ಕನ್ಯಾಸಂಕ್ರಮಣದ ಶುಭದಿನದಂದೇ ಪರಬ್ರಹ್ಮ ಶ್ರೀ ವಿಶ್ವಕರ್ಮ ಪೂಜಾ ಮಹೋತ್ಸವ…

Puttur_Advt_NewsUnder_1
Puttur_Advt_NewsUnder_1

✍🏻ಸುಧಾಕರ ಆಚಾರ್ಯ ಕಾಣಿಯೂರು

ನ್ಯಾಸಂಕ್ರಮಣದಂದು ಭಗವಂತನಾದ ವಿಶ್ವಕರ್ಮನು ಋಷಿಗಳಿಗೆ ದರ್ಶನ ಕೊಟ್ಟಿದ್ದರಿಂದ ಲೋಕಕಲ್ಯಾಣಕ್ಕಾಗಿ ಅ ದಿನವೇ ವಿಶ್ವಕರ್ಮ ಪೂಜೆಯನ್ನು ಮಾಡುವ ರೂಢಿಯಿದೆ. ಅದುವೇ ವಿಶ್ವಕರ್ಮ ಜಯಂತಿಯಾಗಿದೆ. ಶ್ರೀ ವಿಶ್ವಕರ್ಮ ಪರಬ್ರಹ್ಮನ ಅನುಗ್ರಹದಿಂದ ಲೋಕದ ಸುಭೀಕ್ಷೆಯನ್ನು ಪ್ರಾರ್ಥಿಸುವುದೇ ಉದ್ದೇಶವಾಗಿದೆ.

ವಿಶ್ವಕರ್ಮ ಜಯಂತಿ ಸರಕಾರಿ ಆಚರಣೆಯಾಗಬೇಕೆಂಬ ಹಂಬಲ ಸಮಾಜಕ್ಕೆ ಇದ್ದದ್ದು ಇಂದು ನೆನ್ನೆಯದಲ್ಲ. ಅದು ಅನೇಕ ದಶಕಗಳದ್ದು. ಇತ್ತೀಚಿನ ವರ್ಷಗಳಲ್ಲಿ ಅದು ಸಾಕಾರವಾಗಿದೆ. ವಿಶ್ವಕರ್ಮ ಜಯಂತಿ ಎಂಬುದು ಸಾಂಕೇತಿಕ. ಆದರೆ ಈ ದಿನದಂದು ನಡೆಯುವ ಪೂಜೆ ಅಂತಿಮವಾದುದು. ವೇದ, ಉಪನಿಷತ್ತು, ಪುರಾಣ, ಮಹಾಕಾವ್ಯಗಳಲೆಲ್ಲಾ ವಿಶ್ವಕರ್ಮ ಯಜ್ಞ ಅಥವಾ ಪೂಜೆಯ ಪ್ರಸ್ತಾಪವಾಗುತ್ತಾ ಬಂದಿರುವುದನ್ನು ಸಂಕ್ಷಿಪ್ತವಾಗಿ ಮುಂದಿನಂತೆ ಪರಿಗ್ರಹಿಸಬಹುದು.

ಶ್ರೀ ವಿಶ್ವಕರ್ಮನೇ ಏಕನಾಗಿಯೂ ಅನೇಕನಾಗಿಯೂ ಜಗದ್‌ವ್ಯಾಪಾರವನ್ನು ನಡೆಸುತ್ತಿರುವವನು. ಸಕಲ ಲೋಕಗಳ ನಿರ್ಮಾಣಕ್ಕೆ ಕಾರಣಕರ್ತನೇ ಇವನೇ. ಇವನೇ ಸರ್ವಸ್ವವಾಗಿರುವವನು.ನಮ್ಮ ಆತ್ಮವೂ ಇವನೇ ಪರಮಾತ್ಮವೂ ಇವನೇ, ಸಮಸ್ತ ವಿಶ್ವವೂ ಇವನೇ ಆಗಿದ್ದಾನೆ.ಜೀವವೂ ಇವನೇ ಬ್ರಹ್ಮನೂ ಇವನೇ.ವೈವಿಧ್ಯಮಯ ವೈಶಿಷ್ಟ್ಯಪೂರ್ಣ ಜಗದ ಹಿಂದಿನ ರಹಸ್ಯವು ಇವನೇ ಆಗಿರುವನು.ಅಂತಹ ಭಗವಂತನನ್ನು ಕಾಣಲು ಋಷಿಗಳು ತಪಸ್ಸನ್ನಾಚರಿಸಿದಾಗ ಅವರ ಅಂತರಂಗದ ಜ್ಞಾನಯಜ್ಞದಲ್ಲಿ ವಿಶ್ವಕರ್ಮ ಪರಮೇಶ್ವರನು ಗೋಚರಿಸಿದನು. ಕನ್ಯಾ ಸಂಕ್ರಮಣದ ಶುಭದಿನದಲ್ಲಿ ಅವನು ದರ್ಶನವನ್ನು ನೀಡಿದ್ದರಿಂದ ಆ ದಿನ ವಿಶೇಷನಾಗಿ ವಿಶ್ವಕರ್ಮ ದೇವರನ್ನು ಲೋಕ ಕಲ್ಯಾಣಕ್ಕಾಗಿ ಸಕಲ ಜೀವರಾಶಿಗಳ ಒಳಿತಿಗಾಗಿ ಯಜ್ಞದ ಮೂಲಕ ಆರಾಧಿಸುವ ವಾಡಿಕೆಯಿದೆ.

ದೇವರ ದೇವನಾದ ಪರಮ ಈಶ್ವರನಾದ ವಿಶ್ವಕರ್ಮ ದೇವರನ್ನು ಸಾಕ್ಷಾತ್ಕರಿಸಿಕೊಂಡರೆ ಜೀವನವು ಸರ್ವ ದು:ಖಗಳಿಂದ ದೂರವಾಗಿ ಪರಮಾನಂದವನ್ನು ಹೊಂದುವುದು. ವೇದದಲ್ಲಿ ಪ್ರಧಾನವಾಗಿದ್ದ ದೇವನು ನಂತರ ಪುರಾಣಗಳ ಜನಪ್ರಿಯತೆ ಮತ್ತು ಅಲ್ಲಿ ಹೇಳಿದ ವಿಚಾರಗಳಿಗೆ ಅತಿ ಹೆಚ್ಚು ಪ್ರಚಾರ ದೊರೆತಿರುವುದರಿಂದ ಅವನ ಸ್ಥೂಲ ರೂಪಗಳೇ ಹೆಚ್ಚುಮಹತ್ವವನ್ನು ಹೊಂದಿರುವುದು.

ಪುರಾಣ ಇತಿಹಾಸಗಳಲ್ಲಿ ವಿಶ್ವಕರ್ಮ ಎಂಬ ಹೆಸರಿನವರು ಹಲವರಿದ್ದಾರೆ.ಅವರೆಂದರೆ ಪರಬ್ರಹ್ಮನಾದ ವಿಶ್ವಕರ್ಮನ ಮುಖದಲ್ಲಿ ಜನಿಸಿದ ಮನು, ಮಯ ದೇವಶಿಲ್ಪಿ, ತೃಷ್ಠ,ಭೌವನ ವಿಶ್ವಕರ್ಮ ಮತ್ತು ವಿಶ್ವಕರ್ಮ ವಸು ಹೀಗೆ ಅನೇಕರಿದ್ದಾರೆ.ಪುರಾಣ ಇತಿಹಾಸದಲ್ಲಿ ಆ ಹೆಸರಿನಲ್ಲಿ ಪ್ರಖ್ಯಾತರಾಗಿರುವ ವಿಶ್ವಕರ್ಮರು ಬೇರೆ.

ನಿರ್ಮಾಣ ಅಥವಾ ಶಿಲ್ಪಿ ಶ್ರೇಷ್ಠರನ್ನು ಭಗವಂತನ ಪ್ರತಿನಿಧಿಗಳಂತೆ ಅವನ ಹೆಸರಿನಿಂದ ಗುರುತಿಸಿ ಗೌರವಿಸಿ ಪೂಜಿಸುವುದು ಸಂಪ್ರದಾಯವಾಗಿದೆ. ಭಗವಂತನಾದ ವಿಶ್ವಕರ್ಮ ದೇವರ ಅನುಗ್ರಹದಿಂದ ಲೋಕದಲ್ಲಿ ಸಿಗುವ ವಸ್ತುಗಳನ್ನು ಬಳಸಿಕೊಂಡು ಆ ವಸ್ತುಗಳಲ್ಲಿ ಇಲ್ಲದ ಗುಣಗಳನ್ನು ಪ್ರಯೋಜನವನ್ನು ಲಭಿಸುವಂತೆ ಮಾಡುವುದು ಇವರ ಶಿಲ್ಪದ ವೈಶಿಷ್ಠ್ಯ. ಹಾಗಾಗಿ ಶಿಲ್ಪಿಗಳನ್ನು ವಿಶ್ವಕರ್ಮ ಎಂದೇ ಗುರುತಿಸುತ್ತಾರೆ. ಜಗದ ಜನ ಭಾರತವನ್ನು ಇಲ್ಲಿನ ಅಧ್ಯಾತ್ಮಿಕ ಶಿಲ್ಪಕಲಾ ಶ್ರೀಮಂತಿಕೆಯಿಂದ ಗುರುತಿಸುತ್ತಾರೆ.

ಭಾರತದಲ್ಲಿ ಆಧ್ಯಾತ್ಮಿಕವಾದ ಭವ್ಯ ಶಿಲ್ಪಗಳ ಪ್ರಾಕಾರಗಳಿಂದ ಕೂಡಿದ ದೇವಸ್ಥಾನಗಳು ಹಲವಾರು ಇದೆ. ಆ ಮೂಲಕ ಕಂಡುಕೊಂಡ ಸಾಂಸ್ಕೃತಿಕ ಜೀವನದಿಂದಾಗಿ ಇಂದು ಭಾರತವು ಇಡೀ ವಿಶ್ವದತ್ತ ಗಮನ ಸೆಳೆಯುತ್ತಿದೆ.

ವಿವಿಧೆಡೆ ಶ್ರೀ ವಿಶ್ವಕರ್ಮ ದೇವರ ಆರಾಧನೆ: ಹಲವು ಹಿನ್ನೆಲೆಗಳ ವಿಶ್ವಕರ್ಮ ಜಯಂತಿ ರಾಷ್ಟ್ರೀಯ ಹಬ್ಬವಾಗಿದೆ. ಬಹಳ ಹಿಂದಿನ ಕಾಲದಿಂದಲೂ ವಿಶ್ವಕರ್ಮರಲ್ಲಿ ವಿಶ್ವಕರ್ಮ ಪೂಜೆ, ವಿಶ್ವಕರ್ಮ ಯಜ್ಞ, ವಿಶ್ವಕರ್ಮ ಮೂರ್ತಿ ಉತ್ಸವಗಳು ನಡೆಯುತ್ತಾ ಬಂದಿರುವುದು ಸ್ಪಷ್ಟವಾಗಿದೆ. ವಿಶ್ವಕರ್ಮ ಪೂಜೆಯು ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ಸಂಭ್ರಮದಿಂದ ನಡೆಯುತ್ತದೆ. ಇದು ಹಿಂದೂ ಪಂಚಾಂಗ ಸಿಂಹ ಮಾಸದ ಕೊನೆಯ ದಿನ ಅಂದರೆ ಸಾಮಾನ್ಯವಾಗಿ ಸೆ ೧೬ ಅಥವಾ ೧೭ರಂದು ನಡೆಯುತ್ತದೆ. ಸೂರ್ಯ ಸಿದ್ದಾಂತದ ಅನುಸಾರ ಈ ದಿನ ಸೂರ್ಯ ಸಿಂಹ ರಾಶಿಯನ್ನು ಬಿಟ್ಟು ಕನ್ಯಾ ರಾಶಿಯನ್ನು ಪ್ರವೇಶಿಸುತ್ತಾನೆ. ಈ ದಿನವನ್ನು ಕನ್ಯಾಸಂಕ್ರಾಂತಿ ಎಂದೂ ಕರೆಯುತ್ತಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.