HomePage_Banner
HomePage_Banner
HomePage_Banner
HomePage_Banner
HomePage_Banner
HomePage_Banner

ಬುದ್ಧಿ ಭ್ರಮಣೆಯಾದವರಿಗೆ ಹೊರತುಪಡಿಸಿ ಉಳಿದವರೆಲ್ಲರಿಗೂ ನಮಾಝ್ ಕಡ್ಡಾಯ: ಹಕೀಂ ಫೈಝಿ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಇಸ್ಲಾಮ್‌ನಲ್ಲಿ ನಮಾಜಿಗೆ ಹೆಚ್ಚಿನ ಪ್ರಾಶಸ್ತ್ಯವನ್ನು ನೀಡಲಾಗಿದೆ, ನಮಾಜು ಮಾಡದವ ನೈಜ ಮುಸ್ಲಿಮನಾಗಲಾರ, ಬುದ್ಧಿ ಭ್ರಮಣೆಯಾದವರಿಗೆ ಹೊರತುಪಡಿಸಿ ಉಳಿದ ಎಲ್ಲರಿಗೂ ಇಸ್ಲಾಂನಲ್ಲಿ ನಮಾಜ್ ಕಡ್ಡಾಯವಾಗಿದೆ ಎಂದು ಕುಂಬ್ರ ಬದ್ರಿಯಾ ಜುಮಾ ಮಸೀದಿ ಇಮಾಂ ಲುಕ್ಮಾನುಲ್ ಹಕೀಂ ಫೈಝಿ ಹೇಳಿದರು.

ಅವರು ಶುಕ್ರವಾರದ ಜುಮಾ ನಮಾಜ್ ಬಳಿಕ ಮಸೀದಿಯಲ್ಲಿ ನಡೆದ ಧಾರ್ಮಿಕ ಪ್ರವಚನದಲ್ಲಿ ಮುಖ್ಯ ಭಾಷಣ ಮಾಡಿದರು. ವ್ಯಕ್ತಿಗೆ ಯಾವುದೇ ರೋಗ ಇರಲಿ, ಅಂಗವೈಕಲ್ಯತೆ ಇರಲಿ, ಮಾರಕ ಕಾಯಿಲೆ ಇದ್ದರೂ ಆತನಿಗೆ ನಮಾಜ್ ಕಡ್ಡಾಯವಾಗಿದೆ. ನಮಾಜ್ ಮಾಡದವನ ಯಾವುದೇ ಪುಣ್ಯಕರ್ಮವನ್ನು ಅಲ್ಲಾಹನು ಸ್ವೀಕರಿಸುವುದಿಲ್ಲ. ದಿನ ಐದು ಹೊತ್ತು ನಮಾಜ್ ಮಾಡದ ಮುಸ್ಲಿಮನ ಸ್ನೇಹ ಸಂಬಂಧವನ್ನು ಬೆಳೆಸುವುದನ್ನು ಅಲ್ಲಾಹನು ವಿರೋಧಿಸಿದ್ದಾನೆ ಎಂದು ಹೇಳಿದರು.

ಪರನಿಂದನೆ, ಅಸೂಯೆ ಎಲ್ಲದರಿಂದಲೂ ಮುಕ್ತವಾಗಿ ಆಧ್ಯಾತ್ಮತೆಯಲ್ಲಿ ನಾವು ಮನಸ್ಸನ್ನು , ಹೃದಯವನ್ನು ಶುದ್ದಿಗೊಳಿಸಿದರೆ ಮಾತ್ರ ನಾವು ಅಲ್ಲಾಹನ ಬಳಿ ವಿಜಯಿಗಳಾಗಲು ಸಾಧ್ಯ. ಮಕ್ಕಳಿಗೆ ಎಳೆಯ ಪ್ರಾಯದಲ್ಲಿಯೇ ಉತ್ತಮ ಸಂಸ್ಕಾರವನ್ನು ಕಲಿಸಬೇಕು ಆ ಕಾರ್ಯ ಮನೆಯಿಂದಲೇ ನಡೆಯಲಿ ಎಂದು ಹೇಳಿದರು. ಜಮಾತ್ ಕಮಿಟಿ ಅಧ್ಯಕ್ಷ ಅಬ್ದುಲ್ ಹಮೀದ್ ರಾಯಲ್, ಮುಅಲ್ಲಿಂ ಜಾಬಿರ್ ಜೌಹರಿ ಸೇರಿದಂತೆ ಜಮಾತರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.