ತಿಂಗಳಾಡಿ: ಹಾಡಹಗಲೇ ಅಂಗಡಿಯಿಂದ 1 ಲಕ್ಷ ರೂ.ನಗದು ಕಳವು- ದೃಶ್ಯ ಸಿಸಿ ಟಿವಿಯಲ್ಲಿ ಸೆರೆ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ತಿಂಗಳಾಡಿಯಲ್ಲಿ ಅಂಗಡಿಯೊಂದರಿಂದ ಹಾಡಹಗಲೇ 1 ಲಕ್ಷ ರೂ.ನಗದು ಕಳವಾಗಿರುವ ಘಟನೆ ವರದಿಯಾಗಿದೆ.

ತಿಂಗಳಾಡಿಯ ಅಬ್ದುಲ್ಲ ಎಂಬವರ ಮಗ ಸಿಯಾಬುದ್ದೀನ್ ಕಣ್ಣೂರು ಅವರು ತಿಂಗಳಾಡಿಯಲ್ಲಿ ಮಾತೃಶ್ರೀ ಕಾಂಪ್ಲೆಕ್ಸ್ ಕಟ್ಟಡದಲ್ಲಿ ರಬ್ಬರ್, ತೆಂಗಿನಕಾಯಿ ಮತ್ತು ಬಾಳೆಗೊನೆ ವ್ಯಾಪಾರ ಮಾಡಿಕೊಂಡಿದ್ದು ಸೆ.೧೪ರಂದು ಕಳವು ನಡೆದಿದೆ.ಬೆಳಿಗ್ಗೆ ಸುಮಾರು 9 ಗಂಟೆಗೆ 1.4 ಲಕ್ಷ ರೂ.ನಗದಿನೊಂದಿಗೆ ಅಂಗಡಿಗೆ ಬಂದ ಅವರು, ಆ ಪೈಕಿ ರೂ. 40 ಸಾವಿರವನ್ನು ತನ್ನ ಅಂಗಡಿಯ ಮೇಜಿನ ಡ್ರಾವರ್‌ನೊಳಗೆ ಇಟ್ಟು ಉಳಿದ ರೂಪಾಯಿ 1 ಲಕ್ಷ ನಗದನ್ನು ಕಪ್ಪು ಬಣ್ಣದ ಸಣ್ಣ ಬ್ಯಾಗೊಂದರಲ್ಲಿ ತುಂಬಿಸಿ ಅದೇ ಮೇಜಿನ ಡ್ರಾವರ್‌ನಲ್ಲಿ ಪ್ರತ್ಯೇಕವಾಗಿ ಇಟ್ಟಿದ್ದರು. ಮಧ್ಯಾಹ್ನ ಸುಮಾರು 1.10 ಗಂಟೆಗೆ ಸಚಿನ್ ಎಂಬವರು ಸದ್ರಿ ಅಂಗಡಿಗೆ ಸ್ಕ್ರಾಪ್ ರಬ್ಬರನ್ನು ತಂದಿದ್ದು, ಅದನ್ನು ತೂಕ ಮಾಡಿ ಸಚಿನ್‌ರವರೊಂದಿಗೆ ಪಕ್ಕದ ಕಟ್ಟಡದಲ್ಲಿರುವ ತನ್ನ ಗೋದಾಮಿನಲ್ಲಿ ಸ್ಕ್ರಾಪ್ ರಬ್ಬರನ್ನು ಇಡಲು ಹೋಗಿ ವಾಪಾಸು ತನ್ನ ಅಂಗಡಿಗೆ ಬಂದು ಸಚಿನ್‌ರವರಿಗೆ ಹಣ ನೀಡಲು ತನ್ನ ಮೇಜಿನ ಡ್ರಾವರ್‌ನಲ್ಲಿಟ್ಟಿದ್ದ ಹಣವನ್ನು ತೆಗೆಯಲು ಹೋದಾಗ ಸದ್ರಿ ಮೇಜಿನ ಕ್ಯಾಶ್ ಡ್ರಾವರ್‌ನಲ್ಲಿದ್ದ 1 ಲಕ್ಷ ರೂ. ನಗದನ್ನು ಯಾರೋ ಕಳವು ಮಾಡಿರುವುದು ಕಂಡು ಬಂದಿರುವುದಾಗಿ ಸಿಯಾಬುದ್ದೀನ್ ಅವರು ಸಂಪ್ಯ ಪೊಲೀಸರಿಗೆ ದೂರು ನೀಡಿದ್ದಾರೆ.ಮಧ್ಯಾಹ್ನ ಸುಮಾರು 1.10 ಗಂಟೆಯಿಂದ 1.20 ಗಂಟೆಯ ಮಧ್ಯೆ ಯಾರೋ ಕಳ್ಳರು ಅಂಗಡಿಯೊಳಗಿದ್ದ ಮೇಜಿನ ಡ್ರಾವರ್‌ನೊಳಗಿದ್ದ ನಗದನ್ನು ಕಳವು ಮಾಡಿಕೊಂಡು ಹೋಗಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.ಬೈಕ್‌ನಲ್ಲಿ ಬಂದಿದ್ದ ವ್ಯಕ್ತಿಯೋರ್ವ ಹಣ ಎಗರಿಸಿರುವ ಕುರಿತು ಸಂಶಯ ವ್ಯಕ್ತಪಡಿಸಲಾಗಿದೆ.ಬೈಕ್‌ನಲ್ಲಿ ಬಂದ ವ್ಯಕ್ತಿ ಅಂಗಡಿಯಿಂದ ಹೊರಟು ಹೋಗುತ್ತಿರುವ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದ್ದು ಇದನ್ನು ಪೊಲೀಸರಿಗೆ ಒಪ್ಪಿಸಲಾಗಿದೆ. ತನಿಖೆ ನಡೆಯುತ್ತಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.