HomePage_Banner
HomePage_Banner
HomePage_Banner
HomePage_Banner
HomePage_Banner
HomePage_Banner

ಉದ್ಯೋಗ ಖಾತ್ರಿ ಯೋಜನೆಯ ಬಗ್ಗೆ ಮಾಹಿತಿ ಕಾರ್ಯಾಗಾರ

Puttur_Advt_NewsUnder_1
Puttur_Advt_NewsUnder_1

ಉಪ್ಪಿನಂಗಡಿ: ತೆರೆದ ಬಾವಿ ಮತ್ತು ದ್ರವ ತ್ಯಾಜ್ಯ ಗುಂಡಿ ರಚನೆ ಬಗ್ಗೆ ವಿಶೇಷ ಅಭಿಯಾನ, ಮಹಾತ್ಮಗಾಂಧಿ ಉದ್ಯೋಗ ಖಾತ್ರಿ ಯೋಜನೆಯ ಮಾಹಿತಿ ಕಾರ್ಯಾಗಾರ ಹಾಗೂ ರೋಜ್‌ಗಾರ್ ದಿವಸ ಕಾರ್ಯಕ್ರಮ ೩೪ ನೆಕ್ಕಿಲಾಡಿ ಗ್ರಾ.ಪಂ. ಸಭಾಂಗಣದಲ್ಲಿ ನಡೆಯಿತು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಪುತ್ತೂರು ತಾ.ಪಂ. ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿ, ದುಡಿಯುವ ಕೈಗಳಿಗೆ ಕೆಲಸ ನೀಡುವ ನಿಟ್ಟಿನಲ್ಲಿ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಹೆಚ್ಚಿನ ಅನುದಾನ ನೀಡಲಾಗುತ್ತಿದ್ದು, ಗ್ರಾಮಸ್ಥರು ಇದನ್ನು ಸದುಪಯೋಗಪಡಿಸಿಕೊಂಡು ಅಭಿವೃದ್ಧಿ ಹೊಂದಬೇಕು. ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕೆಲಸ ಮಾಡಿಸಿದರೆ ಹಣ ಬರುವುದಿಲ್ಲ ಎಂಬ ಭ್ರಮೆ ಬೇಡ. ಕಳೆದ ವರ್ಷದ ಮಾರ್ಚ್ ಅಂತ್ಯದವರೆಗೆ ಪುತ್ತೂರು ತಾಲೂಕಿನಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ೧೨ ಕೋ. ರೂ.ನ ಕಾಮಗಾರಿಗಳು ನಡೆದಿದ್ದು, ಇದರ ಒಂದು ರೂಪಾಯಿ ಹಣವೂ ಪೆಂಡಿಂಗ್ ಆಗದೇ ಫಲಾನುಭವಿಗಳಿಗೆ ದೊರೆತಿದೆ. ಉದ್ಯೋಗ ಚೀಟಿ ಮಾಡಿಕೊಂಡು ಇಂಗು ಗುಂಡಿಗಳಂತಹ ಕಾಮಗಾರಿ ಕೈಗೊಂಡರೆ ದಿನವೊಂದಕ್ಕೆ ಒಂದು ಸಾವಿರ ರೂಪಾಯಿಯೂ ಗಳಿಸಬಹುದು. ಅದು ಅವರವರ ಕೆಲಸಕ್ಕೆ ಅನುಗುಣವಾಗಿರುತ್ತದೆ. ದ್ರವ ತ್ಯಾಜ್ಯ ಗುಂಡಿ, ತೆರೆದ ಬಾವಿ ರಚನೆ, ತೋಟಗಾರಿಕೆ, ಆಡು, ಕೋಳಿ, ಜಾನುವಾರು ಸಾಕಣಾ ಶೆಡ್ ಸೇರಿದಂತೆ ಹಲವು ಕಾಮಗಾರಿಗಳಿಗೆ ಈ ಯೋಜನೆಯಡಿ ಅನುದಾನ ಲಭ್ಯವಿದ್ದು, ಪ್ರತಿಯೋರ್ವರೂ ಇದನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದರು.

ಉದ್ಯೋಗ ಖಾತ್ರಿ ಯೋಜನೆಯ ಪುತ್ತೂರು ತಾಲೂಕು ಸಹಾಯಕ ನಿರ್ದೇಶಕಿ ಶೈಲಜಾ ಭಟ್ ಮಾತನಾಡಿ ಉದ್ಯೋಗ ಖಾತ್ರಿ ಯೋಜನೆಯ ಬಗ್ಗೆ ಮಾಹಿತಿ ನೀಡಿದರಲ್ಲದೆ, ಪ್ರಶ್ನೆಗಳಿಗೆ ಉತ್ತರಿಸಿ, ಬಿಪಿಎಲ್ ಪಡಿತರ ಚೀಟಿದಾರರಿಗೆ ವೈಯಕ್ತಿಕ ಕಾಮಗಾರಿ ನಡೆಸಲು ಸಣ್ಣ ರೈತ ದೃಢೀಕರಣ ಪತ್ರ ಬೇಕಾಗಿಲ್ಲ. ದನದ ಹಟ್ಟಿ, ಕೋಳಿ ಗೂಡು ಸೇರಿದಂತೆ ಇತರೆ ನಿರ್ಮಾಣ ಕಾಮಗಾರಿಗಳನ್ನು ಈ ಯೋಜನೆಯಡಿ ನಿರ್ಮಿಸುವಾಗ ಖರೀದಿಸುವ ಕಚ್ಛಾ ಸಾಮಗ್ರಿಗಳಿಗೆ ೩೦,೦೦೦ ದೊಳಗೆ ಜಿಎಸ್‌ಟಿ ಬಿಲ್ ಸಲ್ಲಿಸಬೇಕಾಗಿಲ್ಲ. ಒಂದು ಬಿಳಿ ಹಾಳೆಯಲ್ಲಿ ಖರೀದಿಸಿದ ಸಾಮಗ್ರಿಗಳ ೩೦ ಸಾವಿರದೊಳಗಿನ ಮೊತ್ತವನ್ನು ನಮೂದಿಸಿ ಅದರ ಕೆಳಗೆ ಸಹಿ ಹಾಕಿ ಗ್ರಾ.ಪಂ.ಗೆ ಕೊಟ್ಟರೆ ಸಾಕು. ಎಂಜಿನಿಯರ್‌ಗಳು ಕಾಮಗಾರಿ ಪರಿಶೀಲಿಸಿ ನೀಡಿದ ಎಂಬಿಯ ಪ್ರಕಾರ ಹಣ ಬಿಡುಗಡೆ ಮಾಡಲಾಗುವುದು ಎಂದರು.

ಉದ್ಯೋಗ ಖಾತ್ರಿ ಯೋಜನೆಯ ಸಹಾಯಕ ಅಭಿಯಂತರೆ ಶ್ರೀಲಕ್ಷ್ಮೀ ಹಾಗೂ ತಾಂತ್ರಿಕ ಸಹಾಯಕಿ ಸವಿತಾ ಲೋಬೋ ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ತಾ.ಪಂ. ಸದಸ್ಯೆ ಸುಜಾತಕೃಷ್ಣ ಆಚಾರ್ಯ, ಗ್ರಾ.ಪಂ. ಮಾಜಿ ಅಧ್ಯಕ್ಷೆ ರತಿ ಎಸ್. ನಾಯ್ಕ, ಸದಸ್ಯರಾದ ಅನಿ ಮಿನೇಜಸ್, ಶೇಖಬ್ಬ ಎನ್., ಪ್ರಶಾಂತ, ಸತ್ಯವತಿ, ಉದ್ಯೋಗಖಾತ್ರಿಯ ಶ್ರೀಮತಿ ನಿಶ್ಮಿತಾ ಬಿ. ಉಪಸ್ಥಿತರಿದ್ದರು.
ನೆಕ್ಕಿಲಾಡಿ ಗ್ರಾ.ಪಂ. ಪಿಡಿಒ ಜಯಪ್ರಕಾಶ್ ಸ್ವಾಗತಿಸಿದರು. ಕಾರ್ಯದರ್ಶಿ ಕುಮಾರಯ್ಯ ವಂದಿಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.