HomePage_Banner
HomePage_Banner
HomePage_Banner
HomePage_Banner
HomePage_Banner
HomePage_Banner

ನೆಕ್ಕಿಲಾಡಿ ಜೇಸಿಐಯ ಸಪ್ತಾಹ ಸಮಾರೋಪ

Puttur_Advt_NewsUnder_1
Puttur_Advt_NewsUnder_1

ಉಪ್ಪಿನಂಗಡಿ: ಜೇಸಿಐ ನೆಕ್ಕಿಲಾಡಿಯ ಜೇಸಿ ಸಪ್ತಾಹ-೨೦೨೦ರ ಸಮಾರೋಪ ಸಮಾರಂಭ ೩೪ ನೆಕ್ಕಿಲಾಡಿಯ ಕ್ಷೇಮಧರ್ಮ ಸಭಾಭವನದಲ್ಲಿ ನಡೆಯಿತು.

ಮುಖ್ಯ ಅತಿಥಿಯಾಗಿ ಭಾಗವಹಿಸಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಜೇಸಿಐ ವಲಯ ಉಪಾಧ್ಯಕ್ಷ ಪ್ರದೀಪ್ ಬಾಕಿಲ, ಜೇಸಿಐಯು ಸಾಮರಸ್ಯದ ಬದುಕನ್ನು ಕಲಿಸುತ್ತಿದ್ದು, ನಾವೆಲ್ಲಾ ಒಂದೇ ಎಂಬ ಮನೋಭಾವದಲ್ಲಿ ಸಮಾಜ ಸೇವೆ ಮಾಡುವ ಗುಣವನ್ನು ರೂಪಿಸುತ್ತದೆ. ಜೇಸಿಐ ನೆಕ್ಕಿಲಾಡಿಯು ಉತ್ತಮ ಸಮಾಜಮುಖಿ ಕೆಲಸಗಳನ್ನು ಮಾಡುತ್ತಿದ್ದು, ಕೋವಿಡ್-೧೯ನ ಲಾಕ್‌ಡೌನ್‌ನ ಅವಧಿಯಲ್ಲಿ ಸಂಕಷ್ಟಕ್ಕೀಡಾದ ಕುಟುಂಬಗಳಿಗೆ ಆಹಾರ ಸಾಮಗ್ರಿಗಳನ್ನು ವಿತರಿಸುವ ಮೂಲಕ ಉತ್ತಮ ಕಾರ್ಯ ಮಾಡಿದೆ ಎಂದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಜೇಸಿಐ ಉಪ್ಪಿನಂಗಡಿಯ ಪೂರ್ವಾಧ್ಯಕ್ಷ ಜಯಪ್ರಕಾಶ್ ಶೆಟ್ಟಿ, ಜೇಸಿಐಯು ಸಂವಹನ ಕಲೆ, ನಾಯಕತ್ವ ಗುಣವನ್ನು ಕಲಿಸುತ್ತಿದ್ದು, ಸಮಾಜಮುಖಿ ಕಾರ್ಯಗಳನ್ನು ನಡೆಸಲು ಪ್ರೇರೆಪಿಸುತ್ತದೆ ಎಂದರು.

ಈ ಸಂದರ್ಭ ಬೆಳಾಲು ಶಾಲೆಗೆ ಸ್ಯಾನಿಟೈಸರ್ ಸ್ಟ್ಯಾಂಡ್ ಅನ್ನು ಕೊಡುಗೆಯಾಗಿ ನೀಡಲಾಯಿತು. ವೇದಿಕೆಯಲ್ಲಿ ಜೇಸಿಐ ನೆಕ್ಕಿಲಾಡಿ ಘಟಕದ ಸ್ಥಾಪಕಾಧ್ಯಕ್ಷ ಶಿವಕುಮಾರ್ ಬಾರಿತ್ತಾಯ, ಜೇಸಿಐ ವಲಯ ಸಂಯೋಜಕ ವಿನೀತ್ ಶಗ್ರಿತ್ತಾಯ, ಜೇಸಿಐ ನೆಕ್ಕಿಲಾಡಿ ಅಧ್ಯಕ್ಷ ರಮೇಶ್ ಸುಭಾಶ್‌ನಗರ ಉಪಸ್ಥಿತರಿದ್ದರು.

ಸುಬ್ರಹ್ಮಣ್ಯ ಬಾರಿತ್ತಾಯ ಜೇಸಿ ವಾಣಿ ವಾಚಿಸಿದರು. ಜೇಸಿಐ ನಿಕಟಪೂರ್ವಾಧ್ಯಕ್ಷೆ ಅಮಿತಾ ಹರೀಶ್ ಸ್ವಾಗತಿಸಿದರು. ಕಾರ್ಯದರ್ಶಿ ಅನಿ ಮಿನೇಜಸ್ ವಂದಿಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.