ಅಳಕೆಮಜಲು: ಎಸ್.ವೈ.ಎಸ್, ಎಸ್ಸೆಸ್ಸೆಫ್ ವತಿಯಿಂದ ಜಿಲ್ಲಾ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಇಸ್ಮಾಯಿಲ್ ರವರಿಗೆ ಸನ್ಮಾನ


ಪುತ್ತೂರು : ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರಾದ ಅಳಕೆಮಜಲು ಶಾಲೆಯ ಮುಖ್ಯ ಶಿಕ್ಷಕ ಇಸ್ಮಾಯಿಲ್ ಮಾಸ್ಟರ್ ಮಂಗಿಲಪದವು ರವರನ್ನು ಅಳಕೆಮಜಲು ಶಾಲೆಯಲ್ಲಿ  ಎಸ್.ವೈ.ಎಸ್ ಅಳಕೆಮಜಲು ಬ್ರಾಂಚ್, ಎಸ್ಸೆಸ್ಸೆಫ್ ಯುನಿಟ್ ವತಿಯಿಂದ ಸನ್ಮಾನಿಸಲಾಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಇಸ್ಮಾಯಿಲ್ ಮಾಸ್ಟರ್ ರವರು ಶಾಲೆಯ ಅಭಿವೃದ್ಧಿಯಲ್ಲಿ ಊರವರ ಪಾತ್ರವನ್ನು ಸ್ಮರಿಸುತ್ತಾ, ಶಾಲೆಯ ಅಭಿವೃದ್ಧಿಯಲ್ಲಿ ಇನ್ನೂ ಮುಂದೆಯೂ ಊರವರ ಸಹಕಾರವನ್ನು ಕೋರಿದರು.ಎಸ್.ವೈ.ಎಸ್.  ಅಳಕೆಮಜಲು ಬ್ರಾಂಚ್ ನ  ಪ್ರ.ಕಾರ್ಯದರ್ಶಿ ಖಾಸಿಂ ಸಖಾಫಿ, ಅಳಕೆಮಜಲು ಎಸ್ಸೆಸ್ಸೆಫ್ ಶಾಖೆ ಅಧ್ಯಕ್ಷ  ಹೈದರಾಲಿ,  ಪುತ್ತುಹಾಜಿ , ರಫೀಕ್ ಸಅದಿ, ಹುಸೈನಾರ್ ಸಖಾಫಿ, ಮದೀನಾ ಕೆ.ಸಿ.ಎಫ್.ನ ರಝಾಕ್ ಹಾಜಿ , ಶಾಕೀರ್ ಅಳಕೆಮಜಲು,  ರಝಾಕ್ ಕಟ್ಟಾ, ಶಾಕೀರ್ ಮದೀನಾ,ಸುಹಾಝ್,ಶಕೀರ್,ಫಯಾಝ್ ಹಾಗೂ ಶಾಲೆಯ ಅಧ್ಯಾಪಕರು ಉಪಸ್ಥಿತರಿದ್ದರು,  ಶಾಖಾ  ಕೋಶಾಧಿಕಾರಿ  ಭಾತೀಷ್  ಕಾರ್ಯಕ್ರಮ ನಿರೂಪಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.