ಮಿತ್ತೂರಿನಲ್ಲಿ ಯುವಕ, ಯುವತಿಯ ಅಶ್ಲೀಲ ವರ್ತನೆ ಅರೋಪ| ಪರಾರಿಯಾದ ಕಾರನ್ನು ಸಿನಿಮೀಯ ಶೈಲಿಯಲ್ಲಿ ಅಡ್ಡಗಟ್ಟಿದ ಹಿಂಜಾವೇ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಯುವಕ ಮತ್ತು ಯುವತಿ ಕಾರೊಂದರಲ್ಲಿ ಮಿತ್ತೂರು ಸಮೀಪ ಆಶ್ಲೀಲವಾಗಿ ವರ್ತಿಸುತ್ತಿರುವುದನ್ನು ಗಮನಿಸಿದ ಹಿಂಜಾವೇ ಕಾರ್ಯಕರ್ತರು ಕಾರ್ಯಾಚರಣೆಗೆ ಯತ್ನಿಸಿದ ವೇಳೆ ಪರಾರಿಯಾದ ಕಾರನ್ನು ಪುತ್ತೂರಿನ ಕೊಂಬೆಟ್ಟು ಸಮೀಪ ತಡೆದು ನಿಲ್ಲಿಸಿದ ಘಟನೆ ಸೆ.16ರಂದು ಸಂಜೆ ಸಿನಿಮೀಯ ರೀತಿಯಲ್ಲಿ ನಡೆದಿದೆ.
ಉಪ್ಪಳದ ಯುವಕ ಮತ್ತು ಬೆಂಗಳೂರಿನಲ್ಲಿ ಸಿ.ಎ ಮಾಡುತ್ತಿರುವ ಯುವತಿ ಕೇರಳ ನೋಂದಣಿಯ ಕಾರೊಂದರಲ್ಲಿ ಮಂಗಳೂರಿನಿಂದ ಮೈಸೂರು ಕಡೆ ಹೋಗುತ್ತಿರುವ ದಾರಿ ಮಧ್ಯೆ ಮಿತ್ತೂರಿನಲ್ಲಿ ಅಶ್ಲೀಲವಾಗಿ ವರ್ತಿಸುತ್ತಾ ಕಾರು ಚಲಾಯಿಸುತ್ತಿರುವುದನ್ನು ಗಮನಿಸಿದ ಹಿಂಜಾವೇ ಕಾರ್ಯಕರ್ತರು ಕಾರ್ಯಾಚರಣೆ ನಡೆಸಲು ಯತ್ನಸಿದ್ದರು. ಆದರೆ ಕಾರು ವೇಗವಾಗಿ ಹೋಗುತ್ತಿದ್ದರಿಂದ ವಿಚಾರವನ್ನು ಪೊಲೀಸರಿಗೆ ತಿಳಿಸಲಾಗಿತ್ತು. ವೇಗವಾಗಿ ಬರುತ್ತಿರುವ ಕಾರನ್ನು ಹಿಂಜಾವೇ ಕಾರ್ಯಕರ್ತರು ತಡೆಯಲು ಯತ್ನಿಸಿಸುತ್ತಿದ್ದಂತೆ ಕಾರು ಬೊಳುವಾರು ಸಮೀಪ ಕೊಂಬೆಟ್ಟು ಮಾರ್ಗವಾಗಿ ಚಲಿಸಿತ್ತು. ಕೊಂಬೆಟ್ಟು ಮರಾಠಿ ಸಭಾಭವನದ ಬಳಿ ತಲುಪುತ್ತಿದ್ದಂತೆ ಅಲ್ಲಿ ಜಮಾಯಿಸಿದ್ದ ಹಿಂಜಾವೇ ಕಾರ್ಯಕರ್ತರು ಕಾರನ್ನು ಅಡ್ಡಗಟ್ಟಿ ತಡೆದಿದ್ದಾರೆ. ಘಟನಾ ಸ್ಥಳಕ್ಕೆ ಪೊಲೀಸರು ತೆರಳಿ ಯುವಕ ಮತ್ತು ಯುವತಿಯನ್ನು ವಶಕ್ಕೆ ಪಡೆದುಕೊಂಡು ಕಾರನ್ನು ಠಾಣೆಗೆ ಕೊಂಡೊಯ್ದಿದ್ದಾರೆ.

About The Author

Related posts

1 Comment

  1. Prajwal rai

    ಅವರು ಕಾರಲ್ಲಿ ಏನೇ ಮಾಡಲಿ ಅವರ ಇಷ್ಟ, ಅವರು ಕಾರು ಓಡಿಸುವಾಗಲೋ ನಿಲ್ಲಿಸಿಯೋ ಕಿಸ್ಸೋ, ಸೆಕ್ಸೋ ಮಾಡಿದರೆ ಅದು ಅವರ ಇಷ್ಟ. ಹಿಂಜಾವೇ ಕಾರ್ಯಕರ್ತರ ಅಕ್ಕತಂಗಿಯರ ಜೊತೆ ಮಾಡಿದರೇ?!. ಅಥವಾ ಇವರ ಮನೆಗೆ ನುಗ್ಗಿ ಮಾಡಿದರೇ?!. ಇಲ್ಲ ತಾನೇ! ಅವರ ಕಾರಲ್ಲಿ ಅವರು ಏನೇ ಮಾಡಿದರೆ ಇವರಿಗೇನು?!. ಇವರಿಗೆ ಓಡಿಸಿ ಹಿಡಿಯಲು ಅಧಿಕಾರ ಕೊಟ್ಟವರು ಯಾರು?!. ಸೂಳೇ ಮಕ್ಕಳು ತಂಬಾ ಎಗರಾಡ್ತಾ ಇದ್ದಾರೆ! ಇವರ ಹಿಸ್ಟರಿ ತೆಗೆದು ನೋಡಿದರೆ ಗೊತ್ತಾಗಬಹುದು ಇವರ ಹಣೇಬರಹ!! ಥೂ ನಿಮ್ಮ ಜನ್ಮಕ್ಕೆ… ಯಾವ ಕಾಲದಲ್ಲಿ ಬದುಕುತ್ತಿದ್ದೀರಿ ಮಾರಾಯ್ರೆ?!. ಇದು 2020, 1940 ಕಾಲ ಅಲ್ಲ!! ದಾರಿಯಲ್ಲಿ ಹೋಗೋ ಬರೋರನ್ನ ಸರಿ ಮಾಡಲು ನಿಮಗೆ ಅಧಿಕಾರ ಕೊಟ್ಟವರಾರು?!. ಮೊದಲು ನಿಮ್ಮ ಮನೆಯವರನ್ನು ಸರಿ ಮಾಡಿರಿ…

    Reply

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.