HomePage_Banner
HomePage_Banner
HomePage_Banner
HomePage_Banner
HomePage_Banner
HomePage_Banner

ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನದಲ್ಲಿ ಸೇವೆಗಳ ಆರಂಭ | ಮಹಾಲಯ ಅಮಾವಾಸ್ಯೆ ನಿಮಿತ್ತ ವಿಶೇಷ ಪೂಜೆ, ಭಕ್ತಾಧಿಗಳ ಸಂಖ್ಯೆ ಭಾರೀ ಹೆಚ್ಚಳ

Puttur_Advt_NewsUnder_1
Puttur_Advt_NewsUnder_1
  • 130 ತಿಲ ಹೋಮ
  • 280 ಪಿಂಡ ಪ್ರದಾನ
  • ನೂರಾರು ಸಂಖ್ಯೆಯಲ್ಲಿ ರುದ್ರಾಭಿಷೇಕ, ಕುಂಕುಮಾರ್ಚನೆ

ಉಪ್ಪಿನಂಗಡಿ: ಕೊರೊನಾ ವೈರಸ್ ಹರಡುವಿಕೆ ತಡೆಗಟ್ಟು ನಿಟ್ಟಿನಲ್ಲಿ ಸರ್ಕಾರ ತೆಗೆದುಕೊಂಡಿದ್ದ ನಿಯಮಾನುಸಾರ ನಡೆದಿದ್ದ ಲಾಕ್‌ಡೌನ್ ನಿಮಿತ್ತ ದೇವಸ್ಥಾನಗಳಲ್ಲಿ ಸೇವೆ ನಿಲುಗಡೆಗೊಂಡಿರುವಂತದ್ದು, ಇದೀಗ ಯಥಾ ಪ್ರಕಾರ ಸೇವೆಗಳು ಪುನರಾಂಭಗೊಂಡಿದ್ದು, ಅದರಂತೆ ಉಪ್ಪಿನಂಗಡಿ ಶ್ರೀ ಸಹಸ್ರಲಿಂಗಶ್ವರ ದೇವಸ್ಥಾನದಲ್ಲಿ ಈ ಹಿಂದಿನಂತೆಯೇ ಸೇವೆಗಳು ಆರಂಭವಾಗಿದ್ದು, ಭಕ್ತಾಧಿಗಳ ಸಂಖ್ಯೆ ದಿನೇ ದಿನೇ ಹೆಚ್ಚಳವಾಗತೊಡಗಿರುವುದು ಕಂಡು ಬಂತು.

ಸೆ. ೧೭ರಂದು ಮಹಾಲಯ ಅಮಾವಾಸ್ಯೆ ದಿನದಂದು ವಿಶೇಷ ಪೂಜಾ ಕಾರ್‍ಯಕ್ರಮಗಳು ನಡೆಯಿತು. ಪಿತೃಪಕ್ಷ ಕೊನೆಯ ದಿನದ ಸಲುವಾಗಿ ಗತಿಸಿ ಹೋದ ಹಿರಿಯರಿಗೆ ಮೋಕ್ಷ ಸಲುವಾಗಿ ಪಿಂಡ ಪ್ರದಾನ, ಉತ್ತರ ಕ್ರಿಯಾಧಿ ಕಾರ್‍ಯಕ್ರಮಗಳು ನಡೆಯಿತು.

ಮಂಗಳೂರು, ಉಡುಪಿ, ಸಕಲೇಶಪುರ ಮುಂತಾದ ಕಡೆಯಿಂದ ಬಂದ ಭಕ್ತಾಧಿಗಳು ತಮ್ಮ ಇಷ್ಟಾರ್ಥ ಸೇವೆಗಳಿಗಾಗಿ ಸರತಿ ಸಾಲಿನಲ್ಲಿ ನಿಂತು ರಶೀದಿ ಪಡೆಯುತ್ತಿರುವ ದೃಶ್ಯ ಕಂಡು ಬಂತು. ೨ ಸಾವಿರಕ್ಕೂ ಅಧಿಕ ಮಂದಿ ಭಕ್ತಾಧಿಗಳು ತಮ್ಮ ಇಷ್ಠಾರ್ಥ ಸೇವೆ ಸಲ್ಲಿಸಿ ಪುನೀತರಾದರು.

೧೩೦ ತಿಲ ಹೋಮ, ೨೮೦ ಪಿಂಡ ಪ್ರದಾನ:
ದೇವಸ್ಥಾನದಲ್ಲಿ ಎಂದಿನಂತೆ ಸೇವೆಗಳು ಆರಂಭಗೊಂಡಿದೆ. ಸಂಗಮ ಕ್ಷೇತ್ರವಾಗಿರುವುದರಿಂದಾಗಿ, ಇಲ್ಲಿನ ಪಾವಿತ್ರತೆ ಹಿನ್ನೆಲೆಯಲ್ಲಿ ಮಹಾಲಯ ಅಮಾವಾಸ್ಯೆ ನಿಮಿತ್ತ ಪಿತೃಪಕ್ಷ  ಕೊನೆಯ ದಿನದ ಇಂದು ಇಲ್ಲಿ ಪಿಂಡ ಪ್ರದಾನ ವಿಶೇಷ ಪೂಜಾ ಕಾರ್‍ಯಕ್ರಮಗಳು ನಡೆದಿದ್ದು, ೧೩೦ ತಿಲ ಹೋಮ, ೨೮೦ ಪಿಂಡ ಪ್ರದಾನ ಕಾರ್‍ಯಕ್ರಮ ನಡೆದಿದೆ. ಅದಾಗ್ಯೂ ಸಾವಿರಾರು ಮಂದಿ ಭಕ್ತಾಧಿಗಳು ಆಗಮಿಸಿದ್ದು, ನೂರಾರು ಸಂಖ್ಯೆಯಲ್ಲಿ ರುದ್ರಾಭಿಷೇಕ, ಕುಂಕುಮಾರ್ಚನೆ ಸೇವೆ ನಡೆದಿದೆ ಎಂದು ದೇವಸ್ಥಾನದ ವ್ಯವಸ್ಥಾಪಕ ವೆಂಕಟೇಶ ರಾವ್ “ಸುದ್ದಿ”ಯೊಂದಿಗೆ ಮಾತನಾಡುತ್ತಾ ತಿಳಿಸಿದ್ದಾರೆ.

ಬೆಳಿಗ್ಗಿನಿಂದ ಸಂಜೆಯ ತನಕ ನಡೆದ ಕಾರ್‍ಯಕ್ರಮದಲ್ಲಿ ದೇವಸ್ಥಾನದ ಸಿಬ್ಬಂದಿಗಳಾದ ಕೃಷ್ಣಪ್ರಸಾದ್ ಬಡಿಲ, ದಿವಾಕರ, ಪದ್ಮನಾಭ ಕುಲಾಲ್, ಕೃಷ್ಣಪ್ರಸಾದ್ ದೇವಾಡಿಗ, ಪ್ರದೀಪ್ ಕುಮಾರ್, ಗಿರೀಶ್ ದೇವಾಡಿಗ, ಭವಾನಿ ಶಂಕರ್, ವ್ಯವಸ್ಥಾಪನಾ ಸಮಿತಿ ಮಾಜಿ ಸದಸ್ಯ ಸಂಜೀವ ಗಾಣಿಗ, ಸ್ಥಳೀಯರಾದ ಹರಿರಾಮಚಂದ್ರ ಮುಂಚೂಣಿಯಲ್ಲಿ ನಿಂತು ವಿವಿಧ ಕಾರ್‍ಯಕ್ರಮ ನಿರ್ವಹಿಸಿ, ಭಕ್ತಾಧಿಗಳಿಗೆ ಸಹಕರಿಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.