ನಾಳೆ(ಸೆ.16) ಪೇಸ್ ವತಿಯಿಂದ ಇಂಜಿನಿಯರ‍್ಸ್ ದಿನ ಆಚರಣೆ

Puttur_Advt_NewsUnder_1
Puttur_Advt_NewsUnder_1

ಪುತ್ತೂರು:  ಪುತ್ತೂರು ಅಸೋಸಿಯೇಶನ್ ಆಫ್ ಸಿವಿಲ್ ಇಂಜಿನಿಯರ‍್ಸ್ ವತಿಯಿಂದ ಸೆ.16ರಂದು ನೆಹರೂನಗರದಲ್ಲಿರುವ ಮಾಸ್ಟರ್ ಪ್ಲಾನರಿಯ ಸರ್. ಎಂ.ವಿ. ಸಭಾಂಗಣದಲ್ಲಿ ಇಂಜಿನಿಯರ‍್ಸ್ ದಿನ ಆಚರಣೆ ನಡೆಯಲಿದೆ. ಪುತ್ತೂರು ಅಸೋಸಿಯೇಶನ್ ಆಫ್ ಸಿವಿಲ್ ಇಂಜಿನಿಯರ‍್ಸ್ ನ ಅಧ್ಯಕ್ಷರಾದ ಹರೀಶ್ ಪುತ್ತೂರಾಯರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ವಿಧಾನ ಪರಿಷತ್ ಸದಸ್ಯರಾದ ಪ್ರತಾಪ ಸಿಂಹ ನಾಯಕ್ ಹಾಗೂ ಪೇಸ್ ನ ಗೌರವಾಧ್ಯಕ್ಷರಾಗಿರುವ ಎಸ್. ಕೆ. ಆನಂದ ಕುಮಾರ್ ರವರು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರಲಿದ್ದಾರೆ. ಇದೇ ಸಂದರ್ಭದಲ್ಲಿ  ಪುತ್ತೂರು ಕನ್‌ ಸ್ಟ್ರೆಕ್ಷನ್ ನ ಮಾಲಕರಾದ, ಸಿವಿಲ್ ಎಂಜಿನಿಯರ್  ವಸಂತ ಭಟ್ ಹಾಗೂ ಪುತ್ತೂರಿನ ಸುದಾ ಎಲೆಕ್ಟ್ರಿಕಲ್ಸ್ ನ ಮಾಲಕರು, ಇಲೆಕ್ಟ್ರಿಕಲ್ ಎಂಜಿನಿಯರ್ ಆಗಿರುವ ಬಾಲಕೃಷ್ಣ ಕೊಳತ್ತಾಯರವರಿಗೆ ಗೌರವಾರ್ಪಣೆ ನಡೆಯಲಿದೆ ಎಂದು ಪೇಸ್ ನ ಪ್ರಕಟಣೆ ತಿಳಿಸಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.