ಪಡ್ನೂರು: ಬ್ರಹ್ಮಶ್ರೀ ನಾರಾಯಣ ಗುರು ಬಿಲ್ಲವ ಗ್ರಾಮ ಸಮಿತಿಯ ಮಾಸಿಕ ಸಭೆ – ಸನ್ಮಾನ ಕಾರ್ಯಕ್ರಮ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಬ್ರಹ್ಮಶ್ರೀ ನಾರಾಯಣ ಗುರು ಬಿಲ್ಲವ ಗ್ರಾಮ ಸಮಿತಿ ಪಡ್ನೂರು ಇದರ‌ ಮಾಸಿಕ‌ ಸಭೆಯು ಸೆ.13ರಂದು ಕೊಡಂಗೆಗುತ್ತು ವಾಸು ಪೂಜಾರಿಯವರ ಮನೆಯಲ್ಲಿ ಸಂಘದ ಅಧ್ಯಕ್ಷ ಮನೋಹರ ಪೂಜಾರಿ ಆರುವಾರ ಇವರ ಅಧ್ಯಕ್ಷತೆಯಲ್ಲಿ ನಡೆಯಿತು. ಪಡ್ನೂರು ಬಿಲ್ಲವ ಗ್ರಾಮ ಸಮಿತಿ ,ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಟ್ರಸ್ಟ್ ಮಾತಾವು ,ಪಡ್ನೂರು ಬಿಲ್ಲವ ಮಹಿಳಾ ವೇದಿಕೆಯ ವತಿಯಿಂದ ಸಂಘದ ಹಿರಿಯ ಸದಸ್ಯರು ಮಾರ್ಗದರ್ಶಕರು ಆದ ಅಣ್ಣಿ‌ ಪೂಜಾರಿ ಆರುವಾರ ಹಾಗೂ ಸಾಂತಪ್ಪ ಪೂಜಾರಿ ‌ಅಂಡೆಪುಣಿ ಇವರನ್ನು ಕೊಡಂಗೆಗುತ್ತು ಮನೆತನದ ಹಿರಿಯ ಸದಸ್ಯೆ ಪೂವಕ್ಕರವರು ಸನ್ಮಾನಿಸಿದರು.  ಇದೇ ಸಂದರ್ಭದಲ್ಲಿ 2019 -2020 ರ ಶೈಕ್ಷಣಿಕ ವರ್ಷದ ಎಸ್ ಎಸ್ ಎಲ್ ಸಿ – ಪಿಯುಸಿಯಲ್ಲಿ ಅತೀ ಹೆಚ್ಚು ಅಂಕ‌ ಗಳಿಸಿದ ವಿಧ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

ಪಡ್ನೂರು ಬಿಲ್ಲವ ಗ್ರಾಮ ಸಮಿತಿಯ ಗೌರವಧ್ಯಕ್ಷ ಶೀನಪ್ಪ ಪೂಜಾರಿ ಮಾವಿನಕಟ್ಟೆ,ಉಪಾಧ್ಯಕ್ಷ ನಾರಾಯಣ ಪೂಜಾರಿ ‌ನೆಲಪ್ಪಾಲು , ಕಾರ್ಯದರ್ಶಿ ಪದ್ಮಪ್ಪ ಪೂಜಾರಿ ಮತಾವು ,ಬ್ರಹ್ಮಶ್ರೀ ನಾರಾಯಣ ಗುರು ಬಿಲ್ಲವ ಸೇವಾ ಟ್ರಸ್ಟ್ ಇದರ ಅಧ್ಯಕ್ಷ ವಾಸು ಪೂಜಾರಿ ಕೊಡಂಗೆಗುತ್ತು ,ಕಾರ್ಯದರ್ಶಿ ಮೋಹನ್ ಪೂಜಾರಿ ಪಡ್ಡಾಯೂರು ,ಮಹಿಳಾ ವೇದಿಕೆಯ ಅಧ್ಯಕ್ಷೆ ವಿಮಲ ಸುರೇಶ್ ಪೂಜಾರಿ ಉಪಸ್ಥಿತರಿದ್ದರು. ಮಧುಸೂದನ್ ಪಡ್ಡಾಯೂರು ಸನ್ಮಾನ ಪತ್ರ ವಾಚಿಸಿದರು, ವಸಂತ ಪೂಜಾರಿ ದೇಂತಡ್ಕ ಕಾರ್ಯಕ್ರಮ ನಿರೂಪಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.