HomePage_Banner
HomePage_Banner
HomePage_Banner
HomePage_Banner
HomePage_Banner
HomePage_Banner

ಸೈಬರ್ ವಂಚಕರ ಬಗ್ಗೆ ಜಾಗರೂಕರಾಗಿ ಸಾರ್ವಜನಿಕರಿಗೆ ದ.ಕ ಜಿಲ್ಲಾ ಪೊಲೀಸ್ ಸೂಚನೆ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಇತ್ತೀಚಿನ ದಿನಗಳಲ್ಲಿ ಪೊಲೀಸ್ ಅಧಿಕಾರಿಗಳು ರಾಜಕೀಯ ಮುಖಂಡರು, ಸಾರ್ವಜನಿಕರುಗಳ ಫೇಸ್‌ಬುಕ್/ಇನ್‌ಸ್ಟಾಗ್ರಾಂ ಖಾತೆಗಳಲ್ಲಿರುವ ಮೂಲ ಡಿಪಿ/ಫೋಟೋವನ್ನು ನಕಲು ಮಾಡಿ ನಕಲಿ ಫೇಸ್‌ಬುಕ್/ಇನ್‌ಸ್ಟಾಗ್ರಾಂ ಖಾತೆ ತೆರೆದು ಅದಕ್ಕೆ ಅಳವಡಿಸಿ ಅವರ ಸಂಪರ್ಕದಲ್ಲಿರುವ ಗೆಳೆಯರಿಗೆ ಫ್ರೆಂಡ್ ರಿಕ್ವೆಸ್ಟನ್ನು ಕಳುಹಿಸಿ ಫ್ರೆಂಡ್ ರಿಕ್ವೆಸ್ಟನ್ನು ಸ್ವೀಕರಿಸಿದ ಫೇಸ್‌ಬುಕ್/ ಇನ್‌ಸ್ಟಾಗ್ರಾಂ ಬಳಕೆದಾರರಿಗೆ ಮೆಸೆಂಜರ್ ಮುಖಾಂತರ ಭಾವನಾತ್ಮಕ ಸಂದೇಶ ಕಳುಹಿಸಿ ಹಣ ವರ್ಗಾಯಿಸುವಂತೆ ಕೋರಿ, ಮರಳಿ ಹಣ ನೀಡುವುದಾಗಿ ಭರವಸೆ ನೀಡಿ ಹಣ ವಂಚಿಸುವ ಜಾಲವು ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿರುತ್ತದೆ. ಸಾರ್ವಜನಿಕರು ಇಂತಹ ಸೈಬರ್ ವಂಚಕರ ಬಗ್ಗೆ ಜಾಗರೂಕರಾಗಿ ಫೇಸ್‌ಬುಕ್/ಇನ್‌ಸ್ಟಾಗ್ರಾಂ ಮೆಸೆಂಜರ್ ಮೂಲಕ ಹಣದ ಬೇಡಿಕೆಯಿದ್ದಲ್ಲಿ ಯಾವುದೇ ಕಾರಣಕ್ಕೂ ಸದರಿ ಖಾತೆಯ ಬಗ್ಗೆ ಖಾತ್ರಿ ಪಡಿಸಿಕೊಳ್ಳದೆ ಹಣ ವರ್ಗಾವಣೆ ಮಾಡಕೂಡದು. ಸಾರ್ವಜನಿಕರು ತಮ್ಮ ಫೇಸ್‌ಬುಕ್/ಇನ್‌ಸ್ಟಾಗ್ರಾಂ ಖಾತೆಯಲ್ಲಿರುವ ಪ್ರೊಫೈಲ್ ಪಿಕ್ಚರನ್ನು ಸೈಬರ್ ವಂಚಕರಿಗೆ ಕಾಪಿ/ಡೌನ್‌ಲೋಡ್ ಮಾಡಲು ಆಗದಂತೆ ಲಾಕ್ ಮಾಡಿಟ್ಟುಕೊಳ್ಳುವುದು.

ಸಾರ್ವಜನಿಕರು ಈಗಾಗಲೇ ಫೇಸ್‌ಬುಕ್/ಇನ್‌ಸ್ಟಾಗ್ರಾಂ ಖಾತೆ ಹೊಂದಿದ್ದ ಸ್ನೇಹಿತರು ಪುನಃ ಇನ್ನೊಂದು ಖಾತೆಯಿಂದ ಫ್ರೆಂಡ್ ರಿಕ್ವೆಸ್ಟನ್ನು ಕಳುಹಿಸಿದರೇ ಅಂತಹ ಖಾತೆಯ ನೈಜತೆಯ ಬಗ್ಗೆ ಖಾತ್ರಿ ಪಡಿಸಿಕೊಳ್ಳುವುದು. ಸಾರ್ವಜನಿಕರು ಈಗಾಗಲೇ ಫೇಸ್‌ಬುಕ್/ಇನ್‌ಸ್ಟಾಗ್ರಾಂನಲ್ಲಿ ಇರುವ ನಿಮ್ಮ ಸ್ನೇಹಿತರುಗಳ ಮಾಹಿತಿಯು ಸಾರ್ವಜನಿಕವಾಗಿ ದೊರಕದಂತೆ ಫೇಸ್‌ಬುಕ್‌ನಲ್ಲಿ ಪ್ರೈವಸಿ ಸೆಟ್ಟಿಂಗ್ ಮುಖಾಂತರ ಹೈಡ್ ಮಾಡಿ ತಮ್ಮ ಖಾತೆಯನ್ನು ಉಪಯೋಗಿಸುವುದು. ಸೈಬರ್ ವಂಚಕರ ಜಾಲ ಈ ತರಹ ಹಣದ ಬೇಡಿಕೆ ಇಟ್ಟಲ್ಲಿ ಸಾರ್ವಜನಿಕರು ಕೂಡಲೇ ಹತ್ತಿರದ ಪೋಲಿಸ್ ಠಾಣೆಗೆ/ ಸಿ.ಇ.ಎನ್ ಅಪರಾಧ ಪೊಲೀಸ್ ಠಾಣೆಗೆ ಮಾಹಿತಿಯನ್ನು ನೀಡಬೇಕು ಎಂದು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಪ್ರಕಟಣೆ ತಿಳಿಸಿದೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.