ಬಂಬಿಲ ಮೀನಕೊಳಂಜಿಯಲ್ಲಿ ನ್ಯಾಯವಾದಿ ಬಿ.ಎಂ.ದುಗ್ಗಪ್ಪ ರವರಿಗೆ ಶ್ರದ್ಧಾಂಜಲಿ

Puttur_Advt_NewsUnder_1
Puttur_Advt_NewsUnder_1
  • ವೃತ್ತಿಯಲ್ಲಿ ದುಗ್ಗಪ್ಪರವರ ಸಾಧನೆ ಸಮಾಜಕ್ಕೆ ಮಾದರಿ- ತಾರಾನಾಥ ಸವಣೂರು

ಪುತ್ತೂರು: ಅ. 28ರಂದು ನಿಧನರಾದ ಮಂಗಳೂರು ಜಿಲ್ಲಾ ನ್ಯಾಯಾಲಯದ ವಕೀಲ  ಬಿ.ಎಂ.ದುಗ್ಗಪ್ಪರವರ ವೈಕುಂಠ ಸಮಾರಾಧನೆ ಕಾರ್‍ಯಕ್ರಮ ಸೆ. 14ರಂದು ಸವಣೂರು ಸಮೀಪದ ಬಂಬಿಲ ಮೀನಕೊಳಂಜಿಯಲ್ಲಿ ನಡೆಯಿತು.

ಈ ಸಂದರ್ಭದಲ್ಲಿ ಜರಗಿದ ಶ್ರದ್ಧಾಂಜಲಿ ಕಾರ್‍ಯಕ್ರಮದಲ್ಲಿ ಶಿಕ್ಷಕ ತಾರಾನಾಥ ಸವಣೂರುರವರು ಮಾತನಾಡಿ ನ್ಯಾಯವಾದಿಯಾಗಿ ದುಗ್ಗಪ್ಪರವರು ನೇರ ನಡೆನುಡಿಯಿಂದ ಹೆಸರನ್ನು ಪಡೆದಿದ್ದರು. ತಮ್ಮ ವೃತ್ತಿ ಮತ್ತು ಬದುಕಿನಲ್ಲಿ ಎಲ್ಲರೊಂದಿಗೆ ಅತ್ಮೀಯರಾಗಿದ್ದ ದುಗ್ಗಪ್ಪರವರು ಶ್ರಮದಿಂದ ಶಿಕ್ಷಣವನ್ನು ಪಡೆದು, ವೃತ್ತಿಯಲ್ಲಿ ಅರ್ಥಪೂರ್ಣ ಬದುಕನ್ನು ಸಾಗಿಸಿ, ಸಮಾಜಕ್ಕೆ ಮಾದರಿ ವ್ಯಕ್ತಿಯಾಗಿದ್ದರು. ಸಮಾಜ ಮತ್ತು ತನ್ನ ಕುಟುಂಬದೊಂದಿಗೆ ಅಕ್ಕರೆಯ ಬಾಳನ್ನು ಸಾಗಿಸಿದ್ದ, ದುಗ್ಗಪ್ಪರವರು ಅಕಾಲಿಕವಾಗಿ ನಮ್ಮನ್ನು ಬಿಟ್ಟು ದೇವರ ಪಾದ ಸೇರಿದ್ದಾರೆ. ಆದರೂ ಅವರ ನೆನಪು ಸದಾ ನಮ್ಮಲ್ಲಿ ಅಜರಾಮರವಾಗಿದೆ ಎಂದು ನುಡಿನಮನ ಸಲ್ಲಿಸಿದ್ದರು.

ದುಗ್ಗಪ್ಪರವರ ತಾಯಿ ಮಾಯಿಲು, ಪತ್ನಿ ಕವಿತಾ, ಮಕ್ಕಳಾದ ನಿಹಾರಿಕ, ಐಶಾನಿ, ಸಹೋದರರಾದ ಲಿಂಗಪ್ಪ ಗೌಡ, ಶೇಷಪ್ಪ ಬಿ, ನಾರ್ಣಪ್ಪ ಗೌಡ, ರಾಮಣ್ಣ ಗೌಡ, ಸಹೋದರಿಯರಾದ ಬಾಲಕ್ಕ ಹಾಗೂ ಲಕ್ಷ್ಮಿ ಮತ್ತು ಕುಟುಂಬಸ್ಥರು ಹಾಗೂ ಹಿತೈಷಿಗಳು, ಊರವರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.