ಶ್ರೀರಾಮ ಶಾಲೆಯಲ್ಲಿ ಅಭಿಯಂತರರ ದಿನಾಚರಣೆ

Puttur_Advt_NewsUnder_1
Puttur_Advt_NewsUnder_1
ಉಪ್ಪಿನಂಗಡಿ: ಈ ದೇಶ ಕಂಡ ಅಪ್ರತಿಮ ಇಂಜನಿಯರ್ ಸರ್. ಎಂ. ವಿಶ್ವೇಶ್ವರಯ್ಯರವರ ಜನ್ಮದಿನಾಚರಣೆ ಪ್ರಯುಕ್ತ ನಡೆದ ಅಭಿಯಂತರರ ದಿನಾಚರಣೆಯನ್ನು ಶ್ರೀರಾಮ ಶಾಲೆ ಉಪ್ಪಿನಂಗಡಿ ಇವರ ಸಹಭಾಗಿತ್ವದಲ್ಲಿ ರೋಟರಿ ಕ್ಲಬ್ ಉಪ್ಪಿನಂಗಡಿ ಹಮ್ಮಿಕೊಂಡಿತ್ತು. ಈ ಕಾರ್ಯಕ್ರಮದಲ್ಲಿ ಪ್ರಧಾನ ಭಾಷಣಕಾರರಾಗಿ ಶ್ರೀ ರವೀಂದ್ರ ಪಿ ಅಧ್ಯಕ್ಷರು ಆಡಳಿತ ಮಂಡಳಿ ವಿವೇಕಾನಂದ ಪದವಿಪೂರ್ವ ಕಾಲೇಜು ಪುತ್ತೂರು ವಿಶ್ವೇಶ್ವರಯ್ಯರವರ ಸಾಧನೆ, ಸಮಯಪ್ರಜ್ಞೆ ಮತ್ತು ಅವಿಶ್ರಾಂತ ಜೀವನ ಶೈಲಿಯ ಬಗ್ಗೆ ವಿವರಣೆ ನೀಡಿದರು.ಕೊರೋನಾ ನಂತರದ ಈಗಿನ ದಿನಮಾನಸದಲ್ಲಿ ವಿಶ್ವೇಶ್ವರಯ್ಯರವರ ಜೀವನ ಶೈಲಿ ತಮಗೆಲ್ಲರಿಗೂ ಆದರ್ಶ  ಎಂದು ಕರೆ ನೀಡಿದರು.ಮುಖ್ಯ ಅತಿಥಿಯಾಗಿ ಯು.ಜಿ.ರಾಧಾ ಸಂಚಾಲಕರು ಶ್ರೀರಾಮ ಉಪ್ಪಿನಂಗಡಿ  ಇವರು ಸಂಸ್ಥೆಯ ಕಾರ್ಯ ಚಟುವಟಿಕೆಗಳನ್ನು ವಿವರಿಸುತ್ತಾ ರೋಟರಿಯ ಕಾರ್ಯಕ್ರಮವನ್ನು ಅಭಿನಂದಿಸಿದರು.
ರೋಟರಿ ವತಿಯಿಂದ ಸಂಸ್ಥೆಯ ಎಲ್ಲಾ ಸಿಬ್ಬಂದಿವರ್ಗದವರಿಗೆ ಮುಖಗವಚ   ವಿತರಿಸಲಾಯಿತು ಹಾಗೂ ಸಂಸ್ಥೆಯ ಒಂದು ದಿವಸದ ಅನ್ನದಾಸೋಹ ಕಾರ್ಯಕ್ರಮಕ್ಕೆ ರೂ 3500 ನ್ನು ಕೊಡುಗೆಯಾಗಿ ನೀಡಲಾಯಿತು.ಈ ಕಾರ್ಯಕ್ರಮದ ಪ್ರಾಯೋಜಕರಾಗಿ ರೋ.ಸ್ವರ್ಣೇಶ್ ಸಹಕರಿಸಿದರು.ಕಾರ್ಯಕ್ರಮದ ಸ್ವಾಗತವನ್ನು ಸಂಸ್ಥೆಯ ಮುಖ್ಯಸ್ಥರಾದ  ರಘುರಾಮ ಭಟ್ ರವರು ,ವಂದನಾರ್ಪಣೆಯನ್ನು ರೋ.ಸ್ವರ್ಣೇಶ್ ನೀಡಿದರು.ಕುಮಾರಿ ಮೌಲ್ಯ  ಮತ್ತು  ಮಾನ್ಯ ಪ್ರಾರ್ಥನೆಯನ್ನು ನಿರ್ವಹಿಸಿದರು.ಶ್ರೀಮತಿ ಉಷಾ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯಿನಿ ಕಾರ್ಯಕ್ರಮ ನಿರ್ವಹಿಸಿದರು. ರೊ. ಜಗಧೀಶ್ ನಾಯಕ್ ಕಾರ್ಯದರ್ಶಿಗಳು ರೋಟರಿ ಕ್ಲಬ್ ಉಪ್ಪಿನಂಗಡಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ರೊ. ಪಿ ಎಚ್ ಎಫ್ ವಿಜಯ್ ಕುಮಾರ್ ಕಲ್ಲಾಲಿಕೆ, ರೊ. ಶ್ರೀಕಾಂತ್ ಪಟೇಲ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.