ಪುತ್ತೂರು ಅಸೋಸಿಯೇಶನ್ ಆಫ್ ಸಿವಿಲ್ ಇಂಜಿನಿಯರ್ಸ್ ವತಿಯಿಂದ ಇಂಜಿನಿಯರರ್ಸ್ ದಿನ ಆಚರಣೆ, ಗೌರವಾರ್ಪಣೆ

ಪುತ್ತೂರು:  ಪುತ್ತೂರು ಅಸೋಸಿಯೇಶನ್ ಆಫ್ ಸಿವಿಲ್ ಇಂಜಿನಿಯರ್ಸ್ ವತಿಯಿಂದ ಸೆ.16ರಂದು ನೆಹರೂನಗರದಲ್ಲಿರುವ ಮಾಸ್ಟರ್ ಪ್ಲಾನರಿಯ ಸರ್. ಎಂ.ವಿ. ಸಭಾಂಗಣದಲ್ಲಿ  ಇಂಜಿನಿಯರರ್ಸ್ ದಿನ ಆಚರಣೆ ಕಾರ್ಯಕ್ರಮ ನಡೆಯಿತು.

ವಿಧಾನ ಪರಿಷತ್ ಸದಸ್ಯರಾದ ಪ್ರತಾಪ ಸಿಂಹ ನಾಯಕ್  ಹಾಗೂ
ಪುತ್ತೂರು ಅಸೋಸಿಯೇಶನ್ ಆಫ್ ಸಿವಿಲ್ ಇಂಜಿನಿಯರರ್ಸ್ ನ ಗೌರವಾಧ್ಯಕ್ಷರಾಗಿರುವ ಎಸ್. ಕೆ. ಆನಂದ ಕುಮಾರ್ ರವರು  ಅತಿಥಿಗಳಾಗಿ ಭಾಗವಹಿಸಿ ಶುಭಹಾರೈಸಿದರು.‌

ಪುತ್ತೂರು ಅಸೋಸಿಯೇಶನ್ ಆಫ್ ಸಿವಿಲ್ ಇಂಜಿನಿಯರರ್ಸ್ ನ ಅಧ್ಯಕ್ಷರಾದ ಹರೀಶ್ ಪುತ್ತೂರಾಯರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಪುತ್ತೂರು ಅಸೋಸಿಯೇಶನ್ ಆಫ್ ಸಿವಿಲ್ ಇಂಜಿನಿಯರರ್ಸ್ ನ ಉಪಾಧ್ಯಕ್ಷರಾದ ರಮೇಶ್ ಭಟ್, ಕಾರ್ಯದರ್ಶಿ ದಿನೇಶ್ ವಿ. ಭಟ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ  ಪುತ್ತೂರು ಕನ್‌ ಸ್ಟ್ರೆಕ್ಷನ್ ನ ಮಾಲಕರಾದ, ಸಿವಿಲ್ ಎಂಜಿನಿಯರ್  ವಸಂತ ಭಟ್ ಹಾಗೂ ಪುತ್ತೂರಿನ ಸುದಾ ಎಲೆಕ್ಟ್ರಿಕಲ್ಸ್ ನ ಮಾಲಕರು, ಇಲೆಕ್ಟ್ರಿಕಲ್ ಎಂಜಿನಿಯರ್ ಆಗಿರುವ ಬಾಲಕೃಷ್ಣ ಕೊಳತ್ತಾಯರವರಿಗೆ ಗೌರವಾರ್ಪಣೆ ನಡೆಯಿತು.

ಸತ್ಯನಾರಾಯಣ ಭಟ್ ರವರು ಪ್ರಾಸ್ತಾವಿಕ ಮಾತುಗಳನ್ನಾಡಿದರು. ಆದಿತ್ಯ ಪುತ್ತುರಾಯ ಪ್ರಾರ್ಥಿಸಿ, ರವೀಂದ್ರ ರೈ ಕಾರ್ಯಕ್ರಮ ನಿರೂಪಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.