HomePage_Banner
HomePage_Banner
HomePage_Banner
HomePage_Banner

ಪ್ರಧಾನಿ ನರೇಂದ್ರ ಮೋದಿಯವರ 70ನೇ ಜನ್ಮದಿನಾಚರಣೆ | ಬಿಜೆಪಿ ಹಿಂದುಳಿದ ವರ್ಗ ಮೋರ್ಚಾದಿಂದ ಜಿಲ್ಲಾ ಮಟ್ಟದ ಸೇವಾ ಸಪ್ತಾಹ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
  • ಬೂತ್, ಗ್ರಾಮದಲ್ಲೂ ಕಾಂಗ್ರೆಸ್ ಮುಕ್ತವಾತಾವರಣ – ಸಂಜೀವ ಮಠಂದೂರು

ಪುತ್ತೂರು: ಪ್ರಧಾನಿ ನರೇಂದ್ರ ಮೋದಿಯವರ 70ನೇ ಜನ್ಮದಿನಾಚರಣೆ ಅಂಗವಾಗಿ ಬಿಜೆಪಿ ಹಿಂದುಳಿದ ವರ್ಗ ಮೋರ್ಚಾ ವತಿಯಿಂದ ಜಿಲ್ಲಾ ಮಟ್ಟದ ಸೇವಾ ಸಪ್ತಾಹ ಕಾರ್ಯಕ್ರಮ ಪುತ್ತೂರು ಕೋ ಓಪರೇಟಿವ್ ಟೌನ್ ಬ್ಯಾಂಕ್ ಸಭಾಂಗಣದಲ್ಲಿ ಸೆ.17ರಂದು ನಡೆಯಿತು.

ಕಾರ್ಯಕ್ರಮದಲ್ಲಿ ಮೂರು ವಿಶೇಷ ಸೇವೆಯನ್ನು ಆಯೋಜಿಸಿದ್ದು, ಬನ್ನೂರಿನಲ್ಲಿರುವ ಭಿನ್ನ ಸಾಮರ್ಥ್ಯದ ಪ್ರಜ್ಞಾ ಆಶ್ರಮದ ಬಂಧುಗಳಿಗೆ ಆಹಾರ ಮತ್ತು ಅಗತ್ಯ ಸಾಮಾಗ್ರಿಗಳ ವಿತರಣೆ, ಬ್ಲಡ್‌ಬ್ಯಾಂಕ್ ಮೂಲಕ ರಕ್ತದಾನ ಶಿಬಿರ, ಹಿರಿಯ ಬಿಜೆಪಿ ಕಾರ್ಯಕರ್ತರಿಗೆ ಗೌರವಾರ್ಪಣಾ ಕಾರ್ಯಕ್ರಮ ನಡೆಯಿತು.

ಬೂತ್, ಗ್ರಾಮದಲ್ಲೂ ಕಾಂಗ್ರೆಸ್ ಮುಕ್ತವಾತಾವರಣ :
ಶಾಸಕ ಸಂಜೀವ ಮಠಂದೂರು ಅವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಅಶಕ್ತರಸೇವೆ, ದೀನದಲಿತರಿಗೆ ಬದುಕು ಕೊಡುವ ಮೂಲಕ ಪ್ರದಾನಿ ನರೇಂದ್ರ ಮೋದಿಯವರ ಆಡಳಿತ ದೇಶದ ಆರ್ಥಿಕತೆಯನ್ನು ಸದ್ರಡಗೊಳಿಸಿದೆ. ಇಂತಹ ಸಂದರ್ಭದಲ್ಲಿ ಸರಕಾರದ ಎಲ್ಲಾ ಯೋಜನೆಗಳು ಜನಸಾಮಾನ್ಯರ ಬಳಿಗೆ ತಲುಪಬೇಕು. ಇಂತಹ ಸೇವೆ ಮಾಡುವ ಮೂಲಕ ಮುಂದಿನ ದಿನ ಬೂತ್ ಮತ್ತು ಗ್ರಾಮದಲ್ಲೂ ಕಾಂಗ್ರೆಸ್ ಮುಕ್ತವಾತಾವರಣ ಆಗಬೇಕು. ಅದು ಪುತ್ತೂರಿನಿಂದಲೇ ಆರಂಭವಾಗಲಿ ಎಂದರು. ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್ ಮೂಡಬಿದ್ರೆ ಅಧ್ಯಕ್ಷತೆ ವಹಿಸಿದ್ದರು.

ಗೌರವಾರ್ಪಣೆ:
ಕೋವಿಡ್ ಸಂದರ್ಭ ಕೋವಿಡ್ ವಾರಿಯರ್ಸ್ ಆಗಿ ಮೃತಪಟ್ಟವರ ಶವಸಂಸ್ಕಾರ ನೆರವೇರಿಸಿದ ಚಿಕ್ಕಪುತ್ತೂರು ಸ್ಮಶಾನ ನಿರ್ವಾಹಕ ಸತೀಶ್, ಭಿನ್ನ ಸಾಮಾರ್ಥ್ಯದವರ ಸೇವೆಯಲ್ಲಿ ತೊಡಗಿರುವ ಬನ್ನೂರು ಪ್ರಜ್ಞಾ ಆಶ್ರಮದ ಅಣ್ಣಪ್ಪ ದಂಪತಿ, ಬಿಜೆಪಿ ಹಿರಿಯ ಕಾರ್ಯಕರ್ತರಾದ ಗೋಪಾಲಕೃಷ್ಣ ಆಚಾರ್ಯ, ಸಂಘಪರಿವಾರದಿಂದಲೂ ಸಕ್ರಿಯರಾಗಿದ್ದ ಸದಾಶಿವ ಭಂಡಾರಿ, ಕಾರ್ಯಕರ್ತರಾಗಿದ್ದು ಯಕ್ಷಗಾನ ಕಲಾವಿರಾಗಿರುವ ಕಿನ್ನು ಮೂಲ್ಯ ಅಳಕೆ, ಕೇಶವ ಎಂ ಎಸ್ ಶಾಂತಿವನರವರನ್ನು ಗೌರವಿಸಲಾಯಿತು.

ಜಿಲ್ಲಾ ವಿಭಾಗ ಸಹಪ್ರಭಾರಿ ಗೋಪಾಲಕ್ರಷ್ಣ ಹೇರಳೆ, ಜಿಲ್ಲಾ ಕಾರ್ಯದರ್ಶಿ ಸುಧೀರ್, ಬೂಡಿಯಾರ್ ರಾಧಾಕ್ರಷ್ಣ ರೈ, ಜಿ.ಪಂ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಉಪಾಧ್ಯಕ್ಷೆ ಕಸ್ತೂರಿ ಪಂಜ, ಬಿಜೆಪಿ ನಗರ ಮಂಡಲದ ಅಧ್ಯಕ್ಷ ಪಿ.ಜಿ.ಜಗನ್ನಿವಾಸ ರಾವ್, ಜಿಲ್ಲಾ ಹಿಂದುಳಿದ ಮೋರ್ಚಾ ಅಧ್ಯಕ್ಷ ಆರ್. ಸಿ ನಾರಾಯಣ, ಕಾರ್ಯದರ್ಶಿ ಭರತ್, ಸೇರಿದಂತೆ ಪಕ್ಷದ ಜಿಲ್ಲಾ ಪ್ರಮುಖರು ಸಭೆಯಲ್ಲಿ ಭಾಗವಹಿಸಿದ್ದರು.

ರಕ್ತದಾನ ಶಿಬಿರ:
ಬೆಳಿಗ್ಗೆ ರೋಟರಿ ಬ್ಲಡ್ ಬ್ಯಾಂಕ್ ಮೂಲಕ ರಕ್ತದಾನ ಶಿಬಿರ ನಡೆಯಿತು. ರಕ್ತದಾನ ಶಿಬಿರವನ್ನು ಬಿಜೆಪಿ ಮಂಡಲದ ನಿಕಟಪೂರ್ವ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಡಿ ಅವರು ಶಿಬಿರವನ್ನು ಉದ್ಘಾಟಿಸಿದರು‌. ಬಿಜೆಪಿ ಜಿಲ್ಲಾ ಹಿಂದುಳಿದ ಮೋರ್ಚಾದ ಅಧ್ಯಕ್ಷ ಆರ್.ಸಿ.ನಾರಾಯಣ ಅವರು ರಕ್ತದಾನ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಬಿಜೆಪಿ ಗ್ರಾಮಾಂತರ ಮಂಡಲದ ಅಧ್ಯಕ್ಷ ಸಾಜ ರಾಧಾಕ್ರಷ್ಣ ಅಳ್ವ, ಜಯಂತಿ‌ ನಾಯಕ್, ಹಿಂದುಳಿದ ವರ್ಗಗಳ ಮೋರ್ಚಾದ ಜಿಲ್ಲಾ ಕಾರ್ಯದರ್ಶಿ ಭರತ್ ಕುಮಾರ್ ಮಂಡಲದ ಪ್ರಮುಖರು ಸೇರಿದಂತೆ ಹಲವಾರು ಮಂದಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಬನ್ನೂರು ಪ್ರಜ್ಞ ಭಿನ್ನ ಸಾಮಾರ್ಥ್ಯದ ಸೇವಾ ಕೇಂದ್ರಕ್ಕೆ ಕೊಡುಗೆ:
ಮೋದಿಯಂತೆ ಹ್ರದಯವೈಶಾಲ್ಯತೆ ಅಣ್ಣಪ್ಪ ದಂಪತಿ – ಸಂಜೀವ ಮಠಂದೂರು


ಬನ್ನೂರಿನಲ್ಲಿರುವ ಭಿನ್ನ ಸಾಮರ್ಥ್ಯದ ಪ್ರಜ್ಞಾ ಆಶ್ರಮದ ಬಂಧುಗಳಿಗೆ ಆಹಾರ ಮತ್ತು ಅಗತ್ಯ ಸಾಮಾಗ್ರಿಗಳ ವಿತರಣೆಯನ್ನು ಮಾಡಲಾಯಿತು.
ಶಾಸಕ ಸಂಜೀವ ಮಠಂದೂರು ಅವರು ಸೇವಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ವಿಭಾಗ ಸಹ ಪ್ರಬಾರಿ ಗೋಪಾಲಕ್ರಷ್ಣ ಹೇರಳೆ, ಹಿಂದುಳಿದ ಮೋರ್ಚಾದ ಜಿಲ್ಲಾ ಅಧ್ಯಕ್ಷ ಆರ್.ಸಿ.ನಾರಾಯಣ, ನಗರ ಮಂಡಲದ ಅಧ್ಯಕ್ಷ ಪಿ.ಜಿ.ಜಗನ್ನಿವಾಸ ರಾವ್ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.