂಟಪ ಇತ್ಯಾದಿಗಳನ್ನು ರಚಿಸುವುದು ಎಂದು ಟ್ರಸ್ಟ್ ಡೀಡ್‌ನಲ್ಲಿ ನೋಂದಾವಣೆ ಮಾಡಲಾಗಿದೆ.

2012ರ ಏಪ್ರೀಲ್ 28ರಂದು ನಡೆದ ವ್ಯವಸ್ಥಾಪನಾ ಸಮಿತಿಯ ಸಭೆಯಲ್ಲಿ ಶ್ರೀ ದೇವಳದ ಜೀರ್ಣೋದ್ಧಾರ, ಬ್ರಹ್ಮಕಲಶೋತ್ಸವ ನಡೆಸುವ ಬಗ್ಗೆ ನಿರ್ಣಯಿಸಲಾಗಿತ್ತು. ಆ ಬಳಿಕ ಆಗಸ್ಟ್ ೧೬ರಂದು ನಡೆದ ಸಭೆಯಲ್ಲಿ ಶ್ರೀ ದೇವಳದ ತೆಂಕು ದಿಕ್ಕಿನಲ್ಲಿ ಯೋಜಿತ ಪಾಠಶಾಲೆ, ಅರ್ಚಕರ ಮನೆ, ಅರ್ಚಕರ ಮನೆಗೆ ಹೊಂದಿಕೊಂಡು ದೇವಳದ ಪ್ರಾಂಗಣದವರೆಗೆ ಸಭಾ ಭವನವನ್ನು ನಿರ್ಮಿಸಲು ನಿರ್ಣಯಿಸಲಾಗಿತ್ತು. ಈ ನಿರ್ಣಯಗಳು ಶ್ರೀ ದೇವಳದ ಅಂದಿನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾಗಿದ್ದ ಜಯರಾಮ ಕೆದಿಲಾಯರವರ ಅಧ್ಯಕ್ಷತೆಯಲ್ಲಿ ಮಾಡಲ್ಪಟ್ಟಿದೆ. ೨೦೧೨ರಲ್ಲಿ ಸಾರ್ವಜನಿಕರ ದೇಣಿಗೆ, ದೇವಸ್ಥಾನ ಹಾಗೂ ಸರಕಾರದ ಅನುದಾನದಿಂದ ದೇವಸ್ಥಾನದ ತೆಂಕು ಬಲಭಾಗದಲ್ಲಿ ಪಾಕಶಾಲೆ, ಅರ್ಚಕರ ಮನೆ, ಸಭಾ ಭವನ ನಿರ್ಮಿಸುವುದು ಜೊತೆಗೆ ದೇವಸ್ಥಾನ ಜೀರ್ಣೋದ್ಧಾರ, ಬ್ರಹ್ಮಕಲಶೋತ್ಸವದ ನಡೆಸಲಾಗಿದೆ. ಸದ್ರಿ ಪಾಕಶಾಲೆ, ಅರ್ಚಕರ ಮನೆ, ಸಭಾಭವನ ನೀರು, ವಿದ್ಯುತ್ ವ್ಯವಸ್ಥೆಯನ್ನು ಆಂದು ದೇವಸ್ಥಾನದಿಂದ ಸಂಪರ್ಕ ಮಾಡಿಕೊಂಡಲಾಗಿತ್ತು. ದೇವಸ್ಥಾನದ ಬಲಭಾಗದಲ್ಲಿ ನಿರ್ಮಿಸಲಾಗಿರುವ ಸಭಾಭವನ ದೇವಸ್ಥಾನದ ಅಧೀನದಲ್ಲಿ ದೇವಸ್ಥಾನದ ಉಪಯೋಗಕ್ಕಾಗಿ ಇರುವುದಾಗಿ ನಂಬಿದ ಭಕ್ತಾದಿಗಳು ಇದರ ನಿರ್ಮಾಣಕ್ಕೆ ದೇಣಿಗೆ ನೀಡಿರುತ್ತಾರೆ. ವಿಪರ್ಯಾಸವೆಂದರೆ, ದೇವಸ್ಥಾನದ ಬಲಭಾಗದಲ್ಲಿ ಸಭಾಭವನ ನಿರ್ಮಾಣವಾದ ನಂತರ ಈ ಸಭಾಭವನ ನಮ್ಮ ಖಾಸಗಿ ಹಕ್ಕಿನದಾಗಿರುತ್ತದೆ ಎಂದು ಹೇಳಿಕೊಂಡಿರುವ ಶ್ರೀ ಷಣ್ಮುಖ ಮಹಾವಿಷ್ಣು ಸೇವಾ ಟ್ರಸ್ಟ್‌ನವರು ಸಭಾಭವನಕ್ಕೆ ಶ್ರೀ ಷಣ್ಮುಖ ಮಹಾವಿಷ್ಣು ಸಭಾ ಭವನ ಎಂದು ಬೋರ್ಡ್ ಹಾಕಿಕೊಂಡು ಶ್ರೀ ದೇವಳದಲ್ಲಿ ನಡೆಯುವ ವಿಶೇಷ ಸೇವೆ, ಹೋಮ, ಮದುವೆ ಇತ್ಯಾದಿ ಕಾರ್ಯಗಳನ್ನು ನಡೆಸಿಕೊಂಡು ಶ್ರೀ ದೇವಳದ ಹಿತಾಸಕ್ತಿಗೆ ಧಕ್ಕೆ ಉಂಟು ಮಾಡುತ್ತಿದೆ ಶ್ರೀ ದೇವಳದ ಆದಾಯ ನಷ್ಟ ಉಂಟುಮಾಡುತ್ತಿದ್ದಾರೆ ಎಂದು ಅವರು ಆರೋಪಿಸಿದರು.

ಧಾರ್ಮಿಕ ದತ್ತಿ ಇಲಾಖೆಗೆ ದೂರು:
ಧಾರ್ಮಿಕ ದತ್ತಿ ಇಲಾಖೆಗೆ ಸೇರಿದ ದೇವಸ್ಥಾನಗಳಿಗೆ ನ್ಯಾಯಯುತವಾಗಿ ಸೇರಬೇಕಾದ ಭಕ್ತಾದಿಗಳ ದೇಣಿಗೆಗಳನ್ನು ಅಕ್ರಮವಾಗಿ ವಸೂಲಿ ಮಾಡುತ್ತಿರುವ ಖಾಸಗಿ ಸಂಘ ಸಂಸ್ಥೆ/ ಟ್ರಸ್ಟ್‌ಗಳನ್ನು ನಿಯಂತ್ರಿಸಲು ಹಾಗೂ ದೇವಸ್ಥಾನಗಳ ಆಡಳಿತದಲ್ಲಿ ಯಾವುದೇ ಹಸ್ತಾಕ್ಷೇಪ ಮಾಡದಂತೆ ತಡೆಯುವುದು ಹಾಗೂ ಈ ದೇವಾಲಯಗಳ, ದೇವರುಗಳ ಭಾವಚಿತ್ರವುಳ್ಳ ಮುದ್ರಾಂಕ ದೊಂದಿಗೆ ಯಾವುದೇ ಖಾಸಗಿ ಸಂಘ/ಸಂಸ್ಥೆ/ ಟ್ರಸ್ಟ್‌ಗಳನ್ನು ವ್ಯಕ್ತಿಗಳನ್ನು ನೋಂದಾಯಿಸುವುದನ್ನು ನಿಷೇಧಿಸಲಾಗಿದೆ. ಹಾಗೂ ಈಗಾಗಲೇ ಮುಜರಾಯಿ ಇಲಾಖೆಗೆ ಒಳಪಟ್ಟ ಅಧಿಸೂಚಿತ ಸಂಸ್ಥೆಗಳ ಹೆಸರಿನಲ್ಲಿ ಅಸ್ತಿತ್ವದಲ್ಲಿರುವ ಇಂತಹ ಖಾಸಗಿ ಸಂಘ/ಸಂಸ್ಥೆ/ ಟ್ರಸ್ಟ್‌ಗಳು ಅಸಿಂಧುವಾಗುತ್ತವೆ. ಒಂದು ವೇಳೆ ಇಂತಹ ಅನಧಿಕೃತ ಚಟುವಟಿಕೆಗಳು ಮುಂದುವರೆಸಿದರೆ ಅವುಗಳ ಅಂತ ಸಂಘ ಸಂಸ್ಥೆ/ ಟ್ರಸ್ಟ್ | ವ್ಯಕ್ತಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ೨೦೧೫ರಲ್ಲಿ ರಾಜ್ಯ ಸರಕಾರ ಅದೇಶ ನೀಡಿದೆ. ಹೀಗಾಗಿ ಕೆಮ್ಮಿಂಜೆ ಶ್ರೀ ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನದ ಹೆಸರಿನಲ್ಲಿ ಅನಧಿಕೃತವಾಗಿ ದೇವಸ್ಥಾನದ ಹಿತಾಸಕ್ತಿಗೆ ವಿರುದ್ಧವಾಗಿ ಕಾರ್ಯ ಚಟುವಟಿಕೆ ಮಾಡುತ್ತಿರುವ “ಶ್ರೀ ಷಣ್ಮುಖ ಮಹಾವಿಷ್ಣು ಸೇವಾ ಟ್ರಸ್ಟ್‌ನ ವಿರುದ್ಧ ಹಿಂದೂ ಧಾರ್ಮಿಕ ದತ್ತಿ ಇಲಾಖೆಗೆ ದೂರು ನೀಡಲಾಗಿದೆ. ಇದರಲ್ಲಿ ಯಾವುದೇ ವೈಯಕ್ತಿಕ ದ್ವೇಷ ಇಲ್ಲ ಎಂದರು.

೨೦೧೨ರಲ್ಲಿ ಆಡಳಿತದಲ್ಲಿದ್ದ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯವರು ದೇವಸ್ಥಾನದಲ್ಲಿ ನಿರ್ಮಿಸಿದ ಪಾಕಶಾಲೆ, ಅರ್ಚಕರ ಮನೆ, ಸಭಾಭವನ ನಿರ್ಮಾಣದ ಬಗ್ಗೆ, ಜೀರ್ಣೋದ್ಧಾರ, ಬ್ರಹ್ಮಕಲಶೋತ್ಸವದ ಬಗ್ಗೆ ಧಾರ್ಮಿಕ ದತ್ತಿ ಇಲಾಖೆಯಿಂದ ಪಡೆದ ಪೂರ್ವಾನುಮತಿ ಹಾಗೂ ಈ ಎಲ್ಲಾ ಕಾಮಗಾರಿಗಳ ಬಗ್ಗೆ ಇಲಾಖೆಗೆ ಲೆಕ್ಕಪತ್ರ ಸಲ್ಲಿಸಿದರೆ ಅದರ ದಾಖಲೆ ಸಂಗ್ರಹ, ಖರ್ಚು ವೆಚ್ಚಗಳ ವೋಚರ್ ಸಹಿತ ಎಲ್ಲಾ ದಾಖಲೆಗಳನ್ನು ಸಾರ್ವಜನಿಕರ ಮುಂದೆ ಬಹಿರಂಗಪಡಿಸುವಂತೆ ಅವರು ಹೇಳಿದರು.  ನಮ್ಮ ಆಡಳಿತ ಅವಧಿಯಲ್ಲಿ ದೇವಸ್ಥಾನದಲ್ಲಿ ನಡೆದಂತಹ ಎಲ್ಲಾ ಧಾರ್ಮಿಕ ಕಾರ್ಯಕ್ರಮ ಉತ್ಸವಾದಿಗಳು, ಕ್ಷೇತ್ರದ ತಂತ್ರಿಗಳಾದ ಕೆಮ್ಮಿಂಜೆ ಬ್ರಹ್ಮಶ್ರೀ ನಾಗೇಶ ತಂತ್ರಿಗಳವರ ನೇತೃತ್ವದಲ್ಲಿ ಮತ್ತು ಅವರ ಮಾರ್ಗದರ್ಶನದಲ್ಲಿ ನೆರವೇರುತ್ತಿದೆ ಎಂದು ಅವರು ಹೇಳಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.