ಬನ್ನೂರಿನಲ್ಲಿ ಟೀಮ್ ನರೇಂದ್ರ ಮೋದಿಯಿಂದ ಮೋದಿ ಜನ್ಮದಿನಾಚರಣೆ

ಪುತ್ತೂರು: ಪ್ರಧಾನಿ ನರೇಂದ್ರ ಮೋದಿಯವರ ಜನ್ಮ ದಿನಾಚರಣೆಯನ್ನು ಬನ್ನೂರು ಟೀಮ್ ಮೋದಿಯಿಂದ ಬನ್ನೂರು ಜಂಕ್ಷನ್ ನಲ್ಲಿ ಕೇಕ್ ಕಟ್ ಮಾಡುವ ಮೂಲಕ ಆಚರಿಸಲಾಯಿತು.

ಬನ್ನೂರು ಜಂಕ್ಷನ್ ನಲ್ಲಿ ಮೋದಿಯವರಿಗೆ ಜನ್ಮದಿನಕ್ಕೆ ಶುಭಕೋರಿ ಅಳವಡಿಸಿದ ಬೃಹತ್ ಕಟೌಟ್ ನ ಎದುರು ಆಚರಣೆ ಮಾಡಲಾಯಿತು. ಹಿಂದೂ ಸಂಘಟನೆಗಳ ಮುಖಂಡ ಅರುಣ್ ಕುಮಾರ್ ಪುತ್ತಿಲ, ನಗರಸಭೆ ಸದಸ್ಯೆ ಮೋಹಿನಿ ವಿಶ್ವನಾಥ್, ಮಾಜಿ ಉಪಾಧ್ಯಕ್ಷ ವಿಶ್ವನಾಥ ಗೌಡ, ಬಿಜೆಪಿ ಮಹಾರಾಷ್ಡ್ರದ ಜಿಲ್ಲಾ ಕಾರ್ಯದರ್ಶಿ ಸಚ್ಚಿದಾನಂದ ಶೆಟ್ಟಿ, ಬಿಜೆಪಿಯ ಯುವ ಮೋರ್ಚಾ ಕಾರ್ಯದರ್ಶಿ ಸವೀನ್ ಬಿ.ಎಸ್, ಸ್ಥಳೀಯರಾದ ಮನೀಶ್ ಕುಲಾಲ್, ಮನೀಶ್, ಅಕ್ಷಯ್ ರಜಪೂತ್ ಮತ್ತಿರರು ಉಪಸ್ಥಿತರಿದ್ದರು.

ಬನ್ನೂರು ಪ್ರಜ್ಞಾ ಸೇವಾಶ್ರಮಕ್ಕೆ ಕೊಡುಗೆ:
ಮೋದಿ ಜನ್ಮ ದಿನಚಾರಣೆಯನ್ನು ಕೇಕ್ ಕಟ್ ಮಾಡುವ ಮೂಲಕ ಆಚರಿಸಿದ ಬಳಿಕ ಬನ್ನೂರು ಪ್ರಜ್ಞಾ ಭಿನ್ನ‌ಸಾಮಾರ್ಥ್ಯದ ಕೇಂದ್ರಕ್ಕೆ ಭೇಟಿ ನೀಡಿ ಅಕ್ಕಿ ಮತ್ತು ದಿನ ಬಳಕೆ ವಸ್ತುಗಳನ್ನು ಸಿಹಿ ಹಂಚುವ ಮೂಲಕ ಆಚರಣೆ ಮಾಡಲಾಯಿತು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.