ರಾಜ್ಯಮಟ್ಟದ ಹಸಿರು ಕವಿ ಗೋಷ್ಠಿಯಲ್ಲಿ ನೂಜಿಬಾಳ್ತಿಲದ ಸಮ್ಯಕ್ತ್ ಜೈನ್ ಪ್ರಥಮ

Puttur_Advt_NewsUnder_1
Puttur_Advt_NewsUnder_1

ಕಡಬ :ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು ,ಜಿಲ್ಲಾ ಘಟಕ ರಾಯಚೂರು ಇದರ ವತಿಯಿಂದ ನಡೆದ ರಾಜ್ಯ ಮಟ್ಟದ ಹಸಿರು ಕವಿಗೋಷ್ಠಿ ಸ್ಪರ್ಧೆಯಲ್ಲಿ ನೂಜಿಬಾಳ್ತಿಲದ ಸಮ್ಯಕ್ತ್. ಹೆಚ್. ಜೈನ್ ಪ್ರಥಮ ಸ್ಥಾನವನ್ನು ಪಡೆದಿದ್ದಾರೆ. ಮಕ್ಕಳ ಸಾಹಿತ್ಯ ಸಂಭ್ರಮ ಸರಣಿಯ ಅಂಗವಾಗಿ, ಪರಿಸರ ಮಹತ್ವವನ್ನು ಬಿತ್ತರಿಸುವ ಸಲುವಾಗಿ ಈ ಕವಿಗೋಷ್ಠಿ ಸ್ಪರ್ಧೆ ಆಯೋಜನೆಗೊಂಡಿತ್ತು. ಸಾಹಿತ್ಯ ಕ್ಷೇತ್ರದದಲ್ಲಿ ಮಿಂಚುವ ಮೂಲಕ ಕಡಬದ ಹೆಸರನ್ನು ರಾಜ್ಯ ಮಟ್ಟದಲ್ಲಿ ಗುರುತಿಸುವಂತೆ ಮಾಡಿದ್ದಾರೆ. ಯುವ ಬರಹಗಾರನಾಗಿ ಗುರುತಿಸಿಕೊಂಡಿರುವ ಸಮ್ಯಕ್ತ್ ನೂಜಿಬಾಳ್ತಿಲ ಹೊಸಂಗಡಿ ಬಸದಿ ಶ್ರೀ ಧರಣೇಂದ್ರ ಮತ್ತು ಶ್ರೀಮತಿ ಮಂಜುಳಾರವರ ಪುತ್ರ. 

ಕಾವ್ಯ ಜ್ಯೊತಿ ಪ್ರಶಸ್ತಿ
ತನ್ನ ಚಿಕ್ಕ ವಯಸ್ಸಿನಲ್ಲೇ ಕವಿ , ಲೇಖನ, ನಾಟಕ ರಚನೆಗಾರ,ವಿಮರ್ಶೆಗಾರನಾಗಿ ಗುರುತಿಸಿಕೊಂಡು ಬಂದಿರುವ ಸಮ್ಯಕ್ತ್ ಅವರು ಇದೀಗ ಕನ್ನಡ ಕವಿವಾಣಿ ಮಾಸ ಪತ್ರಿಕೆ ಚಿಂತಾಮಣಿ , ಚಿಕ್ಕಬಳ್ಳಾಪುರದ ವತಿಯಿಂದ ಆಯೋಜಿಸಿದ್ದ ಆನ್ ಲೈನ್ ರಾಜ್ಯ ಮಟ್ಟದ ಕವನ ಸ್ಪರ್ಧೆಯಲ್ಲಿ ತೃತೀಯ ಸ್ಥಾನವನ್ನು ಪಡೆದು ಗೌರವಪೂರ್ವಕವಾಗಿ ರಾಜ್ಯಮಟ್ಟದ “ಕಾವ್ಯ ಜ್ಯೋತಿ ಪ್ರಶಸ್ತಿ” ಯನ್ನು ತನ್ನ ಮುಡಿಗೇರಿಸಿಕೊಂಡಿದ್ದಾರೆ. ಸಮ್ಯಕ್ತ್ ಅವರು ಕವನ ಸಾಹಿತ್ಯದ ಮೂಲಕ ಕಡಬ ತಾಲೂಕಿನ ಹೆಸರನ್ನು ವಿಶ್ವದೆಲ್ಲೆಡೆ ಪಸರಿಸಿದ ಖ್ಯಾತಿಗೆ ಪಾತ್ರರಾಗಿದ್ದಾರೆ. ಎಳೆ ವಯಸ್ಸಿನಲ್ಲಿಯೇ ಮೂರು ಕವನ ಸಂಕಲನಗಳನ್ನು ಬಿಡುಗಡೆಗೊಳಿಸಿದ್ದಾರೆ.ಪ್ರಸ್ತುತ ಬೆಥನಿ ಪದವಿ ಪೂರ್ವ ಕಾಲೇಜು ನೂಜಿಬಾಳ್ತಿಲ ಕಡಬ ಇಲ್ಲಿ ದ್ವಿತೀಯ ಪಿಯುಸಿ ಮುಗಿಸಿರುವ ಇವರು ಮುಂದಿನ ವಿದ್ಯಾಭ್ಯಾಸಕ್ಕೆ ತಯಾರು ನಡೆಸುತ್ತಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.