HomePage_Banner
HomePage_Banner
HomePage_Banner
HomePage_Banner
HomePage_Banner
HomePage_Banner

ಯುವ ಸಮುದಾಯದ ಪ್ರೇರಾಣಾ ಶಕ್ತಿ ಪ್ರಧಾನಿ ನರೇಂದ್ರ ಮೋದಿ | ಸೇವಾ ಸಪ್ತಾಹದ ಅಂಗವಾಗಿ ರಕ್ತದಾನ ಶಿಬಿರದ ಉದ್ಘಾಟಿಸಿ ಶಾಸಕ ಮಠಂದೂರು

Puttur_Advt_NewsUnder_1
Puttur_Advt_NewsUnder_1

ಪುತ್ತೂರು:೭೦ರ ಹರೆಯದಲ್ಲಿರುವ ಪ್ರಧಾನಿ ನರೇಂದ್ರ ಮೋದಿಯವರು ೨೦ರ ಹರೆಯದಂತೆ ದಿನದ ೧೮ ಗಂಟೆ ದೇಶಕ್ಕಾಗಿ ಕೆಲಸ ಮಾಡುತ್ತಿದ್ದಾರೆ. ಅವರ ನಾಯಕತ್ವ ಯುವ ಸಮುದಾಯಕ್ಕೆ ಪ್ರೇರಣಾ ಶಕ್ತಿಯಾಗಿದೆ. ಪ್ರಧಾನಿಯವರ ಸಾಧನೆಗೆ ಹುಟ್ಟು ಹಬ್ಬದ ಅಂಗವಾಗಿ ನಡೆಯುವ ಏಳು ದಿನದ ಸೇವಾ ಚಟುವಟಿಕೆಗಳು ಅಲ್ಪವೇ ಆಗಿದೆ ಎಂದು ಶಾಸಕ ಸಂಜೀವ ಮಠಂದೂರು ಹೇಳಿದರು.

ಭಾರತೀಯ ಜನತಾ ಪಾರ್ಟಿ, ದ.ಕ ಜಿಲ್ಲಾ ಯುವ ಮೋರ್ಚಾ, ಪುತ್ತೂರು ಗ್ರಾಮಾಂತರ, ನಗರ ಮಂಡಲ, ಸುಳ್ಯ ಹಾಗೂ ಬೆಳ್ತಂಗಡಿ ಮಂಡಲದ ಯುವ ಮೋರ್ಚಾಗಳ ಸಂಯುಕ್ತ ಆಶ್ರಯದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ೭೦ ನೇ ಹುಟ್ಟು ಹಬ್ಬದ ಪ್ರಯುಕ್ತ ಸೇವಾ ಸಪ್ತಾಹದ ಅಂಗವಾಗಿ ಸೆ.೧೯ರಂದು ಕೋ.ಆಪರೇಟಿವ್ ಟೌನ್ ಬ್ಯಾಂಕ್ ಹಾಲ್‌ನಲ್ಲಿ ನಡೆದ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಅತೀ ಹೆಚ್ಚು ಯುವಕರನ್ನು ಹೊಂದಿರುವ ಭಾರತ ದೇಶದ ಯುವ ಸಮುದಾಯವು ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವವು ಹೊಸ ಪ್ರೇರಣೆ ನೀಡುತ್ತಿದೆ. ಹೀಗಾಗಿ ಕುಟುಂಬದ ಜೊತೆ ಆಚರಿಸಲ್ಪಡುತ್ತಿರುವ ಪ್ರಧಾನಿಯವರ ಹುಟ್ಟು ಹಬ್ಬವನ್ನು ದೇಶದ ೧೩೦ಕೋಟಿ ಪ್ರಜೆಗಳು ಆಚರಿಸುವಂತಾಗಿದೆ. ಹುಟ್ಟು ಹಬ್ಬದ ಅಂಗವಾಗಿ ನಡೆಯುವ ಸೇವಾ ಸಪ್ತಾಹದಲ್ಲಿ ಸಮಾಜದ ಕಟ್ಟ ಕಡೆಯ ಜನರ ಆರೋಗ್ಯ ರಕ್ಷಣೆಗೆ ಆಧ್ಯತೆ ನೀಡಿ ಯುವ ಮೋರ್ಚಾ ಕೆಲಸ ಮಾಡುತ್ತಿದೆ ಎಂದರು. ಕೋವಿಡ್‌ನಿಂದ ಕಂಗೆಟ್ಟ ಗ್ರಾಮೀಣ ಯುವಕ, ಯುವತಿಯರಿಗೆ ಆತ್ಮನಿರ್ಬರ ಭಾರತ್ ಯೋಜನೆಯಲ್ಲಿ ಸ್ವಾವಲಂಭಿ ಬದುಕು ನೀಡುವ ಮುಖಾಂತರ ಗಾಂಧೀಜಿಯವರ ಗ್ರಾಮ ಸ್ವರಾಜ್ಯದ ಕನಸು ನನಸಾಗಿದೆ. ದೇಶದ ರಕ್ಷಣಾ ಕ್ಷೇತ್ರ, ವಿದ್ಯಾಕ್ಷೇತ್ರ, ಆರ್ಥಿಕ ಕ್ಷೇತ್ರದಲ್ಲಿ ಅಮೂಲಾಗ್ರ ಬದಲಾವಣೆ ಮಾಡುವ ಮೂಲಕ ಹೊಸ ಚೈತನ್ಯ ತುಂಬುವ ಕೆಲಸ ಪ್ರಧಾನಿ ನರೇಂದ್ರ ಮೋದಿಯವ ನಾಯಕತ್ವದಲ್ಲಿ ನಡೆಯುತ್ತಿದೆ ಎಂದರು.

ಪಕ್ಷದ ವಿಭಾಗ ಸಹಪ್ರಭಾರಿ ಗೋಪಾಲಕೃಷ್ಣ ಹೇರಳೆ ಮಾತನಾಡಿ, ಸಮಾಜದ ಕಟ್ಟ ಕಡೆಯ ಜನರ ಆರೋಗ್ಯ ರಕ್ಷಣೆಯ ದೃಷ್ಠಿಯಿಂದ ಪ್ರಥಮ ಬಾರಿಗೆ ಆಯುಷ್ಮಾನ್ ಕಾರ್ಡ್ ನೋಂದಾವಣೆ ಮಾಡುವ ಮೂಲಕ ರಾಜ್ಯಕ್ಕೆ ಸಂದೇಶ ಕಳುಹಿಸಿರುವ ಪುತ್ತೂರಿನ ಯುವ ಮೋರ್ಚಾ ಅಭಿನಂದನಾರ್ಹವಾಗಿದೆ. ಮುಂದಿನ ದಿನಗಳಲ್ಲಿ ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಜನ್ಮ ದಿನಾಚರಣೆಯನ್ನು ಪ್ರತಿ ಬೂತ್‌ಗಳಲ್ಲಿ ಆಚರಣೆ, ೧೮ ವರ್ಷ ತುಂಬಿರುವ ಪ್ರತಿಯೊಬ್ಬರನ್ನು ಮತರದಾರರ ಪಟ್ಟಿಗೆ ಸೇರ್ಪಡೆಗೊಳಿಸುವ ಕಾರ್ಯ ಹಾಗೂ ಕೇಂದ್ರ ಹಾಗೂ ರಾಜ್ಯ ಸರಕಾರದ ಯೋಜನೆಗಳನ್ನು ಜನಸಾಮಾನ್ಯರಿಗೆ ಮಾಹಿತಿ ನೀಡಿ ಅವುಗಳನ್ನು ಸದುಪಯೋಗಪಡಿಕೊಳ್ಳುವ ನಿಟ್ಟಿನಲ್ಲಿ ಯುವ ಮೋರ್ಚಾ ಕಾರ್ಯಪ್ರವೃತ್ತರಾಗಬೇಕು ಎಂದರು.

ಜಿಲ್ಲಾ ಕಾರ್ಯದರ್ಶಿ, ಯುವ ಮೋರ್ಚಾದ ಪ್ರಭಾರಿ ಸತೀಶ್ ಕುಂಪಲ ಮಾತನಾಡಿ, ಮಾದರಿ ಕೆಲಸ ಮಾಡುವ ಮುಖಾಂತರ ಯುವ ಮೋರ್ಚಾ ಶಕ್ತಿಯುತ ಸಮಾಜ ನಿರ್ಮಾಣ ಮಾಡುವಲ್ಲಿ ಶ್ರಮಿಸುತ್ತಿದೆ. ರಾಜ್ಯದಲ್ಲಿಯೇ ಪ್ರಥಮ ಬಾರಿಗೆ ಆಯುಷ್ಮಾನ್ ನೋಂದಣಿಗೆ ಚಾಲನೆ, ರಕ್ತದಾನ ಶಿಬಿರ ಆಯೋಜಿಸುವ ಮೂಲಕ ನಿರೀಕ್ಷೆಗೆ ಮೀರಿ ಕೆಲಸ ಮಾಡುತ್ತಿದೆ. ಜನರ ಆರೋಗ್ಯ ರಕ್ಷಣೆಗೆ ಆಧ್ಯತೆ ನೀಡಿ ಕೆಲಸ ಮಾಡುತ್ತಿರುವ ಯುವ ಮೋರ್ಚಾ ಸಮಾಜದ ಕಟ್ಟ ಕಡೆಯ ಜನರ ಕಣ್ಣೀರು ಒರೆಸುವ ಕೆಲಸ ಮಾಡುತ್ತಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಯುವ ಮೋರ್ಚಾ ಜಿಲ್ಲಾಧ್ಯಕ್ಷ ಗುರುದತ್ತ್ ನಾಯಕ್ ಮಾತನಾಡಿ, ಪ್ರಧಾನಿ ಮೋದಿಯವರ ಹುಟ್ಟು ಹಬ್ಬದ ಸೇವಾ ಸಪ್ತಾಹದ ಅಂಗವಾಗಿ ರಕ್ತದಾನ ಶಿಬಿರವು ಜಿಲ್ಲೆಯಲ್ಲಿ ಎರಡನೇ ಕಾರ್ಯಕ್ರಮವಾಗಿದೆ. ಜನರ ಆರೋಗ್ಯದ ರಕ್ಷಣೆಗಾಗಿ ಆಯುಷ್ಮಾನ್ ಕಾರ್ಡ್ ನೋಂದಣಿ ಹಾಗೂ ರಕ್ತದಾನ ಶಿಬಿರದ ಕಾರ್ಯವನ್ನು ಕೈಗೊಂಡಿರುವ ಯುವ ಮೋರ್ಚಾ ಮುಂದಿನ ದಿನಗಳಲ್ಲಿ ದೇಶದ ಸ್ವಾಸ್ಥ್ಯಕ್ಕಾಗಿ ಮತದಾರರ ಪಟ್ಟಿಗೆ ಸೇರ್ಪಡೆ ಕಾರ್ಯವನ್ನು ಯುವ ಮೋರ್ಚಾದಿಂದ ಹಮ್ಮಿಕೊಳ್ಳಲಾಗುವುದು. ದ.ಕ ಜಿಲ್ಲೆಯನ್ನು ಡ್ರಗ್ಸ್ ಮುಕ್ತ ಜಿಲ್ಲೆಯಾಗಿ ಘೋಷಣೆ ಮಾಡುವುದು ಹಾಗೂ ಅನೈತಿಕ ಚಟುವಟಿಕೆಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ರಾಜ್ಯಾಧ್ಯಕ್ಷ ಕಾನೂನಾತ್ಮಕ ಹೋರಾಟಕ್ಕೂ ಯುವ ಮೋರ್ಚಾ ಶಕ್ತಿ ತುಂಬುವ ಕೆಲಸ ಮಾಡಲಿದೆ ಎಂದರು.

ಜಿಲ್ಲಾ ಉಪಾಧ್ಯಕ್ಷ ಬೂಡಿಯಾರ್ ರಾಧಾಕೃಷ್ಣ ರೈ, ರಾಜ್ಯ ಎಸ್.ಟಿ ಮೋರ್ಚಾದ ಉಪಾಧ್ಯಕ್ಷ ಮಂಜುನಾಥ ಎನ್.ಎಸ್., ತಾ.ಪಂ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್, ಕಾರ್ಯದರ್ಶಿ ಜಯಂತಿ ನಾಯಕ್, ಯುವ ಮೋರ್ಚಾದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸೂರಜ್ ಜೈನ್, ಉಪಾಧ್ಯಕ್ಷ ಸಹಜ್ ರೈ ಬಳಜ್ಜ, ಗ್ರಾಮಾಂತರ ಮಂಡಲದ ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ ಮುಂಗ್ಲಿಮನೆ, ಉಪಾಧ್ಯಕ್ಷ ಮುಕುಂದ ಬಜತ್ತೂರು, ಸುಳ್ಯ ಮಂಡಲದ ಅಧ್ಯಕ್ಷ ಕೃಷ್ಣ ಮಣಿಪ್ಪಾಡಿ, ಕಾರ್ಯದರ್ಶಿ ರಾಕೇಶ್ ರೈ ಕೆಡೆಂಜಿ, ನಗರ ಮಂಡಲದ ಅಧ್ಯಕ್ಷ ಪಿ.ಜಿ ಜಗನ್ನಿವಾಸ ರಾವ್, ಕಾರ್ಯದರ್ಶಿಗಳಾದ ಯುವರಾಜ ಪೆರಿಯತ್ತೋಡಿ, ಜಯಶ್ರೀ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಗೌರವಾರ್ಪಣೆ:
ರೋಟರಿ ಕ್ಯಾಂಪ್ಕೋ ಬ್ಲಡ್ ಬ್ಯಾಂಕ್ ವೈದ್ಯಾಧಿಕಾರಿ ರಾಮಚಂದ್ರ ಭಟ್‌ರವರನ್ನು ಇದೇ ಸಂದರ್ಭದಲ್ಲಿ ಗೌರವಿಸಲಾಯಿತು. ರಕ್ತದಾನ ಮಾಡಿದ ೧೦ ಮಂದಿಗೆ ಸಾಂಕೇತಿಕವಾಗಿ ಅಭಿನಂದನಾ ಪತ್ರವನ್ನು ವಿತರಿಸಲಾಯಿತು.

ಯುವ ಮೋರ್ಚಾ ಗ್ರಾಮಾಂತರ ಮಂಡಲದ ಅಧ್ಯಕ್ಷ ನವೀನ್ ಪಡ್ನೂರು ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ರೈತನ್ ರೈ ಕುಂಬ್ರ, ಶವಿನ್ ಬಿ.ಎಸ್, ಜಿಲ್ಲಾಕಾರ್ಯದರ್ಶಿ ಯತೀಶ್ ಶೆಟ್ಟಿ, ಸುಧಾಕರ ಧರ್ಮಸ್ಥಳ, ಕಿರಣ್ ಶಂಕರ ಮಲ್ಯ, ಆದೇಶ್ ಶೆಟ್ಟಿ, ವಿಜೇತ್, ತೇಜಸ್, ಮೋಕ್ಷಿತ್, ನಿತೇಶ್ ಕಬಕ, ಸುನೀಲ್ ಕೇರ್ಪಳ, ಪ್ರಮೋದ್ ಸಾಲ್ಯಾನ್, ಶ್ರೀಕಾಂತ್ ಕಾವು, ವಿಘ್ನೇಶ್, ಶಿಶಿರ್ ಪೆರ್ವೋಡಿ, ಚರಣ್ ಕುಮಾರ್ ಪ್ರಕಾಶ್ ಕೆದಿಲ ಅತಿಥಿಗಳನ್ನು ಹೂ ನೀಡಿ ಶಾಲು ಹಾಕಿ ಸ್ವಾಗತಿಸಿದರು. ಯುವ ಮೋರ್ಚಾದ ಪ್ರಧಾನ ಕಾರ್ಯದರ್ಶಿ ರತನ್ ರೈ ಕುಂಬ್ರ ಅಭಿನಂದನಾ ಪತ್ರ ವಾಚಿಸಿದರು. ರಾಜ್ ಗಣೇಶ್ ಕಾಮತ್ ಕಾರ್ಯಕ್ರಮ ನಿರೂಪಿಸಿ, ನಗರ ಮಂಡಲ ಯುವ ಮೋರ್ಚಾದ ಅಧ್ಯಕ್ಷ ಸಚಿನ್ ಶೆಣೈ ವಂದಿಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.