ಪ್ರಧಾನಿ ನರೇಂದ್ರ ಮೋದಿಯವರ 70ನೇ ಜನ್ಮ ದಿನಾಚರಣೆ – ಸೇವಾ ಸಪ್ತಾಹ

Puttur_Advt_NewsUnder_1
Puttur_Advt_NewsUnder_1
 • ಕಬಕದಲ್ಲಿ ಬಿಜೆಪಿಯಿಂದ ಉಚಿತ ಕಿಸಾನ್ ಸಮ್ಮಾನ್ ನೋಂದಣಿ ಅಭಿಯಾನ
 • ಜಿಲ್ಲೆಯಲ್ಲೇ ಪ್ರಥಮ ಬಾರಿಗೆ ಕಬಕದಲ್ಲಿ ಆಯೋಜನೆಗೊಂಡ ಕಾರ್ಯಕ್ರಮ

  ಸರಕಾರದಿಂದ ಕೃಷಿಕರ ಋಣ ತೀರಿಸುವ ಕೆಲಸ – ಸಂಜೀವ ಮಠಂದೂರು
  ಕೋವಿಡ್‌ನಲ್ಲೂ ಅನುದಾನ ನೀಡಿದ ಸರಕಾರ – ಮೀನಾಕ್ಷಿ ಶಾಂತಿಗೋಡು
  ಪುತ್ತೂರಿನಲ್ಲಿ ಜಿಲ್ಲಾ ಮಟ್ಟದ ರೈತ ಸಮಾವೇಶ – ರಾಧಾಕೃಷ್ಣ ಬೊಳ್ಳಾರು
  ಜನಸೇವೆ ಬಿಜಿಪಿಯಿಂದ ಮಾತ್ರ ಸಾಧ್ಯ- ಪಿ.ಜಿ.ಜಗನ್ನಿವಾಸ ರಾವ್
  ಪಕ್ಷದ ಕಾರ್ಯದಲ್ಲಿ ಪುತ್ತೂರು ಮುಂಚೂಣಿಯಲ್ಲಿದೆ – ಚನಿಲ ತಿಮ್ಮಪ್ಪ ಶೆಟ್ಟಿ

ಪುತ್ತೂರು: ಪ್ರಧಾನಿ ನರೇಂದ್ರ ಮೋದಿಯವರ ೭೦ ನೇ ಜನ್ಮ ದಿನಾಚರಣೆಯ ಅಂಗವಾಗಿ ಬಿಜೆಪಿ ಗ್ರಾಮಾಂತರ ಮಂಡಲ ಮತ್ತು ರೈತ ಮೋರ್ಚಾದಿಂದ ಸೇವಾ ಸಪ್ತಾಹ ಕಾರ್ಯಕ್ರಮ ಸೆ.೧೪ ರಂದು ಕಬಕ ಶ್ರೀ ಮಹಾದೇವಿ ಸಭಾ ಭವನದಲ್ಲಿ ನಡೆದಿದ್ದು, ಜಿಲ್ಲೆಯಲ್ಲೇ ಪ್ರಥಮ ಬಾರಿಗೆ ಉಚಿತ ಕಿಸಾನ್ ಸಮ್ಮಾನ್ ನೋಂದಣಿ ಅಭಿಯಾನ ನಡೆಯಿತು. ಭಾರತ ಮಾತೆ ಮತ್ತು ನೆಗೀಲಿಗೆ ಪುಷ್ಪಾರ್ಚನೆ ಮಾಡಿದ ಬಳಿಕ ಕಾರ್ಯಕ್ರಮ ಆರಂಭಗೊಂಡಿತ್ತು.

ಸರಕಾರದಿಂದ ಕೃಷಿಕರ ಋಣ ತೀರಿಸುವ ಕೆಲಸ :
ಶಾಸಕ ಸಂಜೀವ ಮಠಂದೂರು ಕಾರ್ಯಕ್ರಮ ಉದ್ಘಾಟಿಸಿ, ತೆಂಗಿನ ಹಿಂಗಾರ ಅರಳಿಸಿ ಮಾತನಾಡಿದರು. ಕೃಷಿ ಪರಂಪರೆ, ಋಷಿ ಪರಂಪರೆ ನಮ್ಮದು, ಕೃಷಿ ಪರಂಪರೆಯಿಂದ ಸಮೃದ್ದಿಯ ಬದುಕು ಕಾಣುತ್ತಿದ್ದೇವೆ. ಇದಕ್ಕೆ ಮೂಲ ಕಾರಣ ನಮ್ಮ ಬದುಕು ಕುಟುಂಬಕ್ಕಾಗಿ ಅಲ್ಲ ಇಡಿ ಸಮಾಜಕ್ಕಾಗಿ ಎಂಬ ಮನೋಭಾವನೆಯಿಂದ ದುಡಿಯುವಂತಹ ಸಮಾಜ ಕೃಷಿಕ ಸಮಾಜವಾಗಿದೆ ಎಂದ ಅವರು ಅಂತಹ ಕೃಷಿಕರ ಋಣು ತೀರಿಸುವ ಕೆಲಸ ಕೇಂದ್ರ ಮತ್ತು ರಾಜ್ಯ ಸರಕಾರದಿಂದ ಆಗಿದೆ ಎಂದರು. ಕೃಷಿಕರ ಉತ್ಪನ್ನಗಳಿಗೆ ಸರಿಯಾದ ಮಾರುಕಟ್ಟೆ ಒದಗಿಸುವುದು, ಯೋಜನೆಗಳನ್ನು ಜಾರಿಗೆ ತಂದು ಫಲಾನುಭವಿಗಳಿಗೆ ತಲುಪಿಸುವ ಕೆಲಸ ಸರಕಾರದಿಂದ ಆಗುತ್ತಿದೆ. ಇವತ್ತು ಪುತ್ತೂರಿನಲ್ಲಿ ರೈತರ ಅಡಿಕೆ ಧಾರಣೆ ಉತ್ತಮ ಆಗಬೇಕೆಂದು ಮುಂದಿನ ದಿನಲದಲ್ಲಿಗೂಡ್ಸ್ ರೈಲ್‌ನಲ್ಲಿ ಅಡಿಕೆಗಳನ್ನು ದೂರದ ಊರಿಗೆ ಕಳಿಸುವ ಕೆಲಸ ಆಗಲಿದೆ. ಇದರ ಜೊತೆಗೆ ಎಪಿಂಸಿಯಲ್ಲಿ ಸೆಸ್ಸ್ ದರ ಇಳಿತ ಮಾಡಿ ರೈತನಿಗೆ ಉಚಿತವಾಗಿ ಮಾರುಟಕ್ಟೆ ವ್ಯವಸ್ಥೆ ಮಾಡಲಾಗುತ್ತಿದೆ. ಸರಕಾರಿ ಜಾಗದಲ್ಲಿ ಕೃಷಿ ಮಾಡಿದರೆ ಅಳತೆ ಮಾಡಿ ಸಾಗುವಳಿ ಚೀಟಿ ಮಾಡಿ ಕೊಡುವ ಕಾರ್ಯಕ್ರಮ, ರೈತರು ಕುಮ್ಕಿಯಲ್ಲಿ ಮನೆ ಕಟ್ಟಿ ಕೂತಿದ್ದರವರಿಗೆ ೯೪ ಸಿಯಲ್ಲಿ ೯ ಸೆಂಟ್ಸ್ ಜಾಗ ಕೊಡುವ ಕಾರ್ಯಕ್ರಮ, ಭೂಮಸೂದೆ ಇತ್ಯರ್ಥ, ಕುಮ್ಕಿ ಹಕ್ಕಿನ ಕುರಿತ ಹೋರಾಟಕ್ಕೆ ಸಂಬಂದಿಸಿ ಪ್ರತಿಯೊಬ್ಬ ವರ್ಗದಾರರಿಗೆ ಅವರ ಸುತ್ತ ನಾಲ್ಕೂವರೆ ಸಂಕೊಲೆ ಅಥವಾ ೧೦೦ಮೀಟರ್ ಇದ್ದರೆ ಸ್ವಾಧೀನಕ್ಕಾಗಿ ಈಗಾಗಲೇ ಉಸ್ತುವಾರಿ ಸಚಿವರು, ಸಂಸದರು ಮತ್ತು ಎಲ್ಲಾ ದಕ್ಷಿಣ ಕನ್ನಡ ಜಿಲ್ಲೆಯ ಶಾಸಕರು ಸೇರಿ ಈಗಾಗಲೇ ೨ ಸಿಟ್ಟಿಂಗ್ ಮಾಡಿದ್ದೇವೆ.

ಮಂತ್ರಿಗಳ ಗಮನ್ಕೆ ತಂದಿದೇವೆ. ಮುಂದಿನ ಅಧಿವೇಶನದ ಬಳಿಕ ಕುಮ್ಕಿ ಹಕ್ಕನ್ನು ಕೊಡಲು ನಾವು ನಮ್ಮ ಕಡೆಯಿಂದ ಪ್ರಯತ್ನ ಮಾಡುತ್ತಿದ್ದೇವೆ. ನಗರ ಪ್ರದೇಶದಲ್ಲಿ ಒಂದಷ್ಟು ಜನ ಮೂಲ ಗೇಣಿದಾರರಿದ್ದಾರೆ. ಅವರಿಗೆ ನ್ಯಾಯ ಕೊಡುವ ನಿಟ್ಟಿನಲ್ಲಿ ಸರಕಾರದಲ್ಲಿ ಮಾತುಕತೆ ನಡೆಯುತ್ತಿದೆ. ಗೇರು ಕೃಷಿಗೂ ನಿಗದಿತ ಮೌಲ್ಯ ಕಟ್ಟಿ ಲೀಸಿಗೆ ಕೊಡುವ ವ್ಯವಸ್ಥೆ, ಪುತ್ತೂರು ವಿಧಾನ ಸಭಾ ಕ್ಷೇತ್ರಕ್ಕೆ ೩ ರೈತ ಸಂಪರ್ಕ ಕೇಂದ್ರ, ಶಾಂತಿಗೋಡಿನಲ್ಲಿ ರೂ. ೫ ಕೋಟಿ ವೆಚ್ಚದಲ್ಲಿ ಏತ ನೀರಾವರಿ ಯೋಜನೆ ಸೇರಿದಂತೆ ಕಿಂಡಿ ಅಣೆಕಟ್ಟು ನಿರ್ಮಾಣ ಮಾಡುವ ಮೂಲಕ ಅಂತರ್‌ಜಲ ವೃದ್ಧಿಸುವುದು, ಸವಕಲಿ ಆಗುವಲ್ಲಿ ತಡೆಗೋಡೆ ನಿರ್ಮಾಣ ಮಾಡುವುದು ಒಟ್ಟಿನಲ್ಲಿ ರೈತರ ಸಮಸ್ಯೆಗಳಿಗೆ ಸ್ಪಂಧಿಸುವ ಸರಕಾರ ನಮ್ಮದು ಎಂದರು.

ಕೋವಿಡ್‌ನಲ್ಲೂ ಅನುದಾನ ನೀಡಿದ ಸರಕಾರ
ಜಿ.ಪಂ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಅವರು ಮಾತನಾಡಿ ಯೋಜನೆಗಳು ತಳ ಮಟ್ಟದ ಜನರಿಗೆ ಮುಟ್ಟಬೇಕಾದರೆ ಇಂತಹ ಕಾರ್ಯಕ್ರಮ ಅಗತ್ಯವಿದೆ. ಆದರೆ ಕೋವಿಡ್ -೧೯ ಸಂದರ್ಭದಲ್ಲೂ ರಾಜ್ಯ ಮತ್ತು ಕೇಂದ್ರ ಸರಕಾರ ಅನುದಾನ ನೀಡುವಲ್ಲಿ ಯಾವುದೆ ಕಡಿಮೆ ಮಾಡಿಲ್ಲ ಎಂದು ಹೇಳಿದರು.

ಪುತ್ತೂರಿನಲ್ಲಿ ಜಿಲ್ಲಾ ಮಟ್ಟದ ರೈತ ಸಮಾವೇಶ:
ಜಿಲ್ಲಾ ರೈತ ಮೋರ್ಚದ ಅಧ್ಯಕ್ಷ ರಾಧಾಕೃಷ್ಣ ಬೊಳ್ಳಾರು ಅವರು ಮಾತನಾಡಿ ಸರಕಾರದ ಕಡೆಯಿಂದ ರೈತರಿಗೆ ಕೊಡುವ ಯೋಜನೆಗಳನ್ನು ರೈತರಿಗೆ ಮುಟ್ಟಿಸುವ ಕಾರ್ಯಕ್ರಮ ವಿಶೇಷವಾಗಿ ಪಕ್ಷದಿಂದ ನಡೆಯುತ್ತಿದೆ. ಮುಂದೆ ಪುತ್ತೂರಿನಲ್ಲಿ ಜಿಲ್ಲಾ ಮಟ್ಟದ ರೈತ ಸಮಾವೇಶ ಮಾಡಬೇಕೆಂಬ ಆಪೇಕ್ಷೆ ಇದೆ ಎಂದರು.

ಜನಸೇವೆ ಬಿಜಿಪಿಯಿಂದ ಮಾತ್ರ ಸಾಧ್ಯ:
ಬಿಜೆಪಿ ನಗರ ಮಂಡಲದ ಅಧ್ಯಕ್ಷ ಪಿ.ಜಿ.ಜಗನ್ನಿವಾಸ ರಾವ್ ಅವರು ಮಾತನಾಡಿ ತಳಮಟ್ಟದ ಜನರಿಗೂ ಸರಕಾರದ ಯೋಜನೆ ತಲುಪಿಸುವ ಉದ್ದೇಶದಿಂದ ಮಾಡುವ ಜನಸೇವೆ ಕಾರ್ಯಕ್ರಮ ಇದು ಬಿಜೆಪಿಯಿಂದ ಮಾತ್ರ ಸಾಧ್ಯ ಎಂದು ಹೇಳಿದರು.

ಪಕ್ಷದ ಕಾರ್ಯದಲ್ಲಿ ಪುತ್ತೂರು ಮುಂಚೂಣಿಯಲ್ಲಿದೆ:
ಬಿಜೆಪಿ ಗ್ರಾಮಾಂತರ ಮಂಡಲದ ನಿಕಟಪೂರ್ವ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ ಅವರು ಮಾತನಾಡಿ ಪ್ರಧಾನಿ ಅಧಿಕಾರ ಸ್ವೀಕರಿಸುವ ವೇಳೆ ತಾನು ಜನರ ಪ್ರಧಾನ ಸೇವಕ ಎಂದು ಹೇಳಿದಂತೆ ಬಿಜೆಪಿಯಿಂದ ಸೇವಾ ಕಾರ್ಯಕ್ರಮ ನಡೆಯುತ್ತಿದೆ. ಲಭ್ಯಗಳು ನೂರಕ್ಕೆ ನೂರು ಫಲಾನುಭವಿ ವ್ಯಕ್ತಿಗೆ ಸಿಗಬೇಕು. ಅದನ್ನು ಮುಟ್ಟಿಸುವಲ್ಲಿ ನಾವು ನಿತ್ಯಕಾರ್ಯಕ್ರಮ ಹಾಕಿಕೊಳ್ಳಬೇಕು. ಪಕ್ಷದ ಕಾರ್ಯದಲ್ಲಿ ಪುತ್ತೂರು ಮುಂಚೂಣಿಯಲ್ಲಿದೆ ಎಂದು ಹೇಳಿದರು.

೧೭೮ ಮಂದಿ ಕೃಷಿಕರಿಗೆ ಗೌರವ:
ಕಾರ್ಯಕ್ರಮದಲ್ಲಿ ಬಿಜೆಪಿ ಪುಣಚ ಮಹಾಶಕ್ತಿಕೇಂದ್ರಕ್ಕೆ ಒಳಪಟ್ಟ ೧೩ ಗ್ರಾಮಗಳಾದ ಪೆರುವಾಯಿ, ಅಳಿಕೆ, ಕೇಪು, ಮಾಣಿಲ, ಪುಣಚ, ವಿಟ್ಲಮುಡ್ನೂರು, ಇಡ್ಕಿದು, ಕುಳ, ಕೊಡಿಪ್ಪಾಡಿ, ಕಬಕ, ಕೆದಿಲ, ಪೆರ್ನೆ, ಬಿಳಿಯೂರು ಗ್ರಾಮಗಳ ಒಟ್ಟು ೧೭೮ ಮಂದಿ ಕೃಷಿಕರನ್ನು ಗೌರವಿಸಲಾಯಿತು. ಭಾರತೀಯ ಕಿಸಾನ್ ಸಂಘದ ಮೂಲಚಂದ್ರ ಕುಕ್ಕಾಡಿ, ಜಿ.ಪಂ ಸದಸ್ಯೆ ಜಯಶ್ರೀ ಕೋಡಂದೂರು, ತಾ.ಪಂ ಸದಸ್ಯರಾದ ದಿವ್ಯಾ ಪುರುಷೋತ್ತಮ, ಕವಿತಾ ಸುಬ್ಬ ನಾಯಕ್, ಬಿಜೆಪಿ ರೈತ ಮೋರ್ಚಾದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ಭಟ್, ಬಿಜೆಪಿ ಹಿಂದುಳಿದ ಮೋರ್ಚಾದ ಜಿಲ್ಲಾ ಅಧ್ಯಕ್ಷ ಆರ್.ಸಿ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ರಾಧಾಕೃಷ್ಣ ಬೂಡಿಯಾರು, ಬಿಜೆಪಿ ಮಂಡಲದ ಪ್ರಧಾನ ಕಾರ್ಯದರ್ಶಿ ನಿತೀಶ್ ಕುಮಾರ್ ಶಾಂತಿವನ, ಉಪಾಧ್ಯಕ್ಷರಾದ ಮುಕುಂದ ಗೌಡ, ಹರಿಪ್ರಸಾದ್ ಯಾದವ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಜಯರಾಮ ಬಲ್ಲಾಳ್, ರೈತಮೋರ್ಚಾ ಉಪಾಧ್ಯಕ್ಷ ರಮೇಶ್ ರೈ ಡಿಂಬ್ರಿ, ರಾಮಚಂದ್ರ ಮಣಿಯಾಣಿ, ಪುನಿತ್ ಮಾಡಾತ್ತಾರು, ಶರತ್ ಚಂದ್ರ, ಜಯರಾಮ ಬಳ್ಳಾಲ್, ಮಹಾಬಲೇಶ್ವರ ಭಟ್, ಬಾಲಕೃಷ್ಣ ಕಾರಂತ್, ಮಹಾಲಿಂಗ ಸೇರಿದಂತೆ ಹಲವಾರು ಮಂದಿ ಅತಿಥಿಗಳನ್ನು ಗೌರವಿಸಿದರು. ತಾ.ಪಂ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್, ಬಿಜೆಪಿ ರೈತ ಮೋರ್ಚಾದ ರಾಜಾರಾಮ್ ಶೆಟ್ಟಿ ಕೋಲ್ಪೆಗುತ್ತು ಸೇರಿದಂತೆ ಹಲವಾರು ಮಂದಿ ಸಭೆಯಲ್ಲಿ ಉಪಸ್ಥಿತರಿದ್ದರು. ಪುಟಾಣಿಗಳು ರೈತ ಗೀತೆ ಹಾಡಿದರು. ರೈತ ಮೋರ್ಚಾದ ಪುತ್ತೂರು ಮಂಡಲದ ಅಧ್ಯಕ್ಷ ಸುರೇಶ್ ಕಣ್ಣರಾಯ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಬಾಲಕೃಷ್ಣ ಕಾರಂತ್ ವಂದಿಸಿದರು. ಮನ್ಮಥ ಕಾರ್ಯಕ್ರಮ ನಿರೂಪಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.