ಬೀರಿಗ ಅಂಗನವಾಡಿಯಲ್ಲಿ ವಿಶ್ವ ಸಾಕ್ಷರತಾ ದಿನಾಚರಣೆ, ಪೋಷಣಾ ಅಭಿಯಾನ, ಪೌಷ್ಠಿಕ ಆಹಾರ ಸಪ್ತಾಹ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಬೀರಿಗ ಅಂಗನವಾಡಿ ಕೇಂದ್ರದಲ್ಲಿ ವಿಶ್ವ ಸಾಕ್ಷರತಾ ದಿನಾಚರಣೆ, ಪೌಷ್ಠಿಕ ಆಹಾರ ಸಪ್ತಾಹ, ಪೋಷಣಾ ಅಭಿಯಾನ ಕಾರ್ಯಕ್ರಮ ಸೆ.15ರಂದು ನಡೆಯಿತು. ಬನ್ನೂರು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷೆ ನವಸಾಕ್ಷರೆ ಸೇಸಮ್ಮ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಸಾಕ್ಷರತೆಯಿಂದ ಮಹಿಳೆಯರು ಸಾಮಾಜಿಕ, ಶೈಕ್ಷಣಿಕ, ರಾಜಕೀಯ ಕ್ಷೇತ್ರದಲ್ಲಿ ಪ್ರಗತಿ ಹೊಂದಿದ್ದಾರೆ ಎಂದು ಹೇಳಿ ಶುಭಹಾರೈಸಿದರು. ಬನ್ನೂರು ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷ ಜಿನ್ನಪ್ಪ ಗೌಡ ಕೊಲ್ಯ ಮಾತನಾಡಿ ಇಂತಹ ಕಾರ್ಯಕ್ರಮಗಳ ಪ್ರಯೋಜನ ಪಡೆದುಕೊಳ್ಳುವಂತೆ ತಿಳಿಸಿದರು. ಚಿಕ್ಕಮುಡ್ನೂರು ಗ್ರಾಮದ ಆರೋಗ್ಯ ಕಾರ್ಯಕರ್ತೆ ದಮಯಂತಿಯವರು ಪೌಷ್ಠಿಕ ಆಹಾರದ ಮಹತ್ವ, ಆರೋಗ್ಯ, ಶಿಕ್ಷಣ ಹಾಗೂ ಕೊರೋನಾ ಜಾಗೃತಿ ಮಾಹಿತಿ ನೀಡಿದರು.

ಚಿಕ್ಕಮುಡ್ನೂರು ಗ್ರಾಮದ ಆಶಾಕಾರ್ಯಕರ್ತೆಯರಾದ ಚಂದ್ರಾವತಿ, ಮತ್ತು ಸಂಧ್ಯಾ, ಸ್ತ್ರೀಶಕ್ತಿ ಗೊಂಚಲಿನ ಅಧ್ಯಕ್ಷೆ ಇಂದಿರಾ, ಮಕ್ಕಳ ಪೋಷಕರು, ಸ್ವಸಹಾಯ ಸಂಘದವರು, ನವಸಾಕ್ಷರರು, ಹಿರಿಯ ವಿದ್ಯಾರ್ಥಿಗಳು, ಕಿಶೋರಿಯರು ಉಪಸ್ಥಿತರಿದ್ದರು. ಕಾರ್ಯಕ್ರಮದ ಅಂಗವಾಗಿ ನಡೆಸಲಾದ ಪೌಷ್ಠಿಕ ಆಹಾರ ತಯಾರಿ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಅಂಗನವಾಡಿ ಕಾರ್ಯಕರ್ತೆ ಅರುಣಾ ಡಿ. ಕಾರ್ಯಕ್ರಮ ನಿರೂಪಿಸಿದರು. ಕಿಶೋರಿ ಸಂಘದ ಅದ್ಯಕ್ಷೆ ಶ್ರೇಯಾ ಕೆ. ಸ್ವಾಗತಿಸಿದರು. ಸಂಧ್ಯಾ ಸಹಕರಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.