HomePage_Banner
HomePage_Banner
HomePage_Banner
HomePage_Banner
HomePage_Banner
HomePage_Banner

ನರಿಮೊಗರು: ಸಂತೃಪ್ತಿ ಚಿಕನ್ಸ್ ಶುಭಾರಂಭ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ನರಿಮೊಗರು ಪಾಪೆತ್ತಡ್ಕ ಎಂಬಲ್ಲಿ ಹೈಜೆನಿಕ್, ಆರೋಗ್ಯಕರ ಮತ್ತು ರುಚಿಯುಳ್ಳ ಕೋಳಿ, ಮೊಟ್ಟೆ, ಮೀನು ಖಾದ್ಯವನ್ನೊಳಗೊಂಡ ಸಂತೃಪ್ತಿ ಚಿಕನ್ & ಮೋರ್ ಸಂಸ್ಥೆಯು ಸೆ.18ರಂದು ಶುಭಾರಂಭಗೊಂಡಿತು.

ಪುತ್ತೂರು ಬಿಲ್ಲವ ಸಂಘದ ಅಧ್ಯಕ್ಷ ಜಯಂತ್ ನಡುಬೈಲು ಹಾಗೂ ಪುತ್ತೂರು ಎಪಿಎಂಸಿ ಅಧ್ಯಕ್ಷ ದಿನೇಶ್ ಮೆದುರವರು ಜಂಟಿಯಾಗಿ ಸಂಸ್ಥೆಯನ್ನು ಉದ್ಘಾಟಿಸಿದರು. ಬಳಿಕ ಮಾತನಾಡಿದ ಜಯಂತ್ ನಡುಬೈಲುರವರು, ವ್ಯಾಪಾರ ಪ್ರಾರಂಭಿಸಬೇಕಾದರೆ ನಮಗೆ ಮೊದಲು ಆತ್ಮವಿಶ್ವಾಸ ಇರಬೇಕು. ಕೋಳಿ ಸಾಕಣಿಕೆಯು ಕೃಷಿ ಸಂಬಂಧಿತ ಉದ್ದಿಮೆಯಾಗಿದ್ದು, ಆರ್ಥಿಕ ವ್ಯವಸ್ಥೆಯಲ್ಲಿ ದೇಶದಲ್ಲಿಯೇ ಮುಂಚೂಣಿಯ ಉದ್ದಿಮೆಯಾಗಿ ಬೆಳೆದಿದೆ. ಕೋಳಿ ಸಾಕಣಿಕೆ ಉದ್ಯಮವನ್ನು `ಕೇವಲ’ ಎಂಬಂತೆ ನೋಡದೆ ಉದ್ಯಮವನ್ನು ಬೆಳೆಸಬೇಕು. ಈ ಉದ್ದಿಮೆಯಲ್ಲಿ ಏಳು-ಬೀಳು ಪರಿಸ್ಥಿತಿಯನ್ನು ಉದ್ದಿಮೆದಾರರು ಎದುರಿಸಬೇಕಾದರೂ, ಬಹಳ ಜಾಗರೂಕರಾಗಿ ಈ ಉದ್ದಿಮೆಯನ್ನು ಬೆಳೆಸಿದ್ದಲ್ಲಿ ಯಶಸ್ಸು ಖಂಡಿತಾ ಸಿಗುತ್ತದೆ. ಈ ಗ್ರಾಮೀಣ ಭಾಗದಲ್ಲಿ ಚಿಕನ್ ಸೆಂಟರ್ ಉದ್ದಿಮೆಯನ್ನು ಪ್ರಾರಂಭಿಸಿದ ಕಿರಣ್ ಕುಮಾರ್‌ರವರಿಗೆ ಗ್ರಾಹಕರು ಸಂಪೂರ್ಣ ಸಹಕಾರ ನೀಡುವಂತಾಗಲಿ ಎಂದು ಹೇಳಿ ಶುಭಹಾರೈಸಿದರು.

ಪುತ್ತೂರು ಎಪಿಎಂಸಿ ಅಧ್ಯಕ್ಷ ದಿನೇಶ್ ಮೆದುರವರು ಮಾತನಾಡಿ, ಯಾವುದೇ ಸಂಸ್ಥೆ ಪ್ರಾರಂಭ ಮಾಡಬೇಕಾದರೂ ಸೂಕ್ತವಾದ ಉದ್ಧೇಶ ಮತ್ತು ಗುರಿಯನ್ನು ಹೊಂದಿರಬೇಕು. ಕೋಳಿ ಉದ್ಯಮವು ಕೂಡ ಕೃಷಿಗೆ ಸಂಬಂಧಪಟ್ಟಿದ್ದರಿಂದ ಹೇಗೆ ರೈತರು ಕೆಲವೊಮ್ಮೆ ನಷ್ಟಕ್ಕೊಳಪಡುತ್ತಾರೋ ಹಾಗೆಯೇ ಕೋಳಿ ಉದ್ಯಮವು ಕೂಡ ನಷ್ಟಕ್ಕೊಳಗಾಗುವ ಪರಿಸ್ಥಿತಿ ಇರುತ್ತದೆ. ಬೆಂಗಳೂರಿನಲ್ಲಿ ಕಂಪೆನಿಯೊಂದರ ಉದ್ಯೋಗಿಯಾಗಿದ್ದು, ಪ್ರಸ್ತುತ ವಿಶ್ವವೇ ಎದುರಿಸುವ ಕೊರೋನಾ ಮಹಾಮಾರಿಯಿಂದಾಗಿ ಕಿರಣ್ ಕುಮಾರ್‌ರವರು ಕಂಪೆನಿ ಉದ್ಯೋಗ ತ್ಯಜಿಸಿ ತಮ್ಮ ಊರಿನಲ್ಲಿಯೇ ಸ್ವಂತ ಉದ್ದಿಮೆಯನ್ನು ಆರಂಭಿಸುವ ಮೂಲಕ ಎಲ್ಲರಿಗೆ ಮಾದರಿಯಾಗಿದ್ದಾರೆ. ಗ್ರಾಹಕರಲ್ಲಿ ನಗುಮುಖದ ಸೇವೆಯೊಂದಿಗೆ ಗ್ರಾಹಕ ಸ್ನೇಹಿಯಾದಾಗ ಉದ್ಯಮವು ಮುನ್ನೆಡೆಯಬಲ್ಲುದು ಎಂದು ಹೇಳಿ ಶುಭ ಹಾರೈಸಿದರು.

ಪುತ್ತೂರು ಮರಾಠಿ ಸಮಾಜ ಸೇವಾ ಸಂಘದ ಅಧ್ಯಕ್ಷರಾದ ಶಿವಪ್ಪ ನಾಯ್ಕರವರು ಮಾತನಾಡಿ, ತರಕಾರಿ ಹೇಗೆ ಮನುಷ್ಯನಿಗೆ ಉಪಯುಕ್ತವೋ ಹಾಗೆಯೇ ಕೋಳಿ ಆಹಾರ ಕೂಡ ಮಾನವನ ಬೆಳವಣಿಗೆಗೆ ಉಪಯುಕ್ತವಾಗಿದೆ. ಮಧುಮೇಹಿಗಳಿಗೆ ನಿಯಮಿತ ಬ್ರಾಯ್ಲರ್ ಕೋಳಿ ಆಹಾರ ಬಹಳ ಉಪಯುಕ್ತ ಎಂದು ಸಂಶೋಧನೆಗಳ ಅಂಕಿ ಅಂಶಗಳು ಹೇಳುತ್ತದೆ. ಸ್ವಂತ ದುಡಿಮೆಯಿಂದ ಮಾನವನ ಅಭಿವೃದ್ಧಿ ಸಾಧ್ಯ ಎಂಬಂತೆ ಹಲವಾರು ಮಂದಿ ಸ್ವಂತ ಉದ್ದಿಮೆಯಲ್ಲಿ ತೊಡಗಿಸಿಕೊಂಡು ಯಶಸ್ವಿ ಎನಿಸಿದ್ದಾರೆ. ಅದರಂತೆ ಯುವ ಉದ್ಯಮಿ ಕಿರಣ್ ಕುಮಾರ್‌ರವರು ತನ್ನ ಸ್ವಂತ ಉದ್ದಿಮೆಯಿಂದ ಎಲ್ಲರ ಜನಮನ್ನಣೆ ಗಳಿಸಲಿ ಎಂದು ಹೇಳಿ ಶುಭಹಾರೈಸಿದರು.

ಮುಂಡೂರು ಗ್ರಾಮ ಪಂಚಾಯತ್‌ನ ನಿಕಟಪೂರ್ವ ಅಧ್ಯಕ್ಷರಾದ ಎಸ್.ಡಿ ವಸಂತ್‌ರವರು ಮಾತನಾಡಿ, ಮನುಷ್ಯ ಸಮಾಜದಲ್ಲಿ ಬಾಳಬೇಕಾದರೆ ಉದ್ಯೋಗದ ಅನಿವಾರ್ಯತೆ ಖಂಡಿತಾ ಇದೆ. ಯಾವುದೇ ಉದ್ಯಮ ಆರಂಭ ಮಾಡಿದ ಮೇಲೆ ಉದ್ಯಮವು ಯಶಸ್ವಿಯ ಹಾದಿಯಲ್ಲಿ ಸಾಗಬೇಕಾದರೆ ಆತನಲ್ಲಿ ಗ್ರಾಹಕರಲ್ಲಿ ವ್ಯವಹರಿಸಲು ಉತ್ತಮ ಸಂವಹನ ಕೌಶಲ್ಯದ ಅಗತ್ಯವಿದೆ. ಪ್ರಾಮಾಣಿಕತೆ ಹಾಗೂ ನಿಷ್ಠೆಯನ್ನು ಮೈಗೂಡಿಸಿಕೊಂಡಲ್ಲಿ ಯಾವುದೇ ಉದ್ಯಮ ಯಶಸ್ವಿಯಾಗಲು ಸಾಧ್ಯ ಎಂದು ಹೇಳಿ ಶುಭಹಾರೈಸಿದರು.

ನರಿಮೊಗರು ಸುವರ್ಣ ಎಸ್ಟೇಟ್ ಮಾಲಕ ವೇದನಾಥ ಸುವರ್ಣರವರು ಸಂದರ್ಭೋಚಿತವಾಗಿ ಮಾತನಾಡಿದರು. ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ವಠಾರದ ಗಣೇಶೋತ್ಸವ ಸಮಿತಿಯ ಕಾರ್ಯಾಧ್ಯಕ್ಷ ಅರುಣ್ ಕುಮಾರ್ ಪುತ್ತಿಲ, ಮುಂಡೂರು ಗ್ರಾಮ ಪಂಚಾಯತ್ ಮಾಜಿ ಸದಸ್ಯ ಬಿ.ಟಿ ಮಹೇಶ್ಚಂದ್ರ ಸಾಲಿಯಾನ್, ಪಾಣಾಜೆ ಮಹಾ ಶಕ್ತಿ ಕೇಂದ್ರದ ಅಧ್ಯಕ್ಷ ಜಯರಾಂ ಪೂಜಾರಿ, ನಿವೃತ್ತ ಅಬಕಾರಿ ನಿರೀಕ್ಷಕ ನಾರ್ಣಪ್ಪ ನಾಯ್ಕ ಪುಣ್ಚಪ್ಪಾಡಿ, ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯ ಜ್ಯೂನಿಯರ್ ಇಂಜಿನಿಯರ್ ಪರಮೇಶ್ವರ ನಾಯ್ಕ, ಪುಣಚ ಆದರ್ಶ ಚಿಕನ್ಸ್ ಮಾಲಕ ಸಂತೋಷ್ ಕುಮಾರ್ ಪುಣಚ, ಪಾಪೆತ್ತಡ್ಕ ಮಸೀದಿಯ ಮಾಜಿ ಅಧ್ಯಕ್ಷ ಅಬ್ಬಾಸ್ ಪಾಪೆತ್ತಡ್ಕ ಎಪಿಎಂಸಿ ಮಾಜಿ ಸದಸ್ಯ ಬಿ.ಕೆ ಸುಂದರ ನಾಯ್ಕ, ಶಾರದಾಂಬ ಭಜನಾ ಮಂದಿರದ ಮಾಜಿ ಅಧ್ಯಕ್ಷ ಜಯರಾಂ ಗೌಡ ಸೇರಾಜೆ, ಮಂಗಳೂರು ಆಕಾಶವಾಣಿ ಕೇಂದ್ರದ ಉದ್ಯೋಗಿ ರಾಮ ನಾಯ್ಕ, ಕೋರ್ಪೋರೇಶನ್ ಬ್ಯಾಂಕ್ ಉದ್ಯೋಗಿ ಈಶ್ವರ ಬೆಡೇಕರ್, ಮೋಹನ ನಾಯ್ಕ್ ಕಾಳಿಂಗಹಿತ್ತಿಲು, ಪೂವಪ್ಪ ನಾಯ್ಕ ಸವಣೂರು, ಮೋಹನ ನಾಯ್ಕ ಕೇದಗೆದಡಿ, ನರಿಮೊಗರು ಭಾಸ್ಕರ್ ರೈ, ವಸಂತ ರೈ ಕಾಳಿಂಗಹಿತ್ಲು ಸಹಿತ ಮತ್ತೀತರರು ಆಗಮಿಸಿ ಶುಭಹಾರೈಸಿದರು.

ಅರ್ಚಕರಾದ ನಾರಾಯಣ ಐತ್ತಾಳ ನರಿಮೊಗರುರವರು ಧಾರ್ಮಿಕ ವಿಧಿವಿಧಾನವನ್ನು ನೆರವೇರಿಸಿದರು. ಸಂಸ್ಥೆಯ ಮಾಲಕ ಕಿರಣ್ ಕುಮಾರ್ ಸ್ವಾಗತಿಸಿ, ನಿವೃತ್ತ ಅಬಕಾರಿ ಉಪ ನಿರೀಕ್ಷಕ ಮಹಾಲಿಂಗ ನಾಯ್ಕ ವಂದಿಸಿದರು. ಪಾಣಾಜೆ ಮಹಾ ಶಕ್ತಿ ಕೇಂದ್ರದ ಅಧ್ಯಕ್ಷ ಜಯರಾಂ ಪೂಜಾರಿರವರು ಪ್ರಾಸ್ತಾವಿಕವಾಗಿ ಮಾತನಾಡಿ, ಕಾರ್ಯಕ್ರಮ ನಿರೂಪಿಸಿದರು.

ಸಂಸ್ಥೆಯಲ್ಲಿ ಟೈಸನ್, ಬ್ರಾಯ್ಲರ್, ಊರಕೋಳಿಗಳು ದೊರೆಯುತ್ತಿದ್ದು, ಸಭೆ ಸಮಾರಂಭಗಳಿಗೆ ರಿಯಾಯಿತಿ ದರದಲ್ಲಿ ಒದಗಿಸಲಾಗುವುದು. ತಾನು ನಿಮ್ಮವನೇ, ಗ್ರಾಹಕರ ಆಶೀರ್ವಾದ ಎಂದಿಗೂ ನಮ್ಮ ಮೇಲಿರಲಿ. ಗ್ರಾಹಕರು ಪ್ರೋತ್ಸಾಹಿಸಿ, ಸಹಕರಿಸಬೇಕು ಕಿರಣ್ ಕುಮಾರ್, ”ಜ್ಯೋತಿಕಿರಣ”, ಮಾಲಕರು

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.