ಸೆ.21ರಿಂದ ಶಾಲಾ ಕಾಲೇಜುಗಳ ಆರಂಭದ ಮುನ್ಸೂಚನೆ | ಶಾಸಕರಿಂದ ಪ್ರೌಢಶಾಲಾ, ಪ.ಪೂ ಕಾಲೇಜುಗಳ ಭೇಟಿ – ಸಮಿತಿ ಸಭೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
  • ಮಹಿಳಾ ಕಾಲೇಜಿನಿಂದ ನಿರ್ಭೀತಿಯಿಂದ ಪಾಠ ಪ್ರವಚನ – ಸಂಜೀವ ಮಠಂದೂರು

ಪುತ್ತೂರು: ಕೊರೋನಾ ಹಿನ್ನೆಲೆಯಲ್ಲಿ ಮುಚ್ಚಲ್ಪಟ್ಟಿದ್ದ ಶಾಲಾ ಕಾಲೇಜುಗಳು ಸೆ.21ರ ಬಳಿಕ ಅರಂಭಗೊಳ್ಳುವ ಕುರಿತು ಸರಕಾರದ ಮುನ್ಸೂಚನೆಗೆ ಸಂಬಂಧಿಸಿ ಶಾಸಕ ಸಂಜೀವ ಮಠಂದೂರು ಅವರು ಕಳೆದ ಎರಡು ದಿನಗಳಿಂದ ಸರಕಾರಿ ಪ್ರೌಢಶಾಲೆಗಳು ಮತ್ತು ಪ.ಪೂ ಕಾಲೇಜುಗಳಿಗೆ ಭೇಟಿ ನೀಡಿ ಶಾಲಾ ಅಭಿವೃದ್ಧಿ ಸಮಿತಿ ಸಭೆ ನಡೆಸುತ್ತಿದ್ದು, ಸೆ. 16ರಂದು ಅವರು ಪುತ್ತೂರು ಮಹಿಳಾ ಪ್ರಥಮದರ್ಜೆ ಕಾಲೇಜಿಗೆ ಭೇಟಿ ನೀಡಿ ಶಾಲೆಗಳು ಆರಂಭ ಆಗುವ ಸಂದರ್ಭ ಮೂಲಭೂತ ಸೌಕರ್ಯ, ಮಕ್ಕಳ ಹಾಜರಾತಿ, ಉಪನ್ಯಾಸಕರ ಸಂಖ್ಯೆ ಸೇರಿದಂತೆ ವಿವಿಧ ಮಾಹಿತಿಗಳನ್ನು ಅವರು ಶಾಲಾ ಅಭಿವೃದ್ಧಿ ಸಮಿತಿ ಮತ್ತು ಕಾಲೇಜಿನ ಪ್ರಾಂಶುಪಾಲರಿಂದ ಸಂಗ್ರಹಿಸಿದರು.

ಮಹಿಳಾ ಕಾಲೇಜಿನಿಂದ ನಿರ್ಭೀತಿಯಿಂದ ಪಾಠ ಪ್ರವಚನ:
ಕಾಲೇಜಿನ ಅಭಿವೃದ್ಧಿ ಸಮಿತಿ ಅಧ್ಯಕ್ಷರಾಗಿರುವ ಶಾಸಕ ಸಂಜೀವ ಮಠಂದೂರು ಅವರು ಮಾತನಾಡಿ ಕಾಲೇಜಿನಲ್ಲಿ ಈಗಾಗಲೇ ೬೫೦ ವಿದ್ಯಾರ್ಥಿನಿಯರು ವಿದ್ಯಾರ್ಜನೆ ಮಾಡುತ್ತಿದ್ದಾರೆ. ವಿದ್ಯಾರ್ಥಿನಿಯರ ಮತ್ತು ಕಾಲೇಜಿನ ಭದ್ರತೆ ದೃಷ್ಟಿಯಿಂದ ಸಿ.ಸಿ.ಟಿವಿ ಅಳವಡಿಸಲಾಗಿದೆ. ಶೌಚಾಲಯ, ವಿದ್ಯಾರ್ಥಿನಿಯರಿಗೆ ವೈಟಿಂಗ್ ರೂಮ್, ಮಹಿಳಾ ಪೊಲೀಸರ ರಕ್ಷಣೆ ವ್ಯವಸ್ಥೆಯನ್ನು ಮಾಡಲಾಗಿದೆ. ನುರಿತ ಪ್ರಾದ್ಯಾಪಕರಿಂದ ಉತ್ತಮ ಶಿಕ್ಷಣ ಕೊಡಿಸಲಾಗುತ್ತಿದೆ. ಕಂಪ್ಯೂಟರ್ ತರಬೇತಿಯೂ ಇದೆ. ಇದರ ಜೊತೆಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಏನು ಆತ್ಮನಿರ್ಭರ ಭಾರತದ ಗುರಿಯಿಟ್ಟು ಕೊಂಡಿದ್ದಾರೋ ಅದಕ್ಕೆ ಪೂರಕವಾಗಿ ಹೊಲಿಗೆ ತರಬೇತಿಯನ್ನು ಹೆಣ್ಣು ಮಕ್ಕಳಿಗೆ ಕೊಡಿಸಲಾಗುತ್ತಿದೆ.

15 ಹೊಲಿಗೆ ಮೆಷಿನ್ ತಂದಿರಿಸಲಾಗಿದೆ. ಮುಂದಿನ ದಿನ ಜೀವನದ ಬದುಕಿಗೆ ಏನು ಬೇಕೋ ಅದನ್ನು ಕೊಡಿಸುವ ವಿನೂತನ ಶೈಲಿಯ ಕಾರ್ಯಕ್ರಮ ನಡೆಯಲಿದೆ. ಉಪನ್ಯಾಸ ಕೊರತೆ ನೀಗಿಸಲು ಅತಿಥಿ ಉಪನ್ಯಾಸಕರ ಹುದ್ದೆಗೆ ವ್ಯವಸ್ಥೆ ಕಲ್ಪಿಸಲಾಗಿದೆ. ಇದರ ಜೊತೆಗೆ ಖಾಯಂ ಉಪನ್ಯಾಸಕರ ನೇಮಕಾತಿಯೂ ನಡೆಯಲಿದೆ ಎಂದರು. ಕಾಲೇಜಿನ ಅಭಿವೃದ್ಧಿ ಸಮಿತಿ ಸದಸ್ಯರಾದ ನಗರಸಭಾ ಸದಸ್ಯೆ ದೀಕ್ಷಾ ಪೈ, ವಸುಂದರ ರಾಜ್, ನರಸಿಂಹ ಕಾಮತ್, ಶರಾವತಿ, ಜಯಶ್ರೀ ಎಸ್ ಶೆಟ್ಟಿ, ಜ್ಯೋತಿ ಆರ್ ನಾಯಕ್, ಕಾಲೇಜಿನ ಸಾವಿತ್ರಿ ಸಭೆಯಲ್ಲಿ ಉಪಸ್ಥಿತರಿದ್ದರು. ಕಾಲೇಜಿನ ಪ್ರಾಂಶಪಾಲ ಡಾ. ಶ್ರೀಧರ್ ಗೌಡ ಪಾಣತ್ತಿಲ ಅವರು ಕಾಲೇಜಿನ ಸಮಗ್ರ ಮಾಹಿತಿಯನ್ನು ಶಾಸಕರಿಗೆ ವಿವರಿಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

1 Comment

  1. Deepa

    Plz start the college, we loosing our life already one yr as been over,we forgetting dreams to achieve our goal plzzzzzzz .we are also getting old before that we have to achieve something.

    Reply

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.