HomePage_Banner
HomePage_Banner
HomePage_Banner
HomePage_Banner
HomePage_Banner
HomePage_Banner

ವಿಶ್ವ ಬಿದಿರು ದಿನಾಚರಣೆಯಲ್ಲಿ ಬಿದಿರು ಬೆಳೆಸುವ – ಮಾರುಕಟ್ಟೆ ಮಾಹಿತಿ ಕಾರ್ಯಾಗಾರ

Puttur_Advt_NewsUnder_1
Puttur_Advt_NewsUnder_1
  • ಬಿದಿರು ಕಲ್ಪವೃಕ್ಷವೂ ಹೌದು – ಎಸ್.ಆರ್.ಸತೀಶ್ಚಂದ್ರ
  • ಬಿದಿರು ಪರಿಸರಾತ್ಮಕ, ಸರ್ವತೋಮುಖ – ಡಾ.ಕೆ.ಸುಂದರ ನಾಯಕ್

ಪುತ್ತೂರು: ಬಿದಿರು ಬೆಳೆಸುವ ಮತ್ತು ಮಾರುಕಟ್ಟೆ ಕುರಿತು ಮಾಹಿತಿ ನೀಡುವ ವಿಶೇಷ ಕಾರ್ಯಕ್ರಮ ಸೆ.18ರಂದು ಪುತ್ತೂರು ತೆಂಕಿಲದಲ್ಲಿರುವ ನರೇಂದ್ರ ಪಿ.ಯು ಸಭಾಭವನದಲ್ಲಿ ನಡೆಯಿತು. ಭಾರತೀಯ ಕಿಸಾನ್ ಸಂಘ ಮತ್ತು ಬ್ಯಾಂಬು ಸೊಸೈಟಿ ಆಫ್ ಇಂಡಿಯಾ ಜಂಟಿಯಾಗಿ ಕ್ಯಾಂಪ್ಕೊ ಮಂಗಳೂರು, ಪಾಂಚಜನ್ಯ ರೇಡಿಯೊ, ನರೇಂದ್ರ ಪಿ.ಯು ಕಾಲೇಜು, ಜೆಸಿಐ ಸಹಯೋಗದೊಂದಿಗೆ ನಡೆದ ಕಾರ್ಯಕ್ರಮದಲ್ಲಿ ವಿಶ್ವ ಬಿದಿರು ದಿನಾಚರಣೆಯ ಅಂಗವಾಗಿ ಕಾರ್ಯಾಗಾರದ ಆರಂಭದಲ್ಲಿ ಕ್ಯಾಂಪ್ಕೋ ಅಧ್ಯಕ್ಷ ಎಸ್.ಆರ್ ಸತೀಶ್ಚಂದ್ರ ಮತ್ತು ಬ್ಯಾಂಬೊ ಸೊಸೈಟಿ ಆಫ್ ಇಂಡಿಯಾದ ಅಧ್ಯಕ್ಷ ಸುಂದರ ನಾಯಕ್ ಅವರು ಬರ್ಮಾ ಮತ್ತು ಗೋಡ್ವಾ ತಳಿಯ ಬಿದಿರನ್ನು ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ಬಿದಿರು ಒಂದು ರೀತಿಯ ಕಲ್ಪವ್ರಕ್ಷ:
ಬಿದಿರು ಸಸಿ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಕ್ಯಾಂಪ್ಕೋ ಅಧ್ಯಕ್ಷ ಎಸ್ ಆರ್ ಸತೀಶ್ಚಂದ್ರ ಅವರು ಮಾತನಾಡಿ ಹುಟ್ಡಿನಿಂದ ಚಟ್ಟದ ತನಕ ಬಿದಿರು ಬೇಕು. ಅದೇ ರೀತಿ ಅನೇಕ ವಿವಿಧ ಉಪಯೋಗವಿರುವ ಬಿದಿರು ಒಂದು ರೀತಿಯ ಕಲ್ಪವೃಕ್ಷವಾಗಿದೆ ಎಂದು ಹೇಳಿದರು.

ಬಿದಿರು ಪರಿಸರಾತ್ಮಕ, ಸರ್ವೋತ್ತೊಮುಖ:
ಬ್ಯಾಂಬೋ ಸೊಸೈಟಿ ಆಫ್ ಇಂಡಿಯಾದ ಅಧ್ಯಕ್ಷ ರಾಗಿರುವ ನಿವೃತ್ತ ಅಪರ ಪ್ರಧಾನ ಮುಖ್ಯ ಅರಣ್ಯಸಂರಕ್ಷಣಾಧಿಕಾರಿ ಡಾ.ಕೆ ಸುಂದರ ನಾಯಕ್ ಅವರು ಮಾತನಾಡಿ ಸುಮಾರು ೩ ಸಾವಿರಕ್ಕೂ ಹೆಚ್ಚು ವಿವಿಧ ಉಪಯೋಗವಿರುವ ಬಿದಿರನ್ನು ನಾವು ಅವಲಂಭಿಸುವುದು ಅಗತ್ಯವಾಗಿದೆ. ಬಿದಿರು ಜೈವಿಕ ಸಮತೋಲನ, ಮಣ್ಣಿನ ಸವಕಳಿ ಕಾಪಾಡುತ್ತದೆ ಮತ್ತು ಅತ್ಯಂತ ಶೀಘ್ರ ಬೆಳೆಯುವ ಈ ಬಿದಿರು ಇತರ ಮರಗಿಡಗಳಿಂದ ಹೆಚ್ಚು ಆಮ್ಲಜನಕ ಕೊಡುತ್ತದೆ. ಜೊತೆಗೆ ಪ್ರಾಣಿಗಳ ಬದುಕಿಗೂ ಇದು ಉಪಯುಕ್ತ. ಹಾಗಾಗಿ ಬಿದಿರು ಪರಿಸರತ್ಮಾಕ ಮತ್ತು ಸರ್ವತೋಮುಖವಾಗಿದೆ ಎಂದರು.

ನಿವೃತ್ತ ಅರಣ್ಯಾಧಿಕಾರಿ ಬಿದಿರು ಕೃಷಿಕ ಜನಾರ್ದನ ಹೆಗ್ಡೆಯವರು ಮಾತನಾಡಿ ಬಿದಿರು ಬೆಳೆಸಲು ಕಷ್ಟವಿಲ್ಲ. ಪ್ರಸ್ತುತ ದಿನದಲ್ಲಿ ಬಿದಿರಿನ ಮೂಲಕ ಉತ್ತಮ ಆದಾಯ ಗಳಿಸಬಹುದು ಎಂದು ತಾನು ಬಿದಿರು ಬೆಳೆದು ಆದಾಯಗಳಿಸಿದ ಕುರಿತು ಮಾಹಿತಿ ನೀಡಿದರು. ಬಿದಿರು ಮನೆ ನಿರ್ಮಾಪಕ ದೀಕ್ಷಿತ್ ಕುಮಾರ್ ಎಸ್.ಎಸ್ ಅವರು ಯಾವ ತಳಿಯ ಬಿದಿರು ಹೆಚ್ಚು ಬೆಡಿಕೆ ಮತ್ತು ಮೌಲ್ಯವನ್ನು ಸಂಪದಾದಿಸುವ ಕುರಿತು ಮಾಹಿತಿ ನೀಡಿದರು. ಕಾರ್ಕಳದ ಬಿದಿರು ಕೃಷಿಕ ಬಿ.ಪಿ. ಭಟ್ ಅವರು ಸ್ವಾಗತಿಸಿದರು. ಭಾರತೀಯ ಕಿಸಾನ್ ಸಂಘದ ಅಧ್ಯಕ್ಷ ನಾರಾಯಣ ಭಟ್, ಸುಬ್ರಾಯ ಮತ್ತು ಮೂಲಚಂದ್ರ ವಿವಿಧ ಕಾರ್ಯಕ್ರಮ ನಿರ್ವಹಿಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.