ನರಿಮೊಗರು: ಮಾನಸಿಕ ಅಸ್ವಸ್ಥಗೆ ಡಿಕ್ಕಿ ಹೊಡೆದು ಪರಾರಿಯಾದ ಕಾರು…!- ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ ಸ್ಥಳೀಯರು

Puttur_Advt_NewsUnder_1
Puttur_Advt_NewsUnder_1


ಪುತ್ತೂರು: ಮಾನಸಿಕ ಅಸ್ವಸ್ಥ ವ್ಯಕ್ತಿಯೋರ್ವರಿಗೆ ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದು ಪರಾರಿಯಾಗಿರುವ ಘಟನೆ ಪುರುಷರಕಟ್ಟೆ ಸಮೀಪದ ನರಿಮೊಗರು ಎಂಬಲ್ಲಿ ಸೆ.13ರಂದು ರಾತ್ರಿ ನಡೆದಿದೆ. ಪುತ್ತೂರು ಕಡೆಯಿಂದ ಕಾಣಿಯೂರು ಕಡೆಗೆ ಹೋಗುತ್ತಿದ್ದ ಕಾರು ನರಿಮೊಗರು ಸಮೀಪ ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಸ್ಥಳೀಯ ಮಾನಸಿಕ ಅಸ್ವಸ್ಥ ವ್ಯಕ್ತಿ (ಸ್ಥಳೀಯವಾಗಿ ಇಂದ್ರ ಎಂದು ಕರೆಯಲ್ಪಡುವ)ಗೆ ಡಿಕ್ಕಿ ಹೊಡೆದಿದ್ದು ಈ ವೇಳೆ ಅವರು ರಸ್ತೆಗೆಸೆಯಲ್ಪಟ್ಟಿದ್ದು ತಲೆ ಹಾಗೂ ದೇಹದ ಇತರ ಭಾಗಗಳಿಗೆ ಗಾಯಗಳಾಗಿದೆ. ಅಪಘಾತವೆಸಗಿದ ಕಾರು ಪರಾರಿಯಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಸ್ಥಳೀಯ ಪರಿಸರದ ಮಾನಸಿಕ ಅಸ್ವಸ್ಥ ವ್ಯಕ್ತಿ ಹಲವಾರು ವರ್ಷಗಳಿಂದ ನರಿಮೊಗರು, ಪುರುಷರಕಟ್ಟೆ ಪರಿಸರದಲ್ಲಿ ತಿರುಗಾಡುತ್ತಿದ್ದು ರಾತ್ರಿ ವೇಳೆ ಬಸ್ಸ್ಟಾಂಡ್‌ನಲ್ಲಿ ನಿದ್ದೆ ಮಾಡುತ್ತಿದ್ದರು. ತನ್ನ ಪಾಡಿಗೆ ತಾನಿದ್ದ ಅವರು ಯಾರಿಗೂ ತೊಂದರೆ ನೀಡುತ್ತಿರಲಿಲ್ಲ. ಲಾಕ್‌ಡೌನ್ ವೇಳೆಯಲ್ಲಿ ಇವರಿಗೆ ಸ್ಥಳೀಯ ಪರಿಸರದ ಯುವಕರು ಆಹಾರ ನೀಡಿ ಉಪಚರಿಸಿದ್ದರು. ಇಂತಹ ಮಾನಸಿಕ ಅಸ್ವಸ್ಥರಿಗೆ ಡಿಕ್ಕಿ ಹೊಡೆದು ಪರಾರಿಯಾದ ಅಪರಿಚಿತ ಕಾರು ಚಾಲಕನ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಾರನ್ನು ಪೊಲೀಸರು ವಶಕ್ಕೆ ಪಡೆದು ಗಾಯಾಳುವಿಗೆ ಪರಿಹಾರ ಮೊತ್ತವನ್ನು ಕೊಡಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಮಹೇಶ್ಚಂದ್ರ ಸಾಲ್ಯಾನ್ ಮಾನವೀಯತೆ
ಗಾಯಾಳು ಮಾನಸಿಕ ಅಸ್ವಸ್ಥ ವ್ಯಕ್ತಿಯನ್ನು ಮುಂಡೂರು ಗ್ರಾ.ಪಂ ಮಾಜಿ ಸದಸ್ಯ ಬಿ.ಟಿ ಮಹೇಶ್ಚಂದ್ರ ಸಾಲ್ಯಾನ್ ಹಾಗೂ ಪ್ರವೀಣ್ ಆಚಾರ್ಯ ಅವರು ಪುತ್ತೂರು ಸರಕಾರಿ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ್ದು ಇವರ ಮಾನವೀಯ ಕಾರ್ಯ ಗ್ರಾಮದಲ್ಲಿ ಮೆಚ್ಚುಗೆಗೆ ಪಾತ್ರವಾಗಿದೆ. ಬಿ.ಟಿ ಮಹೇಶ್ಚಂದ್ ಸಾಲ್ಯಾನ್ ಅವರು ಸೆ.೧೪ರಂದು ಕೂಡಾ ಗಾಯಾಳುವನ್ನು ಭೇಟಿ ಮಾಡಿ ಉಪಚರಿಸಿ ಮಾನವೀಯತೆ ಮೆರೆದಿದ್ದಾರೆ.

ಕಾರು ಪೊಲೀಸ್ ವಶಕ್ಕೆ
ಅಪಘಾತವೆಸಗಿದ ಕಾರು ಸೆ.೧೪ರಂದು ಪುತ್ತೂರು ಕಡೆ ಹೋಗುತ್ತಿದ್ದ ಸಂದರ್ಭದಲ್ಲಿ ಸಂಶಯದ ಮೇಲೆ ನರಿಮೊಗರು ಪರಿಸರದವರು ಪೊಲಿಸರಿಗೆ ಮಾಹಿತಿ ನೀಡಿದ್ದು ಅದರ ಆಧಾರದಲ್ಲಿ ಪುತ್ತೂರು ನಗರ ಪೊಲಿಸರು ದರ್ಬೆಯಲ್ಲಿ ಕುದ್ಮಾರುವಿನ ವ್ಯಕ್ತಿಯೋರ್ವರ ಸ್ವಿಫ್ಟ್ ಕಾರನ್ನು ವಶಕ್ಕೆ ಪಡೆದು ಠಾಣೆಗೆ ಕೊಂಡೊಯ್ದಿರುವುದಾಗಿ ತಿಳಿದು ಬಂದಿದೆ. ಗಾಯಾಳು ವ್ಯಕ್ತಿ ಮಾನಸಿಕ ಅಸ್ವಸ್ಥರಾದ ಕಾರಣ ಹೆಚ್ಚಿನ ಮಾಹಿತಿಗೆ ಮತ್ತು ಮಾತುಕತೆ ಮೂಲಕ ಬಗೆಹರಿಸುವುದಕ್ಕೂ ತೊಂದರೆಯಾಗಿದೆ ಎನ್ನಲಾಗಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.