ಬಂಟರ ಯಾನೆ ನಾಡವರ ಮಾತೃ ಸಂಘದ ಪುತ್ತೂರು ತಾಲೂಕು ಸಮಿತಿಯ ಸಹ ಸಂಚಾಲಕ ಅಜಯ್ ಆಳ್ವರಿಗೆ ಶ್ರದ್ಧಾಂಜಲಿ

  • ಅಜಯ್ ಆಳ್ವರವರು ಪ್ರಾಮಾಣಿಕ ವ್ಯಕ್ತಿ- ಹೇಮನಾಥ ಶೆಟ್ಟಿ
  • ಅಜಯ್ ಆಳ್ವರು ಸಮಾಜದ ಪ್ರೀತಿಗೆ ಪಾತ್ರರಾಗಿದ್ದರು- ದಯಾನಂದ ರೈ
  • ಆಳ್ವರು ಕ್ರೀಯಾಶೀಲ ಯುವ ನಾಯಕ- ಸೀತಾರಾಮ ರೈ
  • ಅತ್ಮೀಯ ಒಡನಾಡಿ- ರಾಧಾಕೃಷ್ಣ ರೈ

ಪುತ್ತೂರು; ಸೆ. 11ರಂದು ನಿಧನರಾದ ಬಂಟರ ಯಾನೆ ನಾಡವರ ಮಾತೃ ಸಂಘದ ನಿರ್ದೇಶಕ ಹಾಗೂ ಪುತ್ತೂರು ತಾಲೂಕು ಸಮಿತಿಯ ಸಹ ಸಂಚಾಲಕ ಅಜಯ್ ಆಳ್ವ ಬಳ್ಳಮಜಲುಗುತ್ತುರವರಿಗೆ ಬಂಟರ ಯಾನೆ ನಾಡವರ ಮಾತೃ ಸಂಘ ಮಂಗಳೂರು, ಪುತ್ತೂರು ತಾಲೂಕು ಸಮಿತಿಯ ಆಶ್ರಯದಲ್ಲಿ ಪುತ್ತೂರು ತಾಲೂಕು ಬಂಟರ ಸಂಘ, ಮಹಿಳಾ ಬಂಟರ ಸಂಘ, ಯುವ ಬಂಟರ ಸಂಘ ಹಾಗೂ ವಿದ್ಯಾರ್ಥಿ ಬಂಟರ ಸಂಘದ ಸಹಯೋಗದೊಂದಿಗೆ ಶ್ರದ್ಧಾಂಜಲಿ ಸಲ್ಲಿಸುವ ಸಭೆಯು ಸೆ. 17ರಂದು ಪುತ್ತೂರು ಎಂ.ಸುಂದರರಾಮ್ ಶೆಟ್ಟಿ ಸ್ಮಾರಕ ಬಂಟರ ಭವನದಲ್ಲಿ ಜರಗಿತು.

ಅಜಯ್ ಆಳ್ವರವರು ಪ್ರಾಮಾಣಿಕ ವ್ಯಕ್ತಿ- ಹೇಮನಾಥ ಶೆಟ್ಟಿ
ಬಂಟರ ಯಾನೆ ನಾಡವರ ಮಾತೃ ಸಂಘದ ಉಪಾಧ್ಯಕ್ಷ ಕಾವು ಹೇಮನಾಥ ಶೆಟ್ಟಿರವರು ಮಾತನಾಡಿ ಅಜಯ್ ಆಳ್ವರವರು ಬಂಟರ ಯಾನೆ ನಾಡವರ ಮಾತೃಸಂಘದಲ್ಲಿ ಎರಡು ಬಾರಿ ನಿರ್ದೇಶಕರಾಗಿ, ಮಾತೃ ಸಂಘದ ತಾಲೂಕು ಸಮಿತಿಯಲ್ಲಿ ಎರಡನೇ ಬಾರಿ ಉಪಾಧ್ಯಕ್ಷರಾಗಿ, ತನಗೆ ದೊರೆತ ಹುದ್ದೆಗೆ ಪ್ರಾಮಾಣಿಕ ರೀತಿಯಲ್ಲಿ ಸೇವೆ ಸಲ್ಲಿಸಿದ್ದಾರೆ. ಸಂಘದ ಒಡನಾಡಿಯಾಗಿ ಸದಾ ಬಂಟ ಸಮಾಜದ ಪ್ರಗತಿಗಾಗಿ ಶ್ರಮಿಸಿದ್ದಾರೆ. ಓರ್ವ ನಿಷ್ಟಾವಂತ ವ್ಯಕ್ತಿಯಾಗಿ ನಮ್ಮ ಸಮಾಜದ ಜೊತೆಗೆ ತನ್ನ ವ್ಯವಹಾರದಲ್ಲೂ ಪ್ರಾಮಾಣಿಕತೆ ಹಾಗೂ ನಿಷ್ಠೆಯಿಂದ ಅಜಯ್ ಆಳ್ವರವರು ಇಂದು ಜನಮಾನಸದಲ್ಲಿ ಶಾಶ್ವತವಾಗಿ ಉಳಿದಿದ್ದಾರೆ. ಅವರ ಅಕಾಲಿಕ ಅಗಲುವಿಕೆ ತುಂಬಲಾರದ ನಷ್ಠವಾಗಿದೆ ಎಂದು ಹೇಳಿದರು.


ಅಜಯ್ ಆಳ್ವರವರು ಸಮಾಜದ ಪ್ರೀತಿಗೆ ಪಾತ್ರರಾಗಿದ್ದರು- ದಯಾನಂದ ರೈ
ಬಂಟರ ಯಾನೆ ನಾಡವರ ಮಾತೃ ಸಂಘದ ಪುತ್ತೂರು ತಾಲೂಕು ಸಮಿತಿಯ ಸಂಚಾಲಕ ದಯಾನಂದ ರೈ ಮನವಳಿಕೆಗುತ್ತುರವರು ಮಾತನಾಡಿ ಮಾತೃ ಸಂಘದ ಸಹಸಂಚಾಲಕರಾಗಿದ್ದ ಅಜಯ್ ಆಳ್ವರವರ ಅಗಲಿಕೆ ನಮಗೆ ತುಂಬಾ ದು:ಖ ತಂದಿದೆ. ನಿಷ್ಠೆಯಿಂದ ಮಾತೃ ಸಂಘ ಮತ್ತು ಸಮಾಜದ ಹಿತಕ್ಕಾಗಿ ಅಜಯ್ ಆಳ್ವರವರು ದುಡಿದು, ನಮ್ಮ ಎಲ್ಲರ ಪ್ರೀತಿಗೆ ಪಾತ್ರರಾಗಿದ್ದರು ಎಂದು ಹೇಳಿದರು.

ಅಜಯ್ ಆಳ್ವ ಕ್ರೀಯಾಶೀಲ ಯುವ ನಾಯಕ- ಸೀತಾರಾಮ ರೈ
ಬಂಟರ ಯಾನೆ ನಾಡವರ ಮಾತೃ ಸಂಘದ ನಿರ್ದೇಶಕ ಸವಣೂರು ಕೆ.ಸೀತಾರಾಮ ರೈಯವರು ಮಾತನಾಡಿ ಅಜಯ್ ಆಳ್ವರವರನ್ನು ನಾನು ಬಹಳ ವರ್ಷದಿಂದ ನೋಡುತ್ತಿದ್ದೇನೆ, ಬಂಟ ಸಮಾಜದ ಓರ್ವ ಕ್ರಿಯಾಶೀಲ, ಯುವ ನಾಯಕನನ್ನು ನಾವು ಕಳೆದುಕೊಂಡಿದ್ದೇವೆ ಎಂದು ಹೇಳಿದರು.

ಅಜಯ್ ಆಳ್ವರವರು ಅತ್ಮೀಯ ಒಡನಾಡಿ- ರಾಧಾಕೃಷ್ಣ ರೈ
ಪುತ್ತೂರು ತಾಲೂಕು ಬಂಟರ ಸಂಘದ ಅಧ್ಯಕ್ಷ ಬೂಡಿಯಾರ್ ರಾಧಾಕೃಷ್ಣ ರೈಯವರು ಮಾತನಾಡಿ ಅಜಯ್ ಆಳ್ವರವರನ್ನು ಎಳೆಯ ಪ್ರಾಯದಿಂದಲೇ ನೋಡುತ್ತಿದ್ದೇನೆ, ಓರ್ವ ನಿಷ್ಟಾವಂತ ವ್ಯಕ್ತಿಯಾಗಿ ತನ್ನ ವ್ಯವಹಾರ ಮತ್ತು ಸಮಾಜ ಸೇವೆಯಲ್ಲಿ ಎಲ್ಲರೊಂದಿಗೆ ಅತ್ಮೀಯ ಒಡನಾಡಿಯಾಗಿದ್ದರು ಎಂದು ಹೇಳಿದರು.

ಅಜಯ್ ಆಳ್ವರವರ ಭಾವಚಿತ್ರಕ್ಕೆ ಪುಷ್ಪಾರ್ಚನೆಯನ್ನು ಮಾಡಿ, ಒಂದು ನಿಮಿಷ ಮೌನ ಪ್ರಾರ್ಥನೆ ಮಾಡಲಾಯಿತು. ಸಭೆಯಲ್ಲಿ ಅಜಯ್ ಆಳ್ವರವರ ಸಹೋದರ, ಪುತ್ತೂರು ತಾ.ಪಂ ಸ್ಥಾಯಿ ಸಮಿತಿ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ಬಂಟರ ಯಾನೆ ನಾಡವರ ಮಾತೃ ಸಂಘದ ನಿರ್ದೇಶಕರುಗಳಾದ ಚಂದ್ರಹಾಸ್ ಶೆಟ್ಟಿ ಎನ್, ಮಾಜಿ ಶಾಸಕಿ ಮಲ್ಲಿಕಾ ಪ್ರಸಾದ್, ಜಯಪ್ರಕಾಶ್ ರೈ ನೂಜಿಬೈಲು, ನಿರಂಜನ್ ರೈ ಮಠಂತಬೆಟ್ಟು, ರಮೇಶ್ ರೈ ಸಾಂತ್ಯ, ಶಶಿಕುಮಾರ್ ರೈ ಬಾಲ್ಯೊಟ್ಟು, ತಾಲೂಕು ಮಹಿಳಾ ಬಂಟರ ಸಂಘದ ಅಧ್ಯಕ್ಷೆ ಮೀರಾ ಭಾಸ್ಕರ್ ರೈ ಮಾದೋಡಿ, ತಾಲೂಕು ಯುವ ಬಂಟರ ಸಂಘದ ಅಧ್ಯಕ್ಷ ಪ್ರಕಾಶ್ ರೈ ಸಾರಕರೆ, ತಾಲೂಕು ಬಂಟರ ಸಂಘ, ಮಹಿಳಾ, ಯುವ ಹಾಗೂ ವಿದ್ಯಾರ್ಥಿ ಬಂಟರ ಸಂಘಗಳ ಪದಾಧಿಕಾರಿಗಳು ಮತ್ತು ನಿರ್ದೇಶಕರುಗಳು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.