HomePage_Banner
HomePage_Banner
HomePage_Banner
HomePage_Banner
HomePage_Banner
HomePage_Banner

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ತಾ.ಯೋಜನಾಧಿಕಾರಿ ಜನಾರ್ದನ ಜಿಲ್ಲಾ ನಿರ್ದೇಶಕರಾಗಿ ಮುಂಭಡ್ತಿ | ಪುತ್ತೂರಿಗೆ ಮೈಸೂರಿನ ಆನಂದ್

Puttur_Advt_NewsUnder_1
Puttur_Advt_NewsUnder_1

ಪುತ್ತೂರು:ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪುತ್ತೂರು ತಾಲೂಕು ಯೋಜನಾಧಿಕಾರಿಯಾಗಿದ್ದ ಜನಾರ್ದನ ಎಸ್‌ರವರು ಜಿಲ್ಲಾ ನಿರ್ದೇಶಕರಾಗಿ ಪದೋನ್ನತಿ ಪಡೆದು ದಾವಣಗೆರೆ ಜಿಲ್ಲೆಗೆ ವರ್ಗಾವಣೆಗೊಂಡಿರುತ್ತಾರೆ. ತಾಲೂಕು ಯೋಜನಾಧಿಕಾರಿಯಾಗಿ ಮೈಸೂರಿನಲ್ಲಿ ಯೋಜನಾಧಿಕಾರಿಯಾಗಿದ್ದ ಬೆಳ್ತಂಗಡಿ ತಾಲೂಕಿನ ನಿಡ್ಲೆ ನಿವಾಸಿ ಆನಂದ ಕೆ.ಯವರು ವರ್ಗಾವಾಣೆಗೊಂಡಿರುತ್ತಾರೆ.

ಜನಾರ್ದನ

ಬೆಳ್ತಂಗಡಿ ತಾಲೂಕು ಕಳೆಂಜ ಗ್ರಾಮದ ಬೀಜದಪಳಿಕೆ ನಿವಾಸಿಯಾಗಿರುವ ಜನಾರ್ದನರವರು ೨೦೧೮ರಿಂದ ಪುತ್ತೂರು ತಾಲೂಕು ಯೋಜನಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿರುತ್ತಾರೆ. ಒಟ್ಟು ೧೯ ವರ್ಷಗಳ ಕಾಲ ಗ್ರಾಮಾಭಿವೃದ್ಧಿ ಯೋಜನೆಯಲ್ಲಿ ಕರ್ತವ್ಯ ನಿರ್ವಹಿಸಿರುವ ಜನಾರ್ದನರವರು ಸೇವಾನಿರತ, ಲೆಕ್ಕಪರಿಶೋಧಕ, ಮೇಲ್ವಿಚಾರಕ ಹಾಗೂ ಯೋಜನಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿರುತ್ತಾರೆ. ಕಳೆದ ೯ ವರ್ಷಗಳಿಂದ ಯೋಜನಾಧಿಕಾರಿಯಾಗಿ ಚಿತ್ರದುರ್ಗ ಜಿಲ್ಲೆಯ ಪಲಾಲ್‌ಕೆರೆ, ದಾವಣಗೆರೆ ಜಿಲ್ಲೆಯ ಚೆನ್ನಗಿರಿ ಹಾಗೂ ಪುತ್ತೂರಿನಲ್ಲಿ ಕರ್ತವ್ಯ ನಿರ್ವಹಿಸಿರುತ್ತಾರೆ. ಸಂಘ ರಚನೆ, ಪ್ರಗತಿನಿಧಿ ವಿತರಣೆ, ಪ್ರಗತಿನಿಧಿ ಹೊರಬಾಕಿ ಮೊತ್ತ, ಕಂತು ಬಾಕಿ, ಮೈಕ್ರೋ ಬಚತ್ ಹಾಗೂ ಯೋಜನೆಯ ಇತರ ಕಾರ್ಯಕ್ರಮಗಳ ಗುರಿ ಸಾಧನೆಗಾಗಿ ಜಿಲ್ಲಾ ಅತ್ಯುತ್ತಮ ಯೋಜನಾಧಿಕಾರಿ ಕಚೇರಿ ಪುರಸ್ಕಾರಕ್ಕೆ ಪಾತ್ರರಾಗಿದ್ದರು.

ಆನಂದ್‌ ಕೆ

ಪುತ್ತೂರಿಗೆ ಆನಂದ ಕೆ:
ಜನಾರ್ದನ ಎಸ್‌ರವರ ವರ್ಗಾವಣೆಯಿಂದ ತೆರವಾದ ಸ್ಥಾನಕ್ಕೆ ಮೈಸೂರಿನಲ್ಲಿ ಯೋಜನಾಧಿಕಾರಿಯಾಗಿದ್ದ ಬೆಳ್ತಂಗಡಿ ತಾಲೂಕಿನ ನಿಡ್ಲೆ ನಿವಾಸಿ ಆನಂದ ಕೆಯವರು ವರ್ಗಾವಣೆಗೊಂಡಿರುತ್ತಾರೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

1 Comment

  1. ಪ್ರಕಾಶ್

    ಅತ್ಯುತ್ತಮ ಯೋಜನಾ ಕಚೇರಿ ಪುರಸ್ಕಾರ ಇರಬೇಕು. ಯೋಜನಾಧಿಕಾರಿ ಕಚೇರಿ ಅಲ್ಲ ಅನ್ಸುತ್ತೆ..

    Reply

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.