ಇರ್ದೆ-ಉಪ್ಪಳಿಗೆ ಪ್ರೌಢಶಾಲೆಯ ಹಿಂದಿ ಶಿಕ್ಷಕಿ ಗೀತಾಕುಮಾರಿ ಎನ್.ವಿ.ಯವರ ಮುಡಿಗೆ ಮೈಸೂರು ವಿಭಾಗದ ಹಿಂದಿ ಶಿಕ್ಷಕ ರತ್ನ ರಾಜ್ಯ ಪ್ರಶಸ್ತಿ ಗರಿ

Puttur_Advt_NewsUnder_1
Puttur_Advt_NewsUnder_1
ನಿಡ್ಪಳ್ಳಿ: ಕರ್ನಾಟಕ ರಾಜ್ಯ ಪ್ರೌಢಶಾಲಾ ಹಿಂದಿ ಶಿಕ್ಷಕ ಸಂಘ(ರಿ)ಬೆಂಗಳೂರು ಇವರು ನೀಡುವ  2020-21ನೇ ಸಾಲಿನ ರಾಜ್ಯಮಟ್ಟದ ಹಿಂದಿ ಶಿಕ್ಷಕ ರತ್ನ ಪ್ರಶಸ್ತಿಗೆ (ಮೈಸೂರು ವಿಭಾಗ) ಸರಕಾರಿ ಪ್ರೌಢಶಾಲೆ  ಇರ್ದೆ-ಉಪ್ಪಳಿಗೆಯ ಹಿಂದಿ ಶಿಕ್ಷಕಿ  ಗೀತಾಕುಮಾರಿ ಎನ್.ವಿ.ಆಯ್ಕೆಗೊಂಡಿರುತ್ತಾರೆ. ಸದಾ ಚಟುವಟಿಕೆಯಿಂದ ಕೂಡಿರುವ ಕ್ರಿಯಾಶೀಲ ವ್ಯಕ್ತಿತ್ವದ ಬಹುಮುಖ ಪ್ರತಿಭೆಯ ಇವರು ಪುತ್ತೂರು ತಾಲೂಕಿನ ಹಿಂದಿ ಶಿಕ್ಷಕ ಸಂಘದ ಅಧ್ಯಕ್ಷರು ಹಾಗೂ ಜಿಲ್ಲಾ ಗ್ರಾಹಕರ ಕ್ಲಬ್ ನ ಸಂಯೋಜಕ ಶಿಕ್ಷಕಿಯಾಗಿರುವ ಇವರು ವಿದ್ಯಾರ್ಥಿಗಳ ಅಚ್ಚುಮೆಚ್ಚಿನ ಶಿಕ್ಷಕಿಯಾಗಿದ್ದಾರೆ.
ತನ್ನ ಶಾಲಾ ನಮನ ಗ್ರಾಹಕ ಕ್ಲಬ್ ನ ಸಂಯೋಜಕ ಶಿಕ್ಷಕಿಯಾಗಿರುವ  ಗೀತಾಕುಮಾರಿ ಎನ್.ವಿ ಈಗಾಗಲೇ ಸತತ ಆರು ಬಾರಿ ಜಿಲ್ಲಾ ಉತ್ತಮ ಗ್ರಾಹಕ ಸಂಯೋಜಕ ಶಿಕ್ಷಕಿ ಪ್ರಶಸ್ತಿ ಗಳಿಸಿದ್ದಾರೆ. ಹಿಂದಿ ವಿಷಯ ಬೋಧಿಸುತ್ತಿರುವ ಗೀತಾಕುಮಾರಿ ಎನ್.ವಿ.ದೆಹಲಿಯಲ್ಲಿ ನಡೆದ ರಾಷ್ಟ್ರಮಟ್ಟದ ಹಿಂದಿ ಭಾಷಣ ಸ್ಪರ್ಧೆಯಲ್ಲಿ ಪ್ರಶಸ್ತಿ ಪಡೆದಿರುವ ರಾಷ್ಟ್ರಭಾಷಾ ಪ್ರವೀಣೆ. ಪಾಠ್ಯೇತರ ಚಟುವಟಿಕೆಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿರುವ ಇವರು ತನ್ನ ಶಾಲಾ ಎಸ್.ಎಸ್.ಎಲ್.ಸಿ ಫಲಿತಾಂಶ ಸತತ ಮೂರುಬಾರಿ ಹ್ಯಾಟ್ರಿಕ್ ಸಾಧನೆ ಮಾಡಲೂ ಕಾರಣ ಕರ್ತರಲ್ಲಿ ಇವರೂ ಒಬ್ಬರು. ನಿವೃತ್ತ ಶಿಕ್ಷಕ ದಿ. ವಾಸುದೇವಯ್ಯ ಮತ್ತು ದಿ. ಪದ್ಮಾವತಿ ಇವರ ಪುತ್ರಿಯಾಗಿದ್ದು,ಇವರ ಪತಿ  ಸೂರ್ಯನಾರಾಯಣ.ಪಿ ಬೆಂಗಳೂರಿನಲ್ಲಿ ಏರ್ ಪೋರ್ಟ್ ಎಚ್.ಓ.ಡಿ ಯಾಗಿ ಕರ್ತವ್ಯದಲ್ಲಿದ್ದಾರೆ.
ಕೆದಿಲ ಶಾಲೆಯಲ್ಲಿ ತನ್ನ ಪ್ರಾಥಮಿಕ ಶಿಕ್ಷಣ ಪೂರೈಸಿರುವ  ಇವರು ಪುತ್ತೂರು ಸೈಂಟ್ ವಿಕ್ಟರ್ಸ್ ಗರ್ಲ್ಸ್ ಹೈಸ್ಕೂಲು,ಬೆಂಗಳೂರಿನ ಕರ್ನಾಟಕ ಮಹಿಳಾ ಹಿಂದಿ ಕಾಲೇಜು ಇಲ್ಲಿ ವ್ಯಾಸಂಗ ಮಾಡಿರುವರು. ಬಂಟ್ವಾಳ ತಾಲೂಕಿನ  ಕೆದಿಲ ಖಾಸಗಿ ಹಿ.ಪ್ರಾ.ಶಾಲೆ ಪಾಠರಕೋಡಿ,ದೀಪಿಕಾ ಪ್ರೌಢಶಾಲೆ ಮೊಡಂಕಾಪು,ಕೊಡಗಿನ ಸರ್ವೋದಯ ಪ್ರೌಢಶಾಲೆ ವಿರಾಜಪೇಟೆ,ಸರಕಾರಿ ಮಾದರಿ ಹಿ.ಪ್ರಾ.ಶಾಲೆ ಮಾಣಿ ಇಲ್ಲಿ ಸೇವೆ ಸಲ್ಲಿಸಿ 2009 ರಲ್ಲಿ ಸೇವಾ ಭಡ್ತಿಹೊಂದಿ  ಇರ್ದೆ-ಉಪ್ಪಳಿಗೆ ಪ್ರೌಢಶಾಲೆಗೆ ಕರ್ತವ್ಯಕ್ಕೆ ನೇಮಕಗೊಂಡರು.  ಹಿಂದಿ ವಿಷಯದಲ್ಲಿ ಸ್ನಾತಕೋತ್ತರ ಎಂ.ಎ ಬಿ.ಎಡ್ ಪದವೀಧರೆಯಾಗಿರುವ ಇವರು    ಸಮಾಜಸೇವೆಯಲ್ಲೂ ತನ್ನನ್ನು ತಾನು ತೊಡಗಿಸಿಕೊಂಡು ಮಾಣಿ ಜೇಸೀ ವತಿಯಿಂದ ಅತ್ಯುತ್ತಮ ಮಾನಿನಿ ಹಾಗೂ ಸಾಧನಾ ಪ್ರಶಸ್ತಿ ಪುರಸ್ಕ್ರತರಾಗಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.