ರಾಮಕುಂಜ ಆ.ಮಾ.ಪ್ರೌಢಶಾಲೆಯಲ್ಲಿ ಹಿಂದಿ ದಿವಸ್ ಆಚರಣೆ

ರಾಮಕುಂಜ: ಶ್ರೀ ರಾಮಕುಂಜೇಶ್ವರ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ಸಹಯೋಗದೊಂದಿಗೆ ರೋಟರಿ ಕ್ಲಬ್ ಉಪ್ಪಿನಂಗಡಿ ಹಾಗೂ ಜೇಸಿಐ ಉಪ್ಪಿನಂಗಡಿ ಇದರ ಆಶ್ರಯದಲ್ಲಿ ‘ಹಿಂದಿ ದಿವಸ್’ ಕಾರ್ಯಕ್ರಮ ಸೆ.14ರಂದು ರಾಮಕುಂಜ ಆ.ಮಾ.ಪ್ರೌಢಶಾಲೆಯಲ್ಲಿ ನಡೆಯಿತು.

ಮುಖ್ಯ ಅಥಿತಿಯಾಗಿದ್ದ ಸಂಸ್ಥೆಯ ಕಾರ್ಯನಿರ್ವಹಣಾ ಕಾರ್ಯದರ್ಶಿ ಕೆ.ಸೇಸಪ್ಪ ರೈಯವರು ಮಾತನಾಡಿ, ಶಿಕ್ಷಕರು ಎಲ್ಲಾ ಭಾಷೆಗಳನ್ನು ಕಲಿಯುವ ಮೂಲಕ ಪ್ರಾಪಂಚಿಕ ಜ್ಞಾನವನ್ನು ವೃದ್ಧಿಪಡಿಸಿಕೊಳ್ಳುವಂತೆ ಹೇಳಿದರು. ಪ್ರಧಾನ ಭಾಷಣಕಾರರಾಗಿ ಆಗಮಿಸಿದ್ದ ಜಯಪ್ರಕಾಶ್ ಪುಣಚರವರು ‘ಹಿಂದಿ ಸಾಹಿತಿಗಳ ಕೆಲವು ಪದ್ಯದ ಸಾಲುಗಳನ್ನು ಹಾಡಿ, ಭಾಷೆ ತಮ್ಮ ಸಾಂಸ್ಕೃತಿಕ ಬದುಕನ್ನು ಹೇಗೆ ಕಟ್ಟಿ ಕೊಡುತ್ತದೆ ‘, ಹಿಂದಿ ಭಾಷೆಯೊಂದಿಗೆ ಮಾತೃಭಾಷೆ ಹಾಗೂ ಇತರ ಭಾಷೆಗಳನ್ನು ಕಲಿಯಬೇಕೆಂದು ಕರೆ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ರಾಮಕುಂಜ ಆ.ಮಾ.ಪ್ರೌಢಶಾಲೆಯ ಶೈಕ್ಷಣಿಕ ಸಲಹೆಗಾರ ರವೀಂದ್ರ ದರ್ಬೆಯವರು ರೋಟರಿ ವತಿಯಿಂದ ಶಿಕ್ಷಕರಿಗೆ ಮುಖಗವಚವನ್ನು ವಿತರಿಸಿ, ರೋಟರಿ ಸಂಘಟನೆಯ ಕಿರುಪರಿಚಯವನ್ನು ಮಾಡಿದರು. ಸಂಸ್ಥೆಯ ಆಡಳಿತ ಅಧಿಕಾರಿ ಆನಂದ ಎಸ್ ಟಿ, ಪ್ರೌಢಶಾಲಾ ಮುಖ್ಯೋಪಾಧ್ಯಾಯಿನಿ ಗಾಯತ್ರಿ ಯು.ಎನ್, ಪ್ರಾಥಮಿಕ ಶಾಲಾ ಮುಖ್ಯಶಿಕ್ಷಕಿ ಲೋಹಿತ ಉಪಸ್ಥಿತರಿದ್ದರು. ಕು.ಮಾನ್ಯ ಪ್ರಾರ್ಥಿಸಿದರು. ಉಪ್ಪಿನಂಗಡಿ ಜೇಸಿಐ ಅಧ್ಯಕ್ಷ ಶಶಿಧರ್ ವಂದಿಸಿದರು. ಹಿಂದಿ ಸಹ ಶಿಕ್ಷಕ ಗೋಪಾಲ್ ಕಾರ್ಯಕ್ರಮ ನಿರೂಪಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.