HomePage_Banner
HomePage_Banner
HomePage_Banner
HomePage_Banner
HomePage_Banner
HomePage_Banner

ಪುತ್ತೂರಿನಲ್ಲಿ ಮರಿಯಂ ಟ್ರೇಡರ್ಸ್ ಶುಭಾರಂಭ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಇಲ್ಲಿನ ಎಂ.ಟಿ ರಸ್ತೆಯಲ್ಲಿರುವ ಚರ್ಚ್ ಬಿಲ್ಡಿಂಗ್‌ನಲ್ಲಿ ನೂತವಾಗಿ ಪ್ರಾರಂಭಿಸಲಾದ ಗೃಹೋಪಯೋಗಿ ವಸ್ತುಗಳ ಮಳಿಗೆಯಾದ `ಮರಿಯಂ ಟ್ರೇಡರ್ಸ್’ ಸೆ.21ರಂದು ಶುಭಾರಂಭಗೊಂಡಿದೆ.

ಸಾಲ್ಮರ ಸಯ್ಯದ್ ಶರಪುದ್ದೀನ್ ತಂಙಳ್‌ರವರು ದುಆ ಆಶೀರ್ವಾಚನ ನೀಡುವ ಮೂಲಕ ಸಂಸ್ಥೆಯಲ್ಲು ಉದ್ಘಾಟಿಸಿ ಶುಭಹಾರೈಸಿದರು. ಇದೇ ಸಂದರ್ಭದಲ್ಲಿ ಸಿಟಿ ಬಝಾರ್‌ ಕಾಂಪ್ಲೆಕ್ಸ್‌ ನಲ್ಲಿ ನೂತನವಾಗಿ ಪ್ರಾರಂಭಗೊಂಡ ಮರಿಯಂ ಟ್ರೇಡರ್ಸ್‌ ನ ಇನ್ನೊಂದು ಸಂಸ್ಥೆಯನ್ನು  ಪುತ್ತೂರು ಮಾಯಿದೆ ದೇವುಸ್ ಚರ್ಚ್‌ನ ಪ್ರಧಾನ ಧರ್ಮಗುರು ರೆ.ಫಾ. ಲೋರೆನ್ಸ್ ಮಸ್ಕರೇನಸ್ ರವರು ಉದ್ಘಾಟಿಸಿ ಮಾತನಾಡಿ ಇಲ್ಲಿ ಶುಭಾರಂಭಗೊಂಡ ಮರಿಯಂ ಟ್ರೇಡರ್ಸ್‌ ಸಂಸ್ಥೆ ಉತ್ತಮ ಸಂಸ್ಥೆಯಾಗಿ ಮೂಡಿಬರಲಿ ಎಂದ ಅವರು ಪುತ್ತೂರಿನಲ್ಲಿ ಗ್ರಾಹಕರಿಗೆ ಇನ್ನಷ್ಟು ಸವಲತ್ತನ್ನು ನೀಡುವಂತಾಗಲಿ ದೇವರ ದಯದಿಂದ ಸಂಸ್ಥೆಯು ಉತ್ತುಂಗಕ್ಕೆ ಏರಲಿ ಎಂದು ಹಾರೈಸಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ ಅನ್ಸಾರುದ್ದೀನ್ ಎಜ್ಯುಕೇಶನ್ ಟ್ರಸ್ಟ್‌ನ ಅಧ್ಯಕ್ಷ ಕೆ.ಪಿ.ಅಹಮ್ಮದ್ ಹಾಜಿ ಆಕರ್ಷನ್‌ರವರು ಮಾತನಾಡಿ ಕೇಂದ್ರವಾಗಿ ಬೆಳೆಯುತ್ತಿರುವ ಪುತ್ತೂರಿಗೆ ಮರಿಯಂ ಟ್ರೇಡರ್‍ಸ್‌ನಂತಹ ಸಂಸ್ಥೆಗಳು ಪೂರಕವಾಗಿದೆ. ನಂಬಿಕೆ ಮತ್ತು ಶುದ್ದ ಮನಸ್ಸಿನಿಂದ ಕೂಡಿದ ವ್ಯಾಪಾರವು ವೃದ್ಧಿಗೊಳ್ಳುತ್ತದೆ ಮತ್ತು ಗ್ರಾಹಕರು ಸಂತೃಪ್ತಿಗೊಳ್ಳುತ್ತಾರೆ ಎಂದು ಅವರು ಹೇಳಿದರು. ಸಿಟಿ ಹಸನ್ ಹಾಜಿಯವರು ಗ್ರಾಹಕರಿಗೆ ಸಕಲ ಸೌಲಭ್ಯ ಒದಗಿಸಲು ಇಂತಹ ಸಂಸ್ಥೆ ಪ್ರಾರಂಭಿಸಿದ್ದು, ಸಂಸ್ಥೆಯು ಯಶಸ್ವಿಯಿಂದ ಕೂಡಿರಲಿ ಎಂದು ಹಾರೈಸಿದರು. 

ಇನ್ನೋರ್ವ ಮುಖ್ಯ ಅತಿಥಿಗಳಾಗಿ ಆಗಮಿಸಿದ ಅಶ್ವಿನಿ ಹೊಟೇಲ್ ಮಾಲಕ ಎನ್.ಕರುಣಾಕರ ರೈ ದೇರ್ಲರವರು ಮಾತನಾಡಿ ಸಿಟಿ ಹಸನ್ ಹಾಜಿ ಮಾಲಕತ್ವದಲ್ಲಿ ಪ್ರಾರಂಭಗೊಂಡ ಮರಿಯಂ ಟ್ರೇಡರ್ಸ್ ಸಂಸ್ಥೆಯು  ಗ್ರಾಹಕರನ್ನು ಆಕರ್ಷಿಸುವಂತಾಗಲಿ ಮತ್ತು ಉತ್ತಮ ವ್ಯಾಪಾರ ಹೊಂದಿ ಯಶಸ್ವಿಗೊಳ್ಳಲಿ ಎಂದು ಹಾರೈಸಿದರು. ಪುತ್ತೂರು ಅನ್ಸಾರುದ್ದೀನ್ ಜಮಾಅತ್ ಕಮಿಟಿ ಅಧ್ಯಕ್ಷ ಎಲ್.ಟಿ.ಅಬ್ದುಲ್ ರಜಾಕ್ ಹಾಜಿ ಮಾತನಾಡಿ ಮರಿಯಂ ಟ್ರೇಡರ್‍ಸ್ ಸಂ‍ಸ್ಥೆ ಅಭಿವೃದ್ಧಿ ಹೊಂದಿ ಬೆಳೆಯುತ್ತಿರುವ ಪುತ್ತೂರಿಗೆ ಶೋಭೆ ತರುವಂತಾಗಲಿ ಎಂದು ಹೇಳಿದರು. ಸಿಟಿ ಹಸನ್ ಹಾಜಿಯವರ ಸೇವೆ ಶ್ಲಾಘನೀಯವಾಗಿದೆ. ಅವರ ಉದಾತ ಮನಸ್ಸಿನಿಂದ ಶುಭಾರಂಭಗೊಂಡ ಈ ಸಂಸ್ಥೆ ಉತ್ತರೋತ್ತರವಾಗಿ ಬೆಳೆಯಲ್ಲಿ ಎಂದರು. 

ಪುತ್ತೂರು ಸೌಹಾರ್ದ ಸೊಸೈಟಿಯ ಅಕ್ಕರಿ ರೈರವರು ಮಾತನಾಡಿ ಪ್ರಾಮಾಣಿಕತೆ, ಶ್ರದ್ದೆ, ಸೇವೆಯಿಂದ ಗ್ರಾಹಕರು ಸಂತೃಪ್ತಿಗೊಳ್ಳುತ್ತಾರೆ. ಇಂತಹ ಶುದ್ದ ಮನಸ್ಸುಹೊಂದಿರುವ ಸಿಟಿ ಹಸನ್ ಹಾಜಿಯವರ ಸೇವೆ ಶ್ಲಾಘನೀಯ ಮರಿಯಂ ಟ್ರೇಡರ್ಸ್‌ ಗ್ರಾಹಕರ ಮೆಚ್ಚುಗೆ ಗಳಿಸುವಂತಾಗಬೇಕು ಎಂದರು.

ನಿವೃತ ಶಿಕ್ಷಣ ತಜ್ಞ ಈಶ್ವರ ಭಟ್ ಅವರು ಮಾತನಾಡಿ ಸಿಟಿ ಹಸನ್ ಹಾಜಿ ಅವರು ಪರೋಪಕಾರಿಯಾಗಿದ್ದು, ಶ್ರದ್ಧೆ ನಿಷ್ಟೆಯ ಮೂಲಕ ವ್ಯಾಪಾರ ಧರ್ಮ ಪಾಲಿಸಿಕೊಂಡು ಬಂದವರಾಗಿದ್ದಾರೆ. ಇಂತಹ ಸೇವೆ ಮೂಲಕ ಜನಪ್ರೀಯರಾಗಿರುವ ಇವರು ಮರಿಯಂ ಟ್ರೇಡರ್ಸ್ ಸಂಸ್ಥೆಯನ್ನು ಪ್ರಾರಂಭಿಸಿದ್ದು ಈ ಸಂಸ್ಥೆ ಎಲ್ಲರ ಮೆಚ್ಚುಗೆಯ ಸಂಸ್ಥೆಯಾಗಿ ಬೆಳೆಯಲಿ ಎಂದರು.

ವೇದಿಕೆಯಲ್ಲಿ ಪುತ್ತೂರು ಬದ್ರಿಯಾ ಮಸೀದಿ ಖತೀಬ್ ಮೊದು ಫೈಝಿ ಕೊಡಗು, ಪುತ್ತೂರು ಚರ್ಚ್‌ ನ ಸಹಾಯಕ ಧರ್ಮಗುರು ರೆ|ಫಾ| ಲ್ಯಾರಿ ಪಿಂಟೊ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಪೌರಾಯುಕ್ತೆ ರೂಪಾ ಶೆಟ್ಟಿ,ಜಿಲ್ಲಾ ವಕ್ಫ್‌ ನ ಮಾಜಿ ಸದಸ್ಯ ಯುನಿಟಿ ಹಸನ್‌ ಹಾಜಿ, ಯಾಕೂಬ್‌ ಹಾಜಿ ದರ್ಬೆ, ಅನ್ವರ್ ಸಾದಿಕ್‌ ಮುಸ್ಲಿಯಾರ್‌,  ಅಬ್ದುಲ್ ರಹಿಮಾನ್ ಅರಮನೆ, ಉಮ್ಮರ್ ಕರಾವಳಿ, ಉಮ್ಮರ್ ಹಾಜಿ ಶೀತಲ್, ಉಬೈದು ಹಾಜಿ, ಹಾರೀಸ್ ಸುಳ್ಯ, ಮುಪತ್ತೀಸ್ ಉಮ್ಮರ್ ದಾರಿಮಿ,  ಕೆ.ಎಮ್.ಭಾವ ಹಾಜಿ ಕೂರ್ನಡ್ಕ, ಹಮೀದ್ ಕಟ್ಲೇರಿ, ಬಾವು ಕಟ್ಲೇರಿ, ಶರಿಪ್ ಕಟ್ಲೇರಿ, ಅಶ್ರಫ್‌ ಕಟ್ಲೆರಿ, ಸಂಶುದ್ದಿನ್ ಹಾಜಿ, ಜಮಾಲ್ ಬಪ್ಪಳಿಗೆ, ಫರೀದ್, ಅಬ್ದುಲ್ ಕರೀಮ್ ದಾರಿಮಿ ಬೊಳುವಾರು, ಮೊಹಮ್ಮದ್ ಬ್ಯಾರಿ, ಇಬಾಝ್ ಬನ್ನೂರು, ಅಬ್ದುಲ್ ಖರೀಮ್‌, ಅಬ್ದುಲ್‌ ಲತೀಫ್‌ ಆಕಾಶ್‌ ಫೂಟ್‌ ವೇರ್‌, ಶ್ರೀದರ ಆಚಾರ್ಯ ಕೊಕ್ಕಡ, ಅಬ್ದುಲ್‌ ರೆಹಮಾನ್‌ ಕಬಕ, ಹಾರಾಡಿ ಸಿ ಆರ್‌ ಪಿ ಸ್ಟ್ಯಾನಿ ಪ್ರವೀಣ್‌, ಸಿ ಎಲ್‌ ಸಿ ಅಧ್ಯಕ್ಷ ಮಾರ್ಟಿನ್‌ ಡಿಸೋಜ, ಲತೀಫ್‌ ಎಂಪವರ್‌, ಸಾಧಿಕ್‌ ಸುರಯ್ಯ, ರಫೀಕ್‌ ಹಾಝಿ ಕೊಡಾಜೆ, ರಫೀಕ್‌ ಹಾಜಿ ಸುಲ್ತಾನ್‌, ಅಶ್ರಫ್‌ ಕಲ್ಲೇಗ, ಕೂರ್ನಡ್ಕ ಮಸೀದಿ ಅಧ್ಯಕ್ಷ ಕೆ ಹೆಚ್‌ ಖಾಸಿಂ ಹಾಜಿ, ಮಹಮ್ಮದ್‌ ಶಮೀಲ್‌ ಸಿಟಿ ಬಜಾರ್ ಮೊದಲಾವವರು ಉಪಸ್ಥಿತರಿದ್ದರು. ಕೆ.ಎಮ್.ಎ ಕೊಡುಂಗೈ ಸ್ವಾಗತಿಸಿ,ಕಾರ್ಯಕ್ರಮ ನಿರ್ವಹಿಸಿದರು. 

ಮರಿಯಂ ಟ್ರೇಡರ್ಸ್‌ ನ ಮ್ಹಾಲಕ ಹಸನ್ ಹಾಜಿ ಸಿಟಿ ಬಝಾರ್‌ರವರು ಮಾತನಾಡಿ ಮರಿಯಂ ಟ್ರೇಡರ್ಸ್‌ನಲ್ಲಿ ಗೃಹೋಪಯೋಗಿ ವಸ್ತುಗಳು, ಮಪ್, ವೈಪರ್, ನೆಟ್, ಟರ್ಪಾಲ್, ಕಾಂಕ್ರೀಟ್ ಬಟ್ಟಿ, ಚಾಪೆ, ಹಾಟ್ ಬಾಕ್ಸ್, ತರ್ಮಾಸ್, ಫೈಬರ್ ಕುರ್ಚಿಗಳು, ಫೈಬರ್ ಟೇಬಲ್‌ಗಳು, ಏರ್ ಕೂಲರ್, ಗ್ಲಾಸ್ ಐಟಂಗಳು ಇತ್ಯಾದಿ ವಸ್ತುಗಳು ಒಂದೇ ಸೂರಿನಡಿಯಲ್ಲಿ ಸಿಗಲಿದೆ ಎಂದು ಎಲ್ಲರ ಸಹಕಾರ ಕೋರಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.