ಹಿರಿಯ ಉದ್ಯಮಿ ಮುನ್ನಾ ಇಲೆಕ್ಟ್ರಿಕಲ್ಸ್ ಸ್ಥಾಪಕ ಕೆ.ನಾರಾಯಣ ಭಟ್ ಹೃದಯಾಘಾತದಿಂದ ನಿಧನ

Puttur_Advt_NewsUnder_1
Puttur_Advt_NewsUnder_1


ಪುತ್ತೂರು: ಪುತ್ತೂರಿನ ಹಿರಿಯ ಉದ್ಯಮಿ ಮುನ್ನಾ ಇಲೆಕ್ಟ್ರಿಕಲ್ಸ್‌ನ ಸಂಸ್ಥಾಪಕ ಉರ್ಲಾಂಡಿ ನಿವಾಸಿ ಕೆ.ನಾರಾಯಣ ಭಟ್(77ವ)ರವರು ಹೃದಯಘಾತದಿಂದ ಸೆ.14ರಂದು ಸ್ವಗೃಹದಲ್ಲಿ ನಿಧನರಾದರು. ಇಲೆಕ್ಟ್ರಿಕಲ್ ಉದ್ಯಮ ಮತ್ತು ಗುತ್ತಿಗೆಯಲ್ಲಿ ಸುಮಾರು ೫೧ ವರ್ಷಗಳ ಅನುಭವಸ್ಥರಾಗಿದ್ದ ಕೆ.ನಾರಾಯಣ ಭಟ್ ಅವರು 1967ರಲ್ಲಿ ಪುತ್ತೂರು ಪ್ರಧಾನ ಅಂಚೆ ಕಚೇರಿಯ ಬಳಿ ಮುನ್ನಾ ಇಲೆಕ್ಟ್ರಿಕಲ್ಸ್ ಸಂಸ್ಥೆ ಆರಂಭಿಸಿದ್ದರು. ಇತ್ತೀಚಿಗಿನ ವರ್ಷಗಳಲ್ಲಿ ಅವರ ಪುತ್ರ ಕೃಷ್ಣಪ್ರಶಾಂತ್ ಅವರು ತಂದೆಯ ಉದ್ಯಮ ಕ್ಷೇತ್ರವನ್ನು ಮುಂದುವರಿಸಿದ್ದು, ಪಡೀಲ್‌ನಲ್ಲಿ ಮುನ್ನಾ ಇಲೆಕ್ಟ್ರಿಕಲ್ಸ್‌ನ ವಿಸ್ತೃತ ಮಳಿಗೆ ಆರಂಭಿಸಿದ್ದರು. ಕೆ.ನಾರಾಯಣ ಭಟ್ ಅವರು ಅನಾರೋಗ್ಯದಿಂದ್ದ ಹಿನ್ನೆಲೆಯಲ್ಲಿ ಮನೆಯಲ್ಲೇ ಆರೈಕೆ ಪಡೆಯುತ್ತಿದ್ದರು. ಸೆ.14ರಂದು ಅವರು ಡಯಾಲೀಸಿಸ್‌ಗೆಂದು ಪುತ್ರ ಕೃಷ್ಣಪ್ರಶಾಂತ್ ಅವರ ಜೊತೆ ಹೊರಟಾಗ ಹೃದಯಾಘಾತಗೊಂಡು ಮೃತಪಟ್ಟಿದ್ದಾರೆ. ಮೃತ ಕೆ.ನಾರಾಯಣ ಭಟ್ ಅವರು ವಿದ್ಯುತ್ ಗುತ್ತಿಗೆದಾರರ ಸಂಘದ ಸದಸ್ಯರಾಗಿದ್ದು, ಜೆಸಿಐ ಮಾಜಿ ಸದಸ್ಯರಾಗಿದ್ದರು. ಮೃತರು ಪತ್ನಿ ಹೇಮಾವತಿ, ಪುತ್ರ ಬೆಂಗಳೂರು ಜಿಯೋ ಇಂಜಿನಿಯರಿಂಗ್ ಸಂಸ್ಥೆಯಲ್ಲಿರುವ ಜಯಪ್ರಕಾಶ್, ಮುನ್ನಾ ಇಲೆಕ್ಟ್ರಿಕಲ್ಸ್‌ನ ಕೃಷ್ಣಪ್ರಶಾಂತ್, ಪುತ್ರಿ ಬೆಳಾಂನಲ್ಲಿರುವ ಅನುರಾಧಾ ಅವರನ್ನು ಅಗಲಿದ್ದಾರೆ. ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿ, ವಿದ್ಯುತ್ ಗುತ್ತಿಗೆದಾರರ ಸಂಘದ ಅಧ್ಯಕ್ಷ ಹರಿಪ್ರಸಾದ್, ಮೆಸ್ಕಾಂ ಇಂಜಿನಿಯರ್‌ಗಳು ಸೇರಿದಂತೆ ಹಲವಾರು ಮಂದಿ ಮೃತರ ಮನೆಗೆ ಭೇಟಿ ನೀಡಿ ಸಂತಾಪ ವ್ಯಕ್ತಪಡಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.