ಆರೋಗ್ಯ ದೃಷ್ಟಿಯಿಂದ ಮೋದಿಕೇರ್‌ನಿಂದ ತನ್ನದೇ ಆದ ಕೊಡುಗೆ- ಮೋದಿ ಕೇರ್ ಸ್ವದೇಶಿ ಉತ್ಪನ್ನ ಮಳಿಗೆ ಉದ್ಘಾಟಿಸಿದ ಶಾಸಕ ಸಂಜೀವ ಮಠಂದೂರು

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಸ್ವಾಭಿಮಾನಿ ಸಂಕೇತದ ಮೋದಿಕೇರ್, ಸ್ವಾವಲಂಬಿ ಕಲ್ಪಣೆಯನ್ನು ಮುಂದಿಟ್ಟು ಕೊಂಡು ದೇಶದಲ್ಲಿ ಹುಟ್ಟಿಕೊಂಡಿದೆ. ಆರೋಗ್ಯ ದೃಷ್ಟಿಯಿಂದ ಮೋದಿಕೇರ್ ಸಂಸ್ಥೆ ತನ್ನದೇ ಆದ ಕೊಡುಗೆಯನ್ನು ನೀಡಿದೆ ಎಂದು ಶಾಸಕ ಸಂಜೀವ ಮಠಂದೂರು ಹೇಳಿದರು. ಬೊಳುವಾರಿನಿಂದ ನೆಹರುನಗರ ಸುಲೈಮಾನ್ ಟವರ್‌ಗೆ ಸ್ಥಳಾಂತರಗೊಂಡ ಮೋದಿಕೇರ್ ಸ್ವದೇಶಿ ಉತ್ಪನ್ನಗಳ ಮಳಿಗೆಯನ್ನು ಸೆ.೧೪ರಂದು ಅವರು ಉದ್ಘಾಟಿಸಿ ಮಾತನಾಡಿದರು. ಪ್ರಧಾನಿ ನರೇಂದ್ರ ಮೋದಿಯವರ ಲೋಕಲ್ ಪಾರ್ ಓಕಲ್ ಎಂಬಂತೆ ಮೇಕ್‌ಇನ್ ಇಂಡಿಯಾ ಮೂಲಕ ಇವತ್ತು ಜಗತ್ತಿನಲ್ಲಿ ಭಾರತ ಗುರುತಿಸಿಕೊಂಡಿದೆ. ಸ್ವದೇಶಿ ಜೊತೆ ಸಾವಯವ ಬದುಕು. ಆರೋಗ್ಯ ದೃಷ್ಟಿಯಿಂದ ಇವೆಲ್ಲ ಅಗತ್ಯ. ಇದಕ್ಕೆ ಪೂರಕ ಎಂಬಂತೆ ಮೋದಿಕೇರ್ ತನ್ನದೇ ಆದ ಕೊಡುಗೆಯನ್ನು ನೀಡಿದೆ. ಆರೋಗ್ಯ ಕಾಪಾಡುವ ದೃಷ್ಟಿಯಿಂದ ಮೋದಿ ಕೇರ್ ಹೆಚ್ಚು ಹೆಚ್ಚು ಉತ್ಪನ್ನವನ್ನು ಕೊಡಲಿ ಎಂದರು.

ಪ್ರಧಾನಿಯವರ ಉದ್ದೇಶಕ್ಕೆ ತಕ್ಕಂತೆ ಸ್ವದೇಶಿ ಮಳಿಗೆ:
ಬಂಟ್ವಾಳ ಪುರಸಭೆ ಮಾಜಿ ಅಧ್ಯಕ್ಷ ರಾಮಕೃಷ್ಣ ಆಳ್ವ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ಪ್ರಚಾರದ ಮೂಲಕ ಗುಣಮಟ್ಟ ಹೆಚ್ಚಿಸುವ ಹಲವು ಕಂಪೆನಿಗಳ ನಡುವೆ ಪ್ರಚಾರವಿಲ್ಲದೆ ಉದೋಗಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡಿ ಪ್ರಧಾನಿಯವರ ಉದ್ದೇಶಕ್ಕೆ ತಕ್ಕಂತೆ ಸ್ವದೇಶಿ ಮಳಿಗೆ ಆರಂಭಗೊಂಡಿರುವುದು ಉತ್ತಮ ವಿಚಾರ ಎಂದರು. ಸುಲೈಮಾನ್ ಟವರ್‌ನ ಮಾಲಕ ಪಾರೂಕ್, ಕೀರ್ತನಾ ಡೆವಲಪರ್‌ನ ಪ್ರತಾಪ್ ಸಿಂಹ ನಾಯಕ್, ಬಾಬುಗೌಡ ಉಪಸ್ಥಿತರಿದ್ದರು. . ಸಂಸ್ಥೆಯಿಂದ ಕೇವಲ ೬ ತಿಂಗಳಲ್ಲಿ ಉತ್ತಮ ಪ್ರೋತ್ಸಾಹ ಪಡೆದ ಪವನ್ ತಮ್ಮ ಅಭಿಪ್ರಾಯ ಹಂಚಿಕೊಂಡರು. ಸಂಸ್ಥೆಯ ಕ್ರೌನ್ ಡೈಮಂಡ್ ಡೈರೆಕ್ಟರ್ ತಾರನಾಥ್ ಅವರು ಮೋದಿಕೇರ್ ಸಂಸ್ಥೆಯ ಉತ್ಪನ್ನಗಳ ಕುರಿತು ಪರಿಚಯಿಸಿದರು. ಸಂಸ್ಥೆಯ ವಿತರಕ ಶಾಖೆಯ ಮಾಲಕಿ ವಸಂತಿ ಸ್ವಾಗತಿಸಿ, ತರಬೇತಿ ಸೆಂಟರ್ ಮಾಲಕ ಶಂಕರ್ ಭಟ್ ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.